ಪಾಟ್ನಾ:ಬಿಹಾರ ವಿಧಾನಸಭಾ ಚುನಾವಣೆಯ ಮತಎಣಿಕೆ ಮಂಗಳವಾರ(ನವೆಂಬರ್ 10, 2020) ಬೆಳಗ್ಗೆ 8ಗಂಟೆಗೆ ಆರಂಭಗೊಂಡಿದ್ದು, ಸುಮಾರು 35 ಸುತ್ತುಗಳ ಮತಎಣಿಕೆ ನಡೆದಿದೆ. ಆದರೆ ಪೂರ್ಣ ಪ್ರಮಾಣದ ಫಲಿತಾಂಶ ಇಂದು ತಡರಾತ್ರಿಗೆ ಲಭ್ಯವಾಗುವ ಸಾಧ್ಯತೆ ಇದ್ದಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿ ನಡೆಸಿದ ಚುನಾವಣಾ ಆಯೋಗ, ಈ ಮೊದಲು ಮತಎಣಿಕೆಗೆ 38 ಕೇಂದ್ರಗಳನ್ನು ಬಳಸಲಾಗುತ್ತಿತ್ತು. ಆದರೆ ಕೋವಿಡ್ 19 ಸೋಂಕಿನ ನಿಯಮಾವಳಿ ಪ್ರಕಾರ 55 ಕೇಂದ್ರಗಳಲ್ಲಿ ಮತಎಣಿಕೆ ನಡೆಸಲಾಗುತ್ತಿದೆ. ಹೀಗಾಗಿ ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಯ 35 ಸುತ್ತುಗಳ ಮತಎಣಿಕೆ ಮಾತ್ರ ನಡೆದಿದೆ.
ಯಾವುದೇ ದೋಷವಿಲ್ಲದೆ ಈವರೆಗೆ ಒಂದು ಕೋಟಿ ಮತಎಣಿಕೆ ನಡೆದಿದೆ. ಇನ್ನೂ ಮೂರು ಕೋಟಿ ಮತ ಎಣಿಕೆಗೆ ಬಾಕಿ ಇದೆ. ಅಂದರೆ ಬಿಹಾರ ವಿಧಾನಸಭಾ ಚುನಾವಣೆಯ ಮತಎಣಿಕೆಯಲ್ಲಿ ಶೇ.25ರಷ್ಟು ಮಾತ್ರ ಆಗಿದೆ. ಇನ್ನೂ ಶೇ.70ರಷ್ಟು ಮತಎಣಿಕೆ ಬಾಕಿ ಇದೆ ಎಂದು ಆಯೋಗ ತಿಳಿಸಿದೆ.
ಇದನ್ನೂ ಓದಿ:ಆರ್.ಆರ್.ನಗರ ಕುರುಕ್ಷೇತ್ರದಲ್ಲಿ ಮುನಿರತ್ನನೇ ಕಿಂಗ್: ಎದುರಾಳಿ ಕುಸುಮಾ ಎದುರು ಭರ್ಜರಿ ಜಯ
ಕೋವಿಡ್ 19 ಮುಂಜಾಗ್ರತಾ ಹಿನ್ನೆಲೆಯಲ್ಲಿ ಶೇ.63ರಷ್ಟು ಮತಗಟ್ಟೆ ಸಂಖ್ಯೆಗಳನ್ನು ಹೆಚ್ಚಿಸಲಾಗಿತ್ತು. ಬಿಹಾರ ಚುನಾವಣೆಯಲ್ಲಿ 1.06 ಲಕ್ಷ ಇವಿಎಂ ಯಂತ್ರಗಳಲ್ಲಿನ ಮತ ಎಣಿಕೆ ಮಾಡಬೇಕಾಗಿದೆ. ಮತಗಟ್ಟೆ ಅಧಿಕಾರಿಗಳನ್ನು ಕೂಡಾ ಕಡಿಮೆ ಬಳಸಿಕೊಳ್ಳಲಾಗಿದೆ ಎಂದು ಹೇಳಿದೆ.
ಸದ್ಯದ ಟ್ರೆಂಡಿಂಗ್ ಪ್ರಕಾರ, ಭಾರತೀಯ ಜನತಾಪಕ್ಷ ನೇತೃತ್ವದ ಎನ್ ಡಿಎ ಮೈತ್ರಿಕೂಟ 120 ಸ್ಥಾನಗಳಲ್ಲಿ, ಆರ್ ಜೆಡಿ ಮಹಾಮೈತ್ರಿಕೂಟ 110 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಲ್ ಜೆಪಿ 03 ಸ್ಥಾನಗಳಲ್ಲಿ ಮುನ್ನಡೆ, ಕಾಂಗ್ರೆಸ್ 21 ಸ್ಥಾನಗಳಲ್ಲಿ, ಎಡಪಕ್ಷಗಳು 21 ಸ್ಥಾನಗಳಲ್ಲಿ, ಬಿಎಸ್ಪಿ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.