Advertisement

Bihar; ಜ.28ಕ್ಕೆ ಬಿಜೆಪಿ- ಜೆಡಿಯು ಸರ್ಕಾರದ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ

02:46 PM Jan 26, 2024 | Team Udayavani |

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್‌-ಆರ್‌ಜೆಡಿ ಜತೆಗೆ ಇರುವ ಮಹಾಮೈತ್ರಿ ಕೂಟಕ್ಕೆ ವಿದಾಯ ಹೇಳಿ ಬಿಜೆಪಿ ನೇತೃತ್ವದ ಎನ್‌ಡಿಎ ಜತೆಗೆ ಕೈಜೋಡಿಸಲಿದ್ದಾರೆಂಬ ಚರ್ಚೆ ಬಲ ಪಡೆಯುತ್ತಿರುವಂತೆ ಜ.28ರಂದು ಬಿಜೆಪಿ- ಜೆಡಿಯು ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.

Advertisement

ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಸುಶೀಲ್ ಮೋದಿ, “ಮುಚ್ಚಿದ ಬಾಗಿಲುಗಳು ತೆರೆಯಬಹುದು” ಎಂದು ಹೇಳಿದರು, ರಾಜಕೀಯವನ್ನು “ಸಾಧ್ಯತೆಯ ಆಟ” ಎಂದು ಕರೆದರು. ಆದರೆ, ಈ ಕುರಿತು ಹೆಚ್ಚಿನ ಮಾತನಾಡಲು ನಿರಾಕರಿಸಿದರು.

ಪ್ರಸ್ತುತ ಜೆಡಿಯು ಮತ್ತು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮೈತ್ರಿಯಲ್ಲಿ ಉದ್ವಿಗ್ನತೆಯೊಂದಿಗೆ ಬಿಹಾರದಲ್ಲಿ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಈ ಬೆಳವಣಿಗೆ ನಡೆದಿದೆ. ಈ ವಾರ ಸಮಾಜವಾದಿ ಐಕಾನ್ ಕರ್ಪೂರಿ ಠಾಕೂರ್ ಅವರಿಗೆ ಬಿಜೆಪಿ ನೇತೃತ್ವದ ಕೇಂದ್ರವು ಭಾರತ ರತ್ನ ಪ್ರಶಸ್ತಿಯನ್ನು ನೀಡಿದಾಗ ಇದು ಬಹುತೇಕ ಅಂತಿಮಗೊಂಡಿದೆ.

ಈತನ್ಮಧ್ಯೆ, ಕಾಂಗ್ರೆಸ್ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ನಿತೀಶ್ ನಡೆಯ ಮೂಲಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲೇಬೇಕು ಎಂಬ ಹಟದಿಂದ ಕಾಂಗ್ರೆಸ್‌ ರಚಿಸಿರುವ ಇಂಡಿಯಾ ಮೈತ್ರಿಕೂಟ ಛಿದ್ರಗೊಳ್ಳುವತ್ತ ಸಾಗಿದೆ.

Advertisement

ಬಿಹಾರದಲ್ಲಿ ಸ್ಥಾನ ಹೊಂದಾಣಿಕೆ, ಮೈತ್ರಿಕೂಟದ ಸಂಚಾಲಕ ಸ್ಥಾನ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಒಕ್ಕೂಟದ ಅಧ್ಯಕ್ಷ ಎಂದು ಘೋಷಣೆ ಮಾಡಿರುವುದು ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ನಿತೀಶ್‌ ಕುಮಾರ್‌ ಕಾಂಗ್ರೆಸ್‌ ಜತೆಗೆ ಮುನಿಸಿಕೊಂಡಿದ್ದರು. ಅದಕ್ಕೆ ಪೂರಕವಾಗಿ ಆರ್‌ಜೆಡಿಯ ಜತೆಗೆ ಕೂಡ ಭಿನ್ನಾಭಿಪ್ರಾಯವನ್ನು ಅವರು ಹೊಂದಿದ್ದರು.

ಬುಧವಾರ ನಡೆದಿದ್ದ ಕಾರ್ಯಕ್ರಮದಲ್ಲಿ ನಿತೀಶ್‌ ಕುಮಾರ್‌ ಅವರು ವಂಶಪಾರಂಪರ್ಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರಿಂದ ಕ್ರುದ್ಧಗೊಂಡಿದ್ದ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು, ‘ಕೆಲವರು ತಮ್ಮಲ್ಲಿರುವ ಕೊರತೆಗಳನ್ನು ಮುಚ್ಚಿಟ್ಟು ಮತ್ತೂಬ್ಬರ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next