Advertisement

ಬಿಹಾರದಲ್ಲೊಂದು ಗಾಜಿನ ಸ್ಕೈವಾಕ್‌; ಮಾರ್ಚ್‌ನಲ್ಲಿ ಲೋಕಾರ್ಪಣೆ

12:12 AM Dec 22, 2020 | mahesh |

ಚೀನದಲ್ಲಿರುವ ಜಗತ್ತಿನ ಅತಿ ಉದ್ದದ ಗಾಜಿನ ಸೇತುವೆ ಮೇಲೊಮ್ಮೆ ನಡೆಯಬೇಕು ಎಂಬ ಆಸೆ ಅನೇಕರಿಗಿರುತ್ತದೆ. ಆದರೆ ಅದನ್ನು ಈಡೇರಿಸಿಕೊಳ್ಳಲು ಬಹುತೇಕ ಮಂದಿಗೆ ಆಗುವುದಿಲ್ಲ. ಅಂಥವರಿಗೆ ನಮ್ಮದೇ ದೇಶದಲ್ಲಿ ಇಂಥದ್ದೊಂದು ಸೇತುವೆ ನಿರ್ಮಾಣವಾಗುತ್ತಿದೆ. ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರ ಕನಸಿನ ಕೂಸಾದ “ಗಾಜಿನ ತಳವುಳ್ಳ ಸೇತುವೆ’ ಬಿಹಾರದ ರಾಜ್‌ಗಿರ್‌ನಲ್ಲಿ ನಿರ್ಮಾಣವಾ ಗುತ್ತಿದ್ದು, ಮಾರ್ಚ್‌ನಲ್ಲಿ ಲೋಕಾರ್ಪಣೆಯಾಗಲಿದೆ. ಆ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

Advertisement

ಸ್ಕೈವಾಕ್‌ ಜತೆಗೆ ಹಲವು ಆಕರ್ಷಣೆಗಳು
ಬಿಹಾರದ ಐತಿಹಾಸಿಕ ಬುದ್ಧ್ಮಾರ್ಗ್‌ನಲ್ಲಿ 500 ಎಕ್ರೆ ಪ್ರದೇಶದಲ್ಲಿ ನೇಚರ್‌ ಸಫಾರಿ ರಚಿಸಲಾಗಿದ್ದು, ಈ ಗಾಜಿನ ಸೇತುವೆ ಕೂಡ ಅದರ ಭಾಗವಾಗಿದೆ. ಚೀನದ ಹಂಗ್‌ಝೌ ಪ್ರಾಂತ್ಯದಲ್ಲಿರುವ ಗಾಜಿನ ಸೇತುವೆಯ ಮಾದರಿಯಲ್ಲೇ ಈ ಸೇತುವೆ ನಿರ್ಮಿಸಲಾಗಿದೆ. ಇದರ ಜತೆಗೆ, ಪ್ರವಾಸಿಗರನ್ನು ಆಕರ್ಷಿಸಲು ಅತ್ಯಾಧುನಿಕ ರೋಪ್‌ವೇ ಮತ್ತು ಜಂಗಲ್‌ ಸಫಾರಿ ಕೂಡ ಇದೆ. ರಾಜ್‌ಗಿರ್‌ನ ದಟ್ಟಾರಣ್ಯದಲ್ಲಿ ಝೂ ಸಫಾರಿ ನಡೆಸಲು ಕೇಂದ್ರ ಪ್ರಾಣಿಸಂಗ್ರಹಾಲಯ ಪ್ರಾಧಿಕಾರದ ಅನುಮತಿ ಪಡೆಯಲಾಗಿದೆ. ಪ್ರವಾಸಿಗರು ಇಲ್ಲಿ ಏರ್‌ ಸೈಕ್ಲಿಂಗ್‌, ರೋಪ್‌ವೇ ರೈಡ್‌ ನಂತಹ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಲÛಬಹುದು. ಚಿಟ್ಟೆ ಪಾರ್ಕ್‌, ಆಯುರ್ವೇದ ಪಾರ್ಕ್‌ ಇಲ್ಲಿರುವ ಇತರೆ ಆಕರ್ಷಣೆಗಳು.

ರಾಜ್‌ಗಿರ್‌ನಲ್ಲಿ ಏನೇನಿದೆ?
ಸೋನ್‌ ಭಂದರ್‌ ಗುಹೆಗಳು, ಬಿಸಿ ನೀರಿನ ಕಾರಂಜಿ, ಬ್ರಹ್ಮಕುಂಡ, ವಿಶ್ವಶಾಂತಿ ಸ್ತೂಪಕ್ಕೆ ರಾಜ್‌ಗಿರ್‌ ಪ್ರಸಿದ್ಧವಾಗಿದೆ. ಒಟ್ಟಿನಲ್ಲಿ ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿ, ಉತ್ತಮ ಆದಾಯ ಗಳಿಸುವುದೂ ಸರಕಾರದ ಉದ್ದೇಶವಾಗಿದೆ.

ಎಲ್ಲಿದೆ?- ಬಿಹಾರದ ರಾಜ್‌ಗಿರ್‌
ಸೇತುವೆಯ ಉದ್ದ- 85 ಅಡಿ
ಅಗಲ- 6 ಅಡಿ
ಏಕಕಾಲಕ್ಕೆ ಎಷ್ಟು ಮಂದಿ ನಿಲ್ಲಬಹುದು?- 40
ರೋಪ್‌ವೇಯಲ್ಲಿರುವ ಗಾಜಿನ ಕ್ಯಾಬಿನ್‌ಗಳು- 18
ಪ್ರತಿ ಕ್ಯಾಬಿನ್‌ನಲ್ಲಿ ಎಷ್ಟು ಮಂದಿ ನಿಲ್ಲಬಹುದು?- 8

Advertisement

Udayavani is now on Telegram. Click here to join our channel and stay updated with the latest news.

Next