ಕುಣಿಗಲ್: ಬೈಕ್ ನ ಹಿಂಬದಿಗೆ ಕ್ಯಾಟಂರ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಪಟ್ಟಣದ ಹಳೇ ರಾಷ್ಟ್ರೀಯ ಹೆದ್ದಾರಿ 48 ಕುದುರೇ ಫಾರಂ ಮುಂಭಾಗ ಶುಕ್ರವಾರ ನಡೆದಿದೆ.
ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಕೊಡ್ಲಿ ಗ್ರಾಮದ ವಾಸಿ ಮೋಹನ್ (21) ಮೃತ ಯುವಕ.
ಮೋಹನ್ ತನ್ನ ಸ್ವಗ್ರಾಮದಿಂದ ಕುಣಿಗಲ್ ತಾಲೂಕು ಅಂಚೇಪಾಳ್ಯಕ್ಕೆ ಹೋಗಿ ಸ್ನೇಹಿತನನ್ನು ಭೇಟಿಯಾಗಿ ಬರುವ ವೇಳೆ ಪಟ್ಟಣದ ಕುದುರೇ ಪಾರಂ ಮುಂಭಾಗ ಅಂಚೇಪಾಳ್ಯ ಕಡೆಯಿಂದ ಬಂದ ಕ್ಯಾಂಟರ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಮೋಹನ್ ತೀವ್ರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ತುಮಕೂರು ಖಾಸಗಿ ಆಸ್ಪತ್ರೆ ಗೆ ಕರೆದ್ಯೋಯಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಮೈಸೂರು: ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ; ಸುರಕ್ಷಿತವಾಗಿ ಬಂದ ಬಾಲಕ ಹೇಳಿದ್ದೇನು?
Related Articles
ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.