ನವದೆಹಲಿ: ದೆಹಲಿಯ ರಸ್ತೆಗಳಿಗೆ ಬೈಕ್ ಟ್ಯಾಕ್ಸಿಗಳು ಪುನಃ ಕಾಲಿಡುವ ನಿಟ್ಟಿನಲ್ಲಿ “ಮೋಟಾರ್ ವೆಹಿಕಲ್ ಅಗ್ರಗೇಟರ್ ಯೋಜನೆ-2023’ಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಅನುಮೋದನೆ ನೀಡಿದ್ದಾರೆ.
ಇದರಿಂದ ಬಾಡಿಗೆ ಆಧಾರದಲ್ಲಿ ಬೈಕ್ ಟ್ಯಾಕ್ಸಿಗಳನ್ನು ಓಡಿಸಬಹುದಾಗಿದೆ. ಆದರೆ ಎಲೆಕ್ಟ್ರಿಕ್ ಬೈಕ್‌ಗಳಿಗೆ ಮಾತ್ರ ಇದಕ್ಕೆ ಅವಕಾಶ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಈ ಕುರಿತ ಕರಡು ಪ್ರತಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ಕಚೇರಿಗೆ ಕಳುಹಿಸಲಾಗಿದೆ.
ಇದಕ್ಕೆ ಅಂತಿಮ ಅನುಮೋದನೆ ದೊರೆಯುವ ಮೊದಲು ಸಾರಿಗೆ ಇಲಾಖೆಯಿಂದ ಈ ಕುರಿತು ಸಾರ್ವಜನಿಕರ ಆಕ್ಷೇಪ ಮತ್ತು ಪ್ರತಿಕ್ರಿಯೆಗಳನ್ನು ಕೋರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.