Advertisement

ಲಕ್ಷ್ಮೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬೈಕ್‌ ರ್ಯಾಲಿ

02:26 PM May 24, 2019 | Team Udayavani |

ಲಕ್ಷ್ಮೇಶ್ವರ: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಹುಮತ ಗಳಿಸುತ್ತಿದ್ದಂತೆ ಕಾರ್ಯಕರ್ತರು ಪರಸ್ಪರ ಬಣ್ಣ ಎರಚಿ, ಪಟಾಕಿ ಸಿಡಿಸಿ, ಬೈಕ್‌ ರ್ಯಾಲಿ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು.

Advertisement

ಬಿಜೆಪಿ ಬಾವುಟ, ಕೇಸರಿ ಧ್ವಜ ಹಿಡಿದ ಕಾರ್ಯಕರ್ತರು ಹರ್‌ ಹರ್‌ ಮೋದಿ.. ಘರ್‌ ಘರ್‌ ಮೋದಿ.. ಎಂಬ ಘೋಷಣೆ ಕೂಗಿದರು. ಕಾರ್ಯಕರ್ತರ ಸಂಭ್ರಮಕ್ಕೆ ತುಂತುರು ಮಳೆ ಶುಭ ಹಾರೈಸಿತು.

ಮೋದಿ ಮುಖವಾಡ ಹಾಗೂ ಕಮಲದ ಚಿಹ್ನೆ ಬರೆಯಿಸಿಕೊಂಡು ಕಾರ್ಯಕರ್ತರು ಸಂಭ್ರಮಿಸಿದರು. ನಗರ ಬಿಜೆಪಿ ಘಟಕದ ಕಾರ್ಯದರ್ಶಿ ದುಂಡೇಶ ಕೊಟಗಿ ತಲೆ ಹಿಂಬದಿ ಕೂದಲದಲ್ಲಿಯೇ ಬಿಜೆಪಿ ಎಂದು ಚಿತ್ರಿಸಿಕೊಂಡಿದ್ದರು. ಬಿಜೆಪಿ ಕಾರ್ಯಕರ್ತರು ಫಲಿತಾಂಶ ತಿಳಿಯಲು ಅಲ್ಲಲ್ಲಿ ಬಯಲಿನಲ್ಲಿಯೇ ಟಿ.ವಿ ವ್ಯವಸ್ಥೆ ಮಾಡಿದ್ದರು. ಪಟ್ಟಣವಲ್ಲದೇ ಶಿಗ್ಲಿ, ಸೂರಣಗಿ, ಬಾಲೇಹೊಸೂರ, ಬಟ್ಟೂರ, ಬಡ್ನಿ, ಅಡರಕಟ್ಟಿ, ಗೊಜನೂರ, ಯಳವತ್ತಿ, ಯತ್ನಳ್ಳಿ, ಕುಂದ್ರಳ್ಳಿ, ಆದ್ರಳ್ಳಿ, ರಾಮಗೇರಿ, ಗೋವನಾಳ, ಬಸಾಪುರ, ಹರದಗಟ್ಟಿ ಸೇರಿದಂತೆ ಅನೇಕ ಕಡೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ನಗರ ಘಟಕ ಅಧ್ಯಕ್ಷ ಗಂಗಾಧರ ಮೆಣಸಿನಕಾಯಿ, ಬಸವರಾಜ ಅರಳಿ, ಅಶೋಕ ಬಟಗುರ್ಕಿ, ಮಹೇಶ ಹುಲಬಜಾರ್‌, ಪ್ರಕಾಶ ಮಾದನೂರ, ವಿಜಯ ಕುಂಬಾರ, ಬಸವರಾಜ ಚಕ್ರಸಾಲಿ, ರಾಜು ಅಂದಲಗಿ, ಅರುಣ ಪಾಟೀಲ, ಸಂಗಮೇಶ ಬೆಳವಲಕೊಪ್ಪ, ನೀಲಪ್ಪ ಹತ್ತಿ, ಗಣೇಶ ಬೇವಿನಮರದ, ಶಕ್ತಿ ಕತ್ತಿ, ವಾಸು ಬೋಮಲೆ, ಪರಶುರಾಮ ಇಮ್ಮಡಿ, ಸಮೀರ್‌ ಪ್ರಜಾರ, ಗಂಗಾಧರ ಕರ್ಜೆಕಣ್ಣವರ, ಜಹೀರ್‌ ಮೋಮಿನ್‌, ಮೆಕ್ಕಿ, ನೆರೆಗಲ್‌, ಬಸವರಾಜ ಮೆಣಸಿನಕಾಯಿ, ಚಂದ್ರು ಹಂಪಣ್ಣವರ, ನಾಗೇಶ ಅಮರಾಪುರ, ರವಿ ಕಲ್ಲೂರ ಇದ್ದರು.

ಸಂಭ್ರಮ ಇಮ್ಮಡಿಗೊಳಿಸಿದ ಗದ್ದಿಗೌಡ್ರ
ನರಗುಂದ: ಕುತೂಹಲ ಮೂಡಿಸಿದ್ದ ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಗೆಲುವು ಕಾರ್ಯಕರ್ತರ ಸಂತಸ ಇಮ್ಮಡಿಗೊಳಿಸಿದೆ. ಚುನಾವಣೆಯಲ್ಲಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಪರಾಭವಗೊಳಿಸಿದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಸತತ ನಾಲ್ಕನೇ ಬಾರಿಗೆ ಸಂಸತ್‌ ಪ್ರವೇಶಿಸಿದ್ದಾರೆ.

Advertisement

ವಿಜಯೋತ್ಸವ: ಗುರುವಾರ ಮತ ಎಣಿಕೆ ಪ್ರಾರಂಭವಾಗಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಮುನ್ನಡೆ ಸಾಧಿಸುತ್ತಿದ್ದಂತೆಯೇ ಕಾರ್ಯಕರ್ತರು ವಿಜಯೋತ್ಸವ ಆಚರಣೆಗೆ ಬೀದಿಗಿಳಿದರು. ಬಿಜೆಪಿ ಜಿಲ್ಲಾಧ್ಯಕ್ಷರೂ ಆದ ಶಾಸಕ ಸಿ.ಸಿ.ಪಾಟೀಲ ಪುತ್ರ ಮಹೇಶಗೌಡ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಯುವ ಪಡೆ
ಪಾದಯಾತ್ರೆ, ಬೈಕ್‌ ರ್ಯಾಲಿ ಮೂಲಕ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next