ಚಿಕ್ಕೋಡಿ: ನಿಪ್ಪಾಣಿ ಗ್ರಾಮೀಣ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಸುಮಾರು 41 ಮೋಟಾರ್ ಬೈಕ್ ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ನಿಪ್ಪಾಣಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ನಿಪ್ಪಾಣಿ ತಾಲ್ಲೂಕಿನ ಕುರ್ಲಿ ಗ್ರಾಮದ ಯುವರಾಜ ಸಂಜಯ ಪವಾರ, ವಿನಾಯಕ ತಾನಾಜಿ ಕವಾಳೆ,ಹದನಾಳ ಗ್ರಾಮದ ದಯಾನಂದ ಶಂಬಾಜಿ ಶೆಟಕ್ಕೆ ,ತಾನಾಜಿ ಶಂಬಾಜಿ ಶೆಟಕ್ಕೆ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಅಂದಾಜು ಒಟ್ಟು ಮೌಲ್ಯ 24.60 ಲಕ್ಷ ರೂ ಮೌಲ್ಯದ 41 ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್: ವನಿತಾ ಕ್ರಿಕೆಟ್ ಪಾಕಿಸ್ಥಾನವನ್ನು ಕೆಡವಿದ ಭಾರತ
ಕರ್ನಾಟಕ ರಾಜ್ಯದ 36 ಹಾಗೂ 5 ಮಹಾರಾಷ್ಟ್ರ ರಾಜ್ಯದ ಪಾಸಿಂಗ್ ಹೊಂದಿರುವ ಬೈಕ್ ಗಳನ್ನು ನಿಪ್ಪಾಣಿ ಗ್ರಾಮೀಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ನೇತೃತ್ವದಲ್ಲಿ ಡಿವೈಎಸ್ ಪಿ ಬಸವರಾಜ ಯಲಿಗಾರ, ಸಿಪಿಐ ಸಂಗಮೇಶ ಶಿವಯೋಗಿ ಹಾಗೂ ಪಿಎಸ್ ಐ ಅನೀಲ ಕುಂಬಾರ ಹಾಗೂ ಸಿಬಂದಿ ವರ್ಗ ಕಾರ್ಯಚರಣೆ ನಡೆಸಿ ಬೈಕ್ ಗಳನ್ನು ಮತ್ತು ಆರೋಪಿಗಳನ್ನುಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.