ಬಿಹಾರ್ : ಯಾಸ್ ಚಂಡಮಾರುತ ಪರಿಣಾಮ ಸುರಿದ ಭಾರೀ ಮಳೆಗೆ ಬಿಹಾರದ ಕೆಲ ಆಸ್ಪತ್ರೆಗಳು ಜಲಾವೃತಗೊಂಡಿವೆ. ಮೊಣಕಾಲಿನವರೆಗೆ ನೀರು ತುಂಬಿಕೊಂಡಿದ್ದರಿಂದ ವೈದ್ಯರು ಆಸ್ಪತ್ರೆಯ ಕಾರಿಡಾರಿನಲ್ಲಿ ಬೈಕ್ ಸಹಾಯದಿಂದ ರೋಗಿಗಳ ಬಳಿ ತೆರಳಿ ಚಿಕಿತ್ಸೆ ನೀಡುವಂತಾಗಿದೆ.
ಬಿಹಾರದ ಕತಿಹಾರದಲ್ಲಿ ಸದಾರ್ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ. ರೋಗಿಗಳು ಮಲಗಿರುವ ಬೆಡ್ ಗಳು ಹಾಗೂ ಆಸ್ಪತ್ರೆಯ ಕಾರಿಡಾರ್ ಗಳು, ಒಪಿಡಿ ಸಂಪೂರ್ಣ ಜಲಾವೃತಗೊಂಡಿವೆ. ಇಂತಹ ಸಂದರ್ಭದಲ್ಲೂ ಕರ್ತವ್ಯ ಪ್ರಜ್ಞೆ ಮೆರೆದಿರುವ ವೈದ್ಯರು, ಬೈಕ್ ಏರಿ ರೋಗಿಗಳ ಬಳಿ ತೆರಳಿ ಚಿಕಿತ್ಸೆ ನೀಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದು ಕೇವಲ ಸದಾರ್ ಆಸ್ಪತ್ರೆಯ ಕಥೆಯಲ್ಲ, ಬಿಹಾರ ಹಳೆಯ ಆಸ್ಪತ್ರೆ ದರ್ಬಾಂಗ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ ನಲ್ಲಿಯೂ ಕೂಡ ನೀರು ಆವರಿಸಿಕೊಂಡಿದೆ.
ಇನ್ನು ಬಿಹಾರ್ ಆಸ್ಪತ್ರೆಗಳಿಗೆ ಮಳೆ ನೀರು ನುಗ್ಗಿ ಸೃಷ್ಠಿಸಿರುವ ಆವಾಂತರದ ವಿಡಿಯೋವನ್ನು ತಮ್ಮ ಟ್ವಿಟರಿನಲ್ಲಿ ಹಂಚಿಕೊಂಡಿದ್ದು, ಇವು ತೇಲುತ್ತಿರುವ ಆಸ್ಪತ್ರೆಗಳು ಎಂದು ಕಾಮೆಂಟ್ ಮಾಡಿದ್ದಾರೆ.