Advertisement

ಕಿರುವೈದ್ಯರಿಂದ ಬಿಜಂಟ್ಲ ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ಶುಶ್ರೂಷೆ 

06:00 AM Jul 12, 2018 | Team Udayavani |

ಕಟಪಾಡಿ: ಕುಂಜಾರುಗಿರಿ ಶ್ರೀ ಪರಶುರಾಮ ದೇವಸ್ಥಾನದ ತಪ್ಪಲಿನಲ್ಲಿ ಇರುವ ಬಿಜಂಟ್ಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ, ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಒಟ್ಟಾರೆಯಾಗಿ ಶಾಲಾ ಪರಿಸರಕ್ಕೆ ನಿರಂತರ 8 ದಿನಗಳ ಕಾಲ ಕಿರುವೈದ್ಯರ ತಂಡವು ಶುಶ್ರೂಷೆ ನೀಡುವ ಮೂಲಕ ಶಾಲೆಯು ಉತ್ತಮವಾಗಿ ಚೇತರಿಸಿಕೊಳ್ಳುವಂತೆ ಮಾಡಿದ್ದು, ಮಕ್ಕಳು ನವೋಲ್ಲಾಸಿತರಾಗಿದ್ದಾರೆ.

Advertisement

ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ 10 ಕಿರುವೈದ್ಯರ ತಂಡವು ನೋಡಲ್‌ ಅಧಿಕಾರಿ ಡಾ| ವಿದ್ಯಾಲಕ್ಷ್ಮೀ ಕೆ.  ಅವರ ಮಾರ್ಗದರ್ಶನದಲ್ಲಿ  ನಿರಂತರ ಎಂಟು ದಿನಗಳ ಕಾಲ ಶುಶ್ರೂಷೆ ನೀಡಿದ್ದಾರೆ.

ಕಿರು ವೈದ್ಯರ ತಂಡವು ಪ್ರಥಮವಾಗಿ ಹುಲ್ಲಿನಿಂದ ಆವೃತವಾಗಿದ್ದ ಶಾಲೆಯ  ಆವರಣ ವನ್ನು ಸ್ವತ್ಛ ಮಾಡಿ ಗಿಡಗಳನ್ನು ನೆಟ್ಟು ತೋಟವನ್ನಾಗಿಸಿದ್ದಾರೆ. ಶಾಲೆ ಯಲ್ಲಿ ಉತ್ಪ‌ತ್ತಿಯಾಗುವ  ಹಸಿ ತ್ಯಾಜ್ಯ ಗಳನ್ನು ಪರಿಸರಕ್ಕೆ ಪೂರಕವಾಗಿ ನಿರ್ವಹಿಸಲು ಪೈಪ್‌ ಕಾಂಪೋಸ್ಟ್‌ ಪದ್ಧತಿ ಅಳವಡಿಸಿದ್ದು, ಸಾವಯವ ಗೊಬ್ಬರವಾಗಿ ಪರಿವರ್ತಿಸುವ ಮಹತ್ವ  ಮತ್ತು ಬಳಸುವ ವಿಧಾನದ ಬಗ್ಗೆ  ಮಕ್ಕಳಿಗೆ ಅರಿವು ಮೂಡಿಸಿದ್ದಾರೆ.

ಶಾಲೆಯ ಕೊಠಡಿಗಳ ಹೊರಭಾಗದ ಗೋಡೆಯ ಮೇಲೆ ವರ್ಲಿ ಶೆ„ಲಿಯ ಸುಂದರವಾದ ಚಿತ್ತಾರಗಳನ್ನು ಮತ್ತು ಪ್ರೇರಣಾದಾಯಿ ವ್ಯಕ್ತಿಗಳಾದ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಶ್ಚಂದ್ರ  ಬೋಸ್‌ರವರ ಭಾವಚಿತ್ರವನ್ನು ಚಿತ್ರಿಸಿದ್ದಾರೆ.

ಕಸದಿಂದ ರಸ ಎಂಬಂತೆ ನಿಷ್ಪ್ರಯೋಜಕ  ಮುರಿದ ಟೇಬಲ್‌ಗ‌ಳು ಮತ್ತು ಮರದ ತುಂಡುಗಳನ್ನು ಬಳಸಿಕೊಂಡು ಪಾದರಕ್ಷೆಗಳನ್ನಿಡಲು ಸ್ಟಾಂಡ್‌ ಮತ್ತು ನೋಟಿಸ್‌ ಬೋರ್ಡ್‌, ಸೂಚನಾ ಫಲಕ  ಮಾಡಿ ಶಾಲೆಯ ಚಿತ್ರಣಕ್ಕೆ ಹೊಸ ರೂಪು ಕೊಟ್ಟಿದ್ದು, ಅಧ್ಯಾಪಕಿಯರು, ಮಕ್ಕಳಲ್ಲಿ ಕಸದಿಂದ ರಸದ ಬಗ್ಗೆ ಅಭಿರುಚಿ ಮೂಡಿಸಿದಂತಾಗಿದೆ.

Advertisement

ಶಾಲೆಯ ಮಕ್ಕಳಿಗೆ ಸ್ವತ್ಛ ಭಾರತ ಅಭಿಯಾನದ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸಲು ಕಿರು ನಾಟಕವನ್ನು ಸ್ವತಃ ಕಿರು ವೈದ್ಯರು ಪ್ರಾಯೋಜಿಸಿದ್ದು, ಪರಿಸರ ಸಂರಕ್ಷಣೆ ಕುರಿತಂತೆ ಜಾಗƒತಿ ಮೂಡಿಸುವಂತ ಕಿರುಚಿತ್ರಗಳನ್ನು ತೋರಿಸಿ ಮಕ್ಕಳಿಗೆ ಮನೆಗಳಲ್ಲಿ ಅವರೇ ಮಾಡಬಹುದಾದ ಬದಲಾವಣೆಗಳ ಬಗ್ಗೆ ತಿಳಿಹೇಳಲಾಯಿತು.
ಮಕ್ಕಳಲ್ಲಿ ಸƒಜನಶೀಲತೆ ಬೆಳೆಸಲು ಪರಿಸರದ ಕುರಿತಂತೆ ಚಿತ್ರ ಬರೆಯುವ ಸ್ಪರ್ಧೆ ನಡೆಸಿ ವಿಜೇತರಿಗೆ ಬಿದಿರಿನಿಂದ ಸಿದ್ಧಪಡಿಸಲಾದ ಹಲ್ಲುಜ್ಜುವ ಬ್ರಶ್‌ಗಳನ್ನು ನೀಡಲಾಗಿದ್ದು  ಪ್ಲಾಸ್ಟಿಕ್‌ ಬದಲು ಬಿದಿರು ಇತ್ಯಾದಿ ಪರಿಸರ ಸ್ನೇಹಿ ಪರ್ಯಾಯ ಪದಾರ್ಥಗಳ ಬಳಕೆಯ ಅರಿವು ಮೂಡಿಸಲಾಯಿತು.

ಕೇಂದ್ರ ಸರಕಾರದ  ಮಾನವ ಸಂಪನ್ಮೂಲ ಇಲಾಖೆಯ “ಸ್ವತ್ಛ ಭಾರತ ಸಮ್ಮರ್‌ ಇಂಟರ್ನ್ಶಿಪ್‌ ಕರೆಯಂತೆ ಸ್ವತ್ಛ ಭಾರತದ ಪರಿಕಲ್ಪನೆ ಸಾಕಾರಕ್ಕೆ  ಕಿರು ವೈದ್ಯರ ತಂಡ ಕುರ್ಕಾಲು ಗ್ರಾಮದಲ್ಲಿ  ಕಾರ್ಯಾಚರಿಸಿತ್ತು.

ಪರಿಸರ ಸ್ವತ್ಛತೆಯ ಅರಿವು
ಶಿಸ್ತು ಭರಿತ ಕಿರು ವೈದ್ಯರ ತಂಡದಿಂದ ಚಿತ್ತಾಕರ್ಷಕ ಚಿತ್ತಾರಗಳು ಶಾಲೆಯ ಗೋಡೆಯಲ್ಲಿ ಮಕ್ಕಳ ಕಣ್ಣೆದುರೇ ಮೂಡಿದ್ದು, ಶಾಲಾಪರಿಸರ ಸ್ವತ್ಛತೆಯ ಪ್ರಾಧಾನ್ಯತೆಯ ಅರಿವು ಮಕ್ಕಳಿಗೆ ಮನವರಿಕೆಯಾಗಿದೆ. 
– ರಂಜಿತಾ
ಪ್ರಭಾರ ಮುಖ್ಯ ಶಿಕ್ಷಕಿ

ವರ್ಲಿ ಚಿತ್ತಾರ
ನಾಡ ಹಬ್ಬ, ನಾಡಿನ ಸಂಸ್ಕೃತಿ, ಡೋಲು, ನಾಟಿ ಕ್ರಮ, ಜಾನಪದ ನೃತ್ಯಗಳನ್ನೊಳಗೊಂಡ ವರ್ಲಿ ಚಿತ್ತಾರಗಳ ಮೂಲಕ ಪರಿಸರ -ಪ್ರಕೃತಿಯ ಮೌಲ್ಯದ ಅರಿವನ್ನು ಮಕ್ಕಳಲ್ಲಿ ಮೂಡಿಸಲು ಪ್ರಯತ್ನ  ನಡೆಸಲಾಗುವುದು. 

– ಡಾ| ಸ್ವಾತಿ ಭಟ್‌, ಕಿರು ವೈದ್ಯೆ

ಪರಿಕರ ಬಳಕೆಯಿಂದ ಪೀಠೊಪಕರಣ 
ವೇಸ್ಟ್‌ ಆಗಿದ್ದ ಪರಿಕರ ಬಳಕೆಯಿಂದ ಪೀಠೊಪಕರಣಗಳನ್ನು ಸಿದ್ಧಪಡಿಸಲಾಗಿದೆ. ಈ ಎಲ್ಲ  ಕೆಲಸಗಳನ್ನು ನಾವು ಇಲ್ಲಿಯೇ ಮೊದಲು ಮಾಡಿರುತ್ತೇವೆ. ಶಾಲೆಯ ಉತ್ತಮ ಸಹಕಾರ, ಮಕ್ಕಳ ಪ್ರೋತ್ಸಾಹದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ .
– ಡಾ| ಅಲೋಕ್‌ ಬಿರಾದಾರ್‌
ಕಿರು ವೈದ್ಯ

Advertisement

Udayavani is now on Telegram. Click here to join our channel and stay updated with the latest news.

Next