ಕೊಳ್ಳೇಗಾಲ: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಚಲುವನಹಳ್ಳಿ ತಿರುವಿನಲ್ಲಿ ಭಾನುವಾರ ಸಂಭವಿಸಿದೆ.
ಎಮ್ಮುತ್ತೂರು ಸಮೀಪದ ಹೊಸಹಳ್ಳಿ ಮೊಳೆ ಗ್ರಾಮದ ಮಹದೇವಸ್ವಾಮಿ (60 ವ) ಎಂಬಾತನೇ ಸಾವನಪ್ಪಿದ ಬೈಕ್ ಸವಾರನಾಗಿದ್ದು ಮತ್ತೊರ್ವನ ಆರೋಗ್ಯ ಸ್ಥಿತಿ ಚಿಂತಜನಕವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿಗೆ ತೆರಳುತ್ತಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಗಾಯಾಳನ್ನು ತಮ್ಮ ಕಾರಿನಲ್ಲಿ ತಂದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ:ಟಿಕೆಟ್ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿಲ್ಲ; ನಾನು ಲಾಬಿ ಮಾಡಲ್ಲ: ಎಸ್.ಆರ್.ಪಾಟೀಲ್
Related Articles
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆಯ ಬಳಿಕ ಕಾರು ಮತ್ತು ಬೈಕ್ ವಶಪಡಿಸಿಕೊಂಡು ಪುಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.