ಕೋಲಾರ: ಸರ್ಕಾರದ ಸೌಲಭ್ಯಗಳಿಂತ ವಂಚಿತರಾದವರಿಗೆ ಸಿಎಂಆರ್ ಸೇವಾ ಕೇಂದ್ರದಿಂದ ಸುಮಾರು 22 ಸೌಲಭ್ಯಗಳನ್ನು ಕೋಲಾರ ವಿಧಾನಸಭಾ ಕ್ಷೇತ್ರದ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾ ಇದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿ ಕೊಳ್ಳಿ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ತಿಳಿಸಿದರು.
ತಾಲೂಕಿನ ವಕ್ಕಲೇರಿ ಹೋಬಳಿಯ ತಿರುಮಲಕೊಪ್ಪ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ನಡೆಸಿ ಬೈಕ್ ಜಾಥಾ ಮೂಲಕ ಹೋಬಳಿಯ ಮನೆ ಮನೆಗೆ ಕರಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಸರಕಾರಗಳ ನಿರ್ಲಕ್ಷ್ಯದಿಂದಾಗಿ ವೃದ್ಧಾಪ್ಯ, ಪಿಂಚಣಿ ಇತ್ಯಾದಿ ಸೌಲಭ್ಯಗಾಗಿ ಕಛೇರಿಗಳಿಗೆ ಅಲೆದು ಅಲೆದು ಸಾಕಾಗಿರುವ ಸಂದರ್ಭದಲ್ಲಿ ನಿಮ್ಮ ಜೊತೆಗೆ ನಿಲ್ಲುವ ಕೆಲಸವನ್ನು ಸಿಎಂಆರ್ ಸೇವಾ ಕೇಂದ್ರ ಕೆಲಸ ಮಾಡುತ್ತಾ ಇದೆ ಎಂದರು.
ಕೋಲಾರ ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಪ್ರತಿಯೊಂದು ಮನೆಗೆ ಮಾಹಿತಿ ನೀಡುವ ಮೂಲಕ ಜನರನ್ನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಇದ್ದು ನಿಮ್ಮಗಳ ಸಲಹೆ ಸೂಚನೆಗಳ ಮೂಲಕ ನಮಗೆ ಆಶೀರ್ವಾದ ನೀಡಿದರೆ ನಿರೀಕ್ಷೆಗೆ ಮೀರಿ ನಿಮ್ಮ ಜೊತೆಗೆ ನಿಲ್ಲುತ್ತವೆ ಎಂದರು.
ಜೆಡಿಎಸ್ ಮುಖಂಡ ವಕ್ಕಲೇರಿ ರಾಮು ಮಾತನಾಡಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಕನಸು ನಾಡಿದ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದ ಪ್ರಜೆಗೂ ಸರಕಾರದ ಸೌಲಭ್ಯಗಳನ್ನು ಒದಗಿಸಬೇಕು ಎಂಬು ದು ಅದರ ಭಾಗವಾಗಿ ರೈತರ ಸಾಲಮನ್ನಾ ಮಾಡಿದ್ದು ಜೊತೆಗೆ ರೈತರ ಅಭಿವೃದ್ಧಿಯ ಕನಸನ್ನು ಇವತ್ತು ಸುಮಾರು ಸಿಎಂಆರ್ ಸೇವಾ ಕೇಂದ್ರ ಪ್ರಾರಂಭ ಮಾಡಿದ್ದರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಮಾಜಿ ತಾಪಂ ಸದಸ್ಯ ಪಾಲಾಕ್ಷಗೌಡ, ಗ್ರಾಪಂ ಉಪಾಧ್ಯಕ್ಷೆ ಚಿನ್ನಮ್ಮ, ಜೆಡಿಎಸ್ ಮುಖಂಡರಾದ ಆನಂದ್ ಕುಮಾರ್, ಮಂಜುನಾಥ್, ರಮೇಶ್, ಎಸ್. ಸುಧಾಕರ್ ಇತರರು ಇದ್ದರು.