Advertisement

ಬೈಕ್‌ -ರಿಕ್ಷಾ ಢಿಕ್ಕಿ: ಮೂವರಿಗೆ ಗಾಯ

11:28 AM May 12, 2019 | keerthan |

ಪುಂಜಾಲಕಟ್ಟೆ: ಟ್ರಾಫಿಕ್‌ ಪೊಲೀಸರ ತಪಾ ಸಣೆ ವೇಳೆ ಬೈಕ್‌ ಸವಾರನೊಬ್ಬ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಘಟನೆ ಶನಿವಾರ ಮಧ್ಯಾಹ್ನ ಬಿ.ಸಿ.ರೋಡಿನ ಉದಯ ಲಾಂಡ್ರಿ ಮುಂಭಾಗದ ಹೆದ್ದಾರಿಯಲ್ಲಿ ಸಂಭವಿಸಿದೆ. ಪರಿಣಾಮ ಬೈಕ್‌ ಸವಾರ ಶರೀಫ್‌ (20) ಸಹಿತ ಮೂವರು ಗಾಯಗೊಂಡಿದ್ದಾರೆ.

Advertisement

ಬೈಕ್‌ ಸವಾರ ಶರೀಫ್‌ ಸ್ಥಳೀಯ ನಿವಾಸಿಯಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕ ಐವನ್‌ ವಿನ್ಸೆಂಟ್‌ ಡಿ’ ಸೋಜಾ (43) ಮತ್ತು ಆಲೀಸ್‌ ಡಿ’ ಸೋಜಾ (72) ಗಾಯಗೊಂಡಿದ್ದಾರೆ. ಆಟೋದಲ್ಲಿದ್ದ ಮತ್ತೋರ್ವ ಮಹಿಳೆ ಪಾರಾಗಿದ್ದಾರೆ.

ಸರ್ವಿಸ್‌ ರಸ್ತೆ ಹೆದ್ದಾರಿ ಸೇರುವಲ್ಲಿ ಬಂಟ್ವಾಳ ಟ್ರಾಫಿಕ್‌ ಪೊಲೀಸರ ತಂಡ ವಾಹನಗಳನ್ನು ನಿಲ್ಲಿಸಿ, ತಪಾಸಣೆ ನಡೆಸು ತ್ತಿದ್ದರು. ಫ್ಲೆ$çಓವರ್‌ನಿಂದ ವಾಹನಗಳು ಎಂದಿ ನಂತೆ ವೇಗದಲ್ಲಿ ಇಳಿಯುವ ಸಂದರ್ಭ ಪೊಲೀಸರು ತಪಾಸಣೆ ಗೆಂದು ನಿಲ್ಲಿಸುತ್ತಾರೆ. ಈ ಸಂದರ್ಭ ವಾಹನಗಳು ಎಡಕ್ಕೆ ನಿಲ್ಲಬೇಕಿದ್ದು, ಅದರ ಹಿಂದೆ ಇರುವ ವಾಹನಗಳೂ ವೇಗ ನಿಯಂತ್ರಿಸುವ ಸಂದರ್ಭ ಗೊಂದಲ ಕ್ಕೊಳಗಾಗುತ್ತಾರೆ.

ಫ್ಲೈಓವರ್‌ ಇಳಿಯುವ ಜಾಗದಲ್ಲೇ ಪೊಲೀಸರು ತಪಾಸಣೆ ನಿರತರಾಗಿದ್ದಾಗ ಬೈಕೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತು. ರಿಕ್ಷಾವು ಮೇಲ್ಸೇತುವೆಯ ತಡೆಗೋಡೆಗೆ ಬಡಿದು ಉರುಳಿ ಬಿದ್ದಿದ್ದು, ಎರಡೂ ವಾಹನಗಳು ನಜ್ಜುಗುಜ್ಜಾದವು.

ಸಾರ್ವಜನಿಕರ ಆಕ್ರೋಶ
ಕೂಡಲೇ ಸಾರ್ವಜನಿಕರು ಜಮಾಯಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಎಲ್ಲೆಂದರಲ್ಲಿ ವಾಹನ ತಪಾಸಣೆ ಮಾಡುವುದೇ ಇಂಥ ಅಪಘಾತಗಳಿಗೆ ಕಾರಣ ಎಂದು ಆರೋಪಿಸಲಾಗುತ್ತಿದೆ.

Advertisement

ತಪ್ಪಿಸಿಕೊಳ್ಳಲೆತ್ನಿಸಿದ್ದು ಕಾರಣ: ಎಸ್‌ಐ
ಹೆಲ್ಮೆಟ್‌ ಧರಿಸದೆ ಬೈಕ್‌ ಚಲಾಯಿಸುತ್ತಿದ್ದ ಶರೀಫ್‌ ವಾಹನ ತಪಾಸಣೆಯನ್ನು ಗಮನಿಸಿ ತಪ್ಪಿಸಿಕೊಳ್ಳುವ ಭರದಲ್ಲಿ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದ್ದಾನೆ. ವಾಹನ ತಪಾಸಣೆ ವೇಳೆ ಪೊಲೀಸರ ಎಡವಟ್ಟಿನಿಂದ ಅಪಘಾತ ಸಂಭವಿಸಿಲ್ಲ ಎಂದು ಬಂಟ್ವಾಳ ಟ್ರಾಫಿಕ್‌ ಠಾಣೆಯ ಎಸ್‌ಐ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next