Advertisement

Udupi: ಬಾಂಗ್ಲಾ ಅಕ್ರಮ ವಲಸೆ ಫಾಲೋ ಅಪ್: ನೆಪಕ್ಕಷ್ಟೇ ಬಿಹಾರ, ಒಡಿಶಾ, ಅಸ್ಸಾಂ…

12:19 AM Oct 14, 2024 | Team Udayavani |

ಉಡುಪಿ: ಕರಾವಳಿ ಭಾಗದಲ್ಲಿ ಬಾಂಗ್ಲಾದೇಶ, ನೈಜೀರಿಯಾ ಸಹಿತ ಕಳ್ಳಮಾರ್ಗದ ಮೂಲಕ ಪ್ರವೇಶಿಸಿ ಕೆಲಸ ನಿರ್ವಹಿಸುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಈಗ ಪತ್ತೆಯಾಗಿರುವುದು ಅದರ ಎಳೆ ಮಾತ್ರ!

Advertisement

ದಿನಗೂಲಿ ನೌಕರರ ಸಮಸ್ಯೆಯ ನಡುವೆಯೇ ಬಿಹಾರ, ಒಡಿಶಾ, ಅಸ್ಸಾಂ, ಪಶ್ಚಿಮ ಬಂಗಾಲದಿಂದ ಸಾಕ ಷ್ಟು ಸಂಖ್ಯೆಯಲ್ಲಿ ಕೆಲಸಕ್ಕೆ ಸಿಗುತ್ತಾರೆ. ಇದನ್ನೂ ಈಗಾಗಲೇ ಆ ಭಾಗದಿಂದ ಬಂದ ಹಿರಿಯನೇ ಇಲ್ಲಿ ಬ್ರೋಕರ್‌ ಆಗಿ ಕೆಲಸ ಮಾಡಲಿದ್ದು, ಒಂದಿಷ್ಟು ಜನರನ್ನು ಕರೆಸಿ ಒದಗಿಸುತ್ತಾನೆ. ಮುಖ್ಯವಾಗಿ ಕಟ್ಟಡ ಕಾರ್ಮಿಕರು, ಸೆಲೂನ್‌, ಸ್ಪಾಗಳಲ್ಲಿ ಇಂಥವರನ್ನು ನಿಯೋಜಿಸಲಾಗುತ್ತದೆ.

ಬೀದಿಬದಿಯಲ್ಲಿ ವಿವಿಧ ತಿನಿಸು ಮಾರುವವರು, ಮೀನುಗಾರಿಕೆಯಲ್ಲಿ ತೊಡಗಿರುವವರು, ಬಟ್ಟೆ ಅಂಗಡಿಯಲ್ಲಿ ಕರ್ತವ್ಯ ನಿರ್ವಹಿಸುವವರಲ್ಲೂ ಇಂಥವರು ಇದ್ದಾರೆ ಎನ್ನಲಾಗಿದೆ.

ಇಂಥವರಲ್ಲಿ ನಿಮ್ಮ ಊರು ಯಾವುದು ಕೇಳಿದರೆ ಬಿಹಾರ, ಒಡಿಶಾ, ಹೊಸದಿಲ್ಲಿ, ಅಸ್ಸಾಂ ಅಥವಾ ಪಶ್ಚಿಮ ಬಂಗಾಲ ಎನ್ನುತ್ತಾರೆ. ಸ್ಥಳೀಯರೂ ಹೆಚ್ಚು ಯೋಚಿಸುವುದಿಲ್ಲ. ಹಾಗಾಗಿ ಈ ವಲಸಿಗರ ನೈಜ ಸಂಗತಿ ಬಯಲಿಗೆ ಬಾರದು. ಅವರು ಒದಗಿಸುವ ದಾಖಲೆಗಳು ನಿಜವೆಂದು ನಂಬಿ ಸ್ಥಳೀಯ ಪೊಲೀಸ್‌ ಠಾಣೆಯವರೂ ವಿಚಾರಿಸುವ ಗೋಜಿಗೆ ಹೋಗು ವುದಿಲ್ಲ. ಹಾಗಾಗಿ ಅಕ್ರಮ ವಲಸಿಗರೂ ನಿಶ್ಚಿಂತೆಯಿಂದ ಇರುತ್ತಾರೆ. ಶುಕ್ರವಾರ ಬಂಧಿಸಲಾದ ಅಕ್ರಮ ವಲಸಿಗರ ಪ್ರಕರಣದಲ್ಲೂ ಇದೇ ಅಗಿದೆ ಎನ್ನಲಾಗಿದೆ.

ಹೊರ ರಾಜ್ಯದಿಂದ ಬರುವ ಕೂಲಿ ಕಾರ್ಮಿಕರಲ್ಲಿ ಈಗ ಪಶ್ಚಿಮ ಬಂಗಾಲ ತಮ್ಮ ರಾಜ್ಯ ಎಂದು ಹೇಳಿಕೊಳ್ಳುವವರು ಕಡಿಮೆ. ಪಶ್ಚಿಮ ಬಂಗಾಲ ಎಂದಾಕ್ಷಣ ಯಾವ ಜಿಲ್ಲೆ ಇತ್ಯಾದಿ ಮಾಹಿತಿ ಕೇಳಲಾ ಗುತ್ತದೆ. ಗಡಿಭಾಗದವರು ಎಂದು ಕಂಡು ಬಂದರೆ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತದೆ. ಹೀಗಾಗಿಯೇ ಅವರು ಅಸ್ಸಾಂ ಎನ್ನುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಸ್ಸಾಂ ಎಂದರೆ ಯಾರೂ ಜಾಸ್ತಿ ವಿಚಾರಣೆ ಮಾಡುವುದಿಲ್ಲ. ಅಲ್ಲದೆ ಬಹುತೇಕರು ಈಗ ಅಸ್ಸಾಂ ಆಧಾರ್‌, ರೇಷನ್‌ ಕಾರ್ಡ್‌ನೊಂದಿಗೆ ಬರುತ್ತಿದ್ದಾರೆ. ಬ್ರೋಕರ್‌ಗಳನ್ನು ಪತ್ತೆ ಮಾಡಿದರೆ ಪೊಲೀಸರಿಗೆ ಇನ್ನಷ್ಟು ವಿವರ ಸುಲಭವಾಗಿ ಸಿಗಲಿದೆ.

Advertisement

ಮಲ್ಪೆಯಲ್ಲಿ ಸಾವಿರಾರು ಹಿಂದಿ ಭಾಷಿಕರು ಗಾರೆ, ಬಂದರಿನಲ್ಲಿ ಲೋಡ್‌ ಮಾಡುವುದು, ಫಿಶ್‌ ಕಂಪನಿ, ಬೋಟ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇದರಲ್ಲಿ ಉತ್ತರ ಭಾರತದವರು ಯಾರು? ಬಾಂಗ್ಲಾ ದೇಶದ ಅಕ್ರಮ ವಲಸಿಗರು ಯಾರು ಎಂಬುದು ತಿಳಿಯದು. ಅವರಿಗೆ ತಂಗಲು ಕದಿಕೆ, ತೊಟ್ಟಂ, ವಡಭಾಂಡೇಶ್ವರ, ಕೊಳ, ಹನುಮಾನ್‌ ನಗರ, ಕಲ್ಮಾಡಿ, ಬಾಪೂತೋಟ ಮುಂತಾದ ಕಡೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ರೂಮುಗಳನ್ನು ನೀಡಲಾಗಿದೆ. ಇಂತಹವರಿಗೆ ರೂಮುಗಳನ್ನು ಕೊಡುವಾಗ ಸರಿಯಾಗಿ ತನಿಖೆ ಮಾಡಿ ಅವರ ಆಧಾರ್‌ ಕಾರ್ಡ್‌ ಅನ್ನು ಸಮೀಪದ ಪೊಲೀಸ್‌ ಸ್ಟೇಶನ್‌ಗೆ ಕೊಟ್ಟು ವಿಚಾರಣೆ ಮಾಡುವ ವ್ಯವಸ್ಥೆ ಆಗಬೇಕು ಎನ್ನುತ್ತಾರೆ ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next