ಧಾರವಾಡ: ಸಂಚಾರಿ ಪೊಲೀಸರಿಂದ ದ್ವಿಚಕ್ರ ವಾಹನ ಸವಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಹೆಲ್ಮೇಟ್ ವಿರೋಧಿ ಹೋರಾಟ ಸಮಿತಿ ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಸಮಿತಿ ಅಧ್ಯಕ್ಷ ಮೋಹನ ರಾಮದುರ್ಗ ಮಾತನಾಡಿ, ಅವಳಿ ನಗರದಲ್ಲಿ ಹೆಲ್ಮೇಟ್ ಕಡ್ಡಾಯ ಬೇಡ.
ನಗರ ಕೇವಲ 4 ರಿಂದ 5 ಕಿ.ಮೀ. ಮಾತ್ರ ಇದೆ. ಸಿಟಿಯಲ್ಲಿ ಯಾರು ವೇಗವಾಗಿ ವಾಹನ ಚಾಲನೆ ಮಾಡುವುದಿಲ್ಲ. ಆದ್ದರಿಂದ ಅವಳಿ ನಗರಲ್ಲಿ ಜಾರಿ ಮಾಡಿದ ಹೆಲ್ಮೇಟ್ ಕಡ್ಡಾಯ ಆದೇಶ ಪೊಲೀಸ್ ಇಲಾಖೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ನಗರದಲ್ಲಿ ಅತಿ ವೇಗದಿಂದ ಬೈಕ್ ಚಲಾಯಿಸಿ ದೊಡ್ಡ ಪ್ರಮಾಣದಲ್ಲಿ ಅಪಘಾತ ನಡೆದಿಲ್ಲ.
ಆದರೂ ಸಹ ಪೊಲೀಸ್ ಇಲಾಖೆ ಅಧಿಕಾರಿಗಳು ಮಾತ್ರ ವಾಹನ ಸವಾರರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದು, ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರ ಬದಲು ನಗರದಲ್ಲಿ ಪ್ರಮುಖ ರಸ್ತೆ ಮತ್ತು ಟ್ರಾμàಕ್ ಸಮಸ್ಯೆ ನಿವಾರಣೆ ಮಾಡುವ ಕ್ರಮ ಕೈಗೊಂಡು ನಂತರ ಹೆಲ್ಮೇಟ್ ಕಡ್ಡಾಯ ಆದೇಶ ಜಾರಿಗೊಳಿಸಲಿ ಎಂದು ಆಗ್ರಹಿಸಿದರು.
ನಗರದಲ್ಲಿ ದಿನದಿಂದ-ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗಿ ವಾಹನ ಸವಾರರಿಗೆ ಅಡೆತಡೆಯಾಗಿದ್ದು, ಅದನ್ನು ನೋಡದೆ ಕೇವಲ ದ್ವಿಚಕ್ರ ವಾಹನ ಸವಾರರ ಸುಲಿಗೆ ಪೊಲೀಸರಿಗೆ ಆಹಾರವಾಗುತ್ತಿರುವುದು ಯಾವ ನ್ಯಾಯ. ಅಧಿಕಾರಿಗಳು, ನ್ಯಾಯಾಲಯ ಹೆಲ್ಮೆಟ್ ಕಡ್ಡಾಯಗೊಳಿಸಿದೆ ಎಂದು ಹೇಳುತ್ತಿದ್ದಾರೆ.
ಕೇವಲ ದ್ವಿಚಕ್ರ ವಾಹನ ಯಾಕೆ ನಗರದಿಂದ ಹೋರಗಡೆ ಸಂಚರಿಸುವವರಿಗೋ ಹೆಲ್ಮೇಟ್ ಕಡ್ಡಾಯಗೊಳಿಸಬೇಕು ಎಂದು ಪ್ರಶ್ನಿಸಿರುವ ಪ್ರತಿಭಟನಾಕಾರರು, ಕೂಡಲೇ ಹೆಲ್ಮೆಟ್ ಕಡ್ಡಾಯ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ರೈತ ಜಿಲ್ಲಾ ಮೋರ್ಚಾ ಅಧ್ಯಕ್ಷ ಅರವಿಂದ ಏಗನಗೌಡರ, ನಾಗರಾಜ ನಾಯ್ಕ, ಶ್ರೀನಿವಾಸ ಕೋಟ್ಯಾನ, ಬಸವರಾಜ ಹೊಸಳ್ಳಿ, ರಾಕೇಶ ನಾಝರೇ, ಸಂತೋಷ ನಾಗಮ್ಮನವರ, ಸಿದ್ದು ಕಲ್ಯಾಣಶೆಟ್ಟಿ, ಸುನೀಲ ಸಂಡೋರ ಇದ್ದರು.