Advertisement

ಚತ್ತೀಸ್ ಗಡ : ಅಡುಗೆ ಮಾಡಲು ಹೊಗೆ ರಹಿತ ಒಲೆ ಬಳಸಿ ಮಾದರಿಯಾದ ಗ್ರಾಮಗಳು

03:32 PM Jun 11, 2021 | Team Udayavani |

ಬಿಜಾಪುರ (ಚತ್ತೀಸ್ ಗಡ) : ಗ್ರಾಮೀಣ ಭಾಗದ ಜನರಿಗೆ ಅಡುಗೆ ಮಾಡಲು ಮೂಲಭೂತವಾಗಿ ಸೌದೆಗಳನ್ನು ಬಳಕೆ ಮಾಡಿ ಉರಿಯುವ ಒಲೆಗಳು ಬೇಕೇ ಬೇಕು. ಇದರಲ್ಲಿ ಬರುವ ಹೊಗೆಯನ್ನು ಸಹಿಸಿಕೊಂಡು ಈ ಹಿಂದೆ ಮತ್ತು ಈಗಲೂ ಕೆಲವು ಹಳ್ಳಿಗಳನ್ನು ಮಹಿಳೆಯರು ಅಡುಗೆ ಮಾಡುತ್ತಾರೆ. ಆದ್ರೆ ಸದ್ಯ ಇದಕ್ಕೊಂದು ಉಪಾಯವನ್ನು ಉಡುಕಿರುವ ಚತ್ತೀಸ್ ಗಡ ಬಿಜಾಪುರವು ಎಲ್ಲರಿಗೂ ಮಾದರಿಯಾಗಿದೆ.

Advertisement

ಹೌದು ಬಿಜಾಪುರ ಜಿಲ್ಲೆಯ ಬಸ್ತಾರ್ ಪ್ರದೇಶದಲ್ಲಿ ಹೊಗೆ ರಹಿತ ಒಲೆಗಳನ್ನು ಬಳಕೆ ಮಾಡಲಾಗುತ್ತಿದ್ದು. ಸದ್ಯ ಈ ಗ್ರಾಮದಿಂದ ಸ್ಪೂರ್ತಿ ಪಡೆದ ಸುಮಾರು 12 ಗ್ರಾಮಗಳ ಜನರು ಕೂಡ ಈ ರೀತಿಯ ಹೊಗೆ ರಹಿತ, ಪರಿಸರ ಸ್ನೇಹಿ ಒಲೆಗಳನ್ನು ಬಳಕೆ ಮಾಡುತ್ತಿದ್ದಾರೆ.

ಈ ಒಲೆ ನೋಡಲು ಸ್ಟೌವ್ ರೀತಿಯಲ್ಲೇ ಇದ್ದು, ಎರಡು ಒಲೆಗಳನ್ನು ಮತ್ತು ಮೇಲೆ  ಹೊಗೆ ಹೋಗಲು ಒಂದು ಪೈಪ್ ಅನ್ನು ಹೊಂದಿದೆ. ಈ ಒಲೆ ಬಳಕೆಯಿಂದ ಕಡಿಮೆ ಸೌದೆಗಳ ಬಳಕೆಯಾಗುತ್ತದೆ. ಇದರಿಂದ ಕಾಡಿನ ನಾಶವೂ ತಪ್ಪುತ್ತದೆ ಅಂತಾರೆ ಸ್ಥಳೀಯರು.

ಈ ಪ್ರದೇಶದ ಜನರಿಗೆ ಪಿಎಂ ಉಜ್ವಲ ಯೋಜನೆಯಡಿ 48,000 ಬಡ ಕುಟುಂಬಗಳಿಗೆ ಗ್ಯಾಸ್ ಮತ್ತು ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲಾಗಿದೆ. ಆದ್ರೆ ಹದಗೆಟ್ಟ ರಸ್ತೆಗಳು ಇರುವ ಕಾರಣ ಖಾಲಿಯಾಗಿರುವ ಸಿಲಿಂಡರ್ ಗಳನ್ನು ತುಂಬಿಸುವುದು ಇಲ್ಲಿನ ಜನರಿಗೆ ಸವಾಲಾಗಿದೆ. ಆದ್ದರಿಂದ ಬಹುಪಾಲು ಬಡ ಜನರು ಒಲೆಗಳ ಮೊರೆ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next