Advertisement

Bihar; ಅಧಿಕಾರಕ್ಕೆ ಬಂದಕೂಡಲೇ ಮದ್ಯ ನಿಷೇಧ ರದ್ದು ಮಾಡುತ್ತೇನೆ: ಪ್ರಶಾಂತ್‌ ಕಿಶೋರ್‌

09:47 AM Sep 15, 2024 | Team Udayavani |

ಪಾಟ್ನಾ: ರಾಜಕೀಯ ಪ್ರವೇಶ ಮಾಡಿರುವ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ (Prashant Kishor) ಅವರು ಬಿಹಾರದಲ್ಲಿ ಭಾರಿ ಘೋಷಣೆಯೊಂದನ್ನು ಮಾಡಿದ್ದಾರೆ. ಚುನಾವಣೆಯಲ್ಲಿ ಆಯ್ಕೆಯಾದರೆ ಬಿಹಾರದಲ್ಲಿ ಮದ್ಯ ನಿಷೇಧವನ್ನು ರದ್ದು ಮಾಡುತ್ತೇವೆ ಎಂದಿದ್ದಾರೆ.

Advertisement

ಪ್ರಶಾಂತ್‌ ಕಿಶೋರ್‌ ಅವರು ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವುದಾಗಿ ಈಗಾಗಲೇ ಘೋಷಿಸಿಕೊಂಡಿದ್ದಾರೆ. ಅಕ್ಟೋಬರ್‌ 2ರಂದು ಜನ್‌ ಸೂರಜ್‌ (Jan Suraj) ಎಂಬ ಬಗ್ಗೆ ಪಕ್ಷವನ್ನು ಸ್ಥಾಪನೆ ಮಾಡಲಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾತನಾಡಿದ ಪ್ರಶಾಂತ್‌ ಕಿಶೋರ್‌ ಅವರು, “ಅಕ್ಟೋಬರ್‌ 2ಕ್ಕೆ ಯಾವುದೇ ವಿಶೇಷ ತಯಾರಿ ಮಾಡುವ ಅಗತ್ಯವಿಲ್ಲ. ಇದಕ್ಕೆ ನಾವು ಎರಡು ವರ್ಷದಿಂದ ಸಿದ್ದತೆ ಮಾಡುತ್ತಿದ್ದೇವೆ. ಒಂದು ವೇಳೆ ಜನ್‌ ಸೂರಜ್‌ ಪಕ್ಷ ಅಧಿಕಾರಕ್ಕೆ ಬಂದರೆ, ಗಂಟೆಯೊಳಗೆ ಮದ್ಯ ನಿಷೇಧವನ್ನು ಅಂತ್ಯಗೊಳಿಸುತ್ತೇವೆ” ಎಂದರು.

ರಾಷ್ಟ್ರೀಯ ಜನತಾ ದಳ (RJD) ನಾಯಕ ತೇಜಸ್ವಿ ಯಾದವ್ ಅವರ ಯಾತ್ರೆಯ ಬಗ್ಗೆ ಕೇಳಿದಾಗ, “ಅವರಿಗೆ ನನ್ನ ಶುಭಾಶಯಗಳು. ಅವರಾದರೂ ಮನೆಯಿಂದ ಹೊರಬಂದು ಸಾರ್ವಜನಿಕರ ನಡುವೆ ಹೋಗುತ್ತಿದ್ದಾರೆ” ಎಂದು ಕಿಶೋರ್ ಟೀಕಿಸಿದರು.‌

Advertisement

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸೇರಿದ್ದಕ್ಕಾಗಿ ನಿತೀಶ್ ಕುಮಾರ್ ಕೈಮುಗಿದು ಕ್ಷಮೆಯಾಚಿಸಿದ್ದಾರೆ ಎಂಬ ತೇಜಸ್ವಿ ಯಾದವ್ ಅವರ ಹೇಳಿಕೆಯ ನಂತರ ಆರ್‌ಜೆಡಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವೆ ನಡೆಯುತ್ತಿರುವ ಮಾತಿನ ಸಮರದ ಬಗ್ಗೆ ಪ್ರತಿಕ್ರಿಯಿಸಿದ ಕಿಶೋರ್, ಇಬ್ಬರೂ ನಾಯಕರು ಬಿಹಾರಕ್ಕೆ ಹಾನಿ ಮಾಡಿದ್ದಾರೆ ಎಂದು ಹೇಳಿದರು.

“ಸಮಸ್ಯೆ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ನಡುವೆ ಇದೆ. ಮತ್ತು ಯಾರು ಯಾರಿಗೆ ಕೈ ಜೋಡಿಸಿ ಕ್ಷಮೆಯಾಚಿಸಿದರು ಎಂಬುದು ಮುಖ್ಯವಲ್ಲ; ಇಬ್ಬರೂ ಬಿಹಾರಕ್ಕೆ ಹಾನಿಯನ್ನುಂಟು ಮಾಡಿದ್ದಾರೆ. ಬಿಹಾರದ ಜನರು 30 ವರ್ಷಗಳಿಂದ ಅವರಿಬ್ಬರನ್ನೂ ನೋಡಿದ್ದಾರೆ. ಬಿಹಾರ ತೊರೆಯಲು ಅವರಿಬ್ಬರನ್ನೂ ನಾವು ಒತ್ತಾಯಿಸುತ್ತಿದ್ದೇವೆ” ಎಂದು ಪ್ರಶಾಂತ್ ಕಿಶೋರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next