Advertisement

ರೈಲ್ವೆ ಹಳಿ ಸಮೀಪ ಬಿಹಾರ ಶಾಸಕಿ ಪುತ್ರನ ಶವ ಪತ್ತೆ. ಕೊಲೆ ಶಂಕೆ?

03:04 PM Aug 03, 2018 | Sharanya Alva |

ಪಾಟ್ನಾ: ಬಿಹಾರದ ಆಡಳಿತಾರೂಢ ಜೆಡಿಯುನ ಹಾಲಿ ಶಾಸಕಿ, ಮಾಜಿ ಸಚಿವೆ ಬಿಮಾ ಭಾರ್ತಿ ಅವರ ಪುತ್ರ ಪಾಟ್ನಾ ರೈಲ್ವೆ ಹಳಿ ಸಮೀಪ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬಿಹಾರದ ಪುರ್ನೆಯಾ ಜಿಲ್ಲೆಯ ರುಪೌಲಿ ಕ್ಷೇತ್ರದ ಶಾಸಕಿ ಭಾರ್ತಿ ಅವರ ಪುತ್ರ ದೀಪಕ್ ಕುಮಾರ್ (21ವರ್ಷ) ಕಳೆದ ರಾತ್ರಿ ತನ್ನ ಇಬ್ಬರು ಗೆಳೆಯರ ಜೊತೆ ಮನೆಯಿಂದ ಹೊರಗೆ ಹೋಗಿದ್ದ. ಮಾರನೇ ದಿನ ಬೆಳಗ್ಗೆ ನಲಂದಾ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮುಂಭಾಗದ ರೈಲ್ವೆ ಹಳಿ ಸಮೀಪ ಆತನ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ದೀಪಕ್ ನ ಇಬ್ಬರು ಗೆಳೆಯರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ಪಾಟ್ನಾ ಪೊಲೀಸ್ ವರಿಷ್ಠಾಧಿಕಾರಿ ಮನು ಮಹಾರಾಜ್ ತಿಳಿಸಿದ್ದಾರೆ.

ದೀಪಕ್ ನ ತಲೆ ಭಾಗದಲ್ಲಿ ಗಾಯವಾದ ಕಲೆ ಇದ್ದು, ಶವವನ್ನು ಪೋಸ್ಟ್ ಮಾರ್ಟ್ಂಗೆ ಕಳುಹಿಸಲಾಗಿದೆ. ಕಳೆದ ರಾತ್ರಿ ಊಟವಾದ ನಂತರ ದೀಪಕ್ ಹೊರಟು ಹೋಗಿದ್ದು, ಆತನ ಸುರಕ್ಷಿತವಾಗಿ ಮನೆಗೆ ತಲುಪಿದ್ದಾನೆ ಎಂದು ತಾವು ಭಾವಿಸಿರುವುದಾಗಿ ಇಬ್ಬರು ಗೆಳೆಯರು ಪೊಲೀಸರ ವಿಚಾರಣೆ ತಿಳಿಸಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next