Advertisement

Breaking News: ನೇತ್ರಾವತಿ ಸೇತುವೆ ಡಿವೈಡರ್ ಗೆ ಗುದ್ದಿದ ಬೈಕ್; ಸವಾರ ಸ್ಥಳದಲ್ಲೇ ಸಾವು

11:04 AM Jan 24, 2024 | Team Udayavani |

ಉಳ್ಳಾಲ: ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದು ಸವಾರ ಸಾವನ್ನಪ್ಪಿರುವ ಘಟನೆ ರಾ.ಹೆ. 66 ರ ನೇತ್ರಾವತಿ ಸೇತುವೆಯಲ್ಲಿ ಜ.23ರ ಮಂಗಳವಾರ ತಡರಾತ್ರಿ ವೇಳೆ ಸಂಭವಿಸಿದೆ.

Advertisement

ಬಾಗಲಕೋಟೆ ನಿವಾಸಿ ಸುರೇಶ್ (30) ಮೃತ ಸವಾರ.

ಸುರೇಶ್ ಕಲ್ಲಾಪು ಸಲಫಿ ಮಸೀದಿ ಸಮೀಪ ಕುಟುಂಬ ಸಮೇತರಾಗಿ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದರು. ಮಂಗಳೂರಿನ ಬುಲೆಟ್ ಶೋ ರೂಮ್‌ನಲ್ಲಿ ಕೆಲಸಕ್ಕಿದ್ದ ಸುರೇಶ್, ಬಳಿಕ ಪಂಪ್ವೆಲ್ ಸಮೀಪ ಗ್ಯಾರೇಜ್ ನಡೆಸುತ್ತಿದ್ದರು‌.

ನಿನ್ನೆ ರಾತ್ರಿ ಗ್ಯಾರೇಜ್ ಕೆಲಸ ಮುಗಿಸಿ ಮನೆಯತ್ತ ವಾಪಸ್ಸಾಗುತ್ತಿದ್ದ ಸಂದರ್ಭ ತಡರಾತ್ರಿ 1.30 ಗಂಟೆ ಸುಮಾರಿಗೆ ಬೈಕ್ ಡಿವೈಡರ್ ಗೆ ಬಡಿದು ತಲೆಗೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ.

ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next