ಪಾಟ್ನಾ: “ನಮ್ಮಲ್ಲಿ ಇರುವ ಅತ್ಯಂತ ನೀಚ ಪದ್ಧತಿಯೆಂದರೆ ಅದು ವರದಕ್ಷಿಣೆ ಪದ್ಧತಿ’ ಹೀಗೆಂದು ಹೇಳಿರುವುದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್.
ಬುಧವಾರ ಪಾಟ್ನಾದಲ್ಲಿ ಮಗಧ್ ಮಹಿಳಾ ಕಾಲೇಜಿನ ಹಾಸ್ಟೆಲ್ ಉದ್ಘಾಟನೆ ನಡೆಸಿದ ಅವರು ಈ ಮಾತನ್ನಾಡಿದ್ದಾರೆ.
“ಯಾವುದೇ ವ್ಯಕ್ತಿ ಮದುವೆಗೆ ಕರೆಯುವಾಗ ಆತ ವರದಕ್ಷಿಣೆ ತೆಗೆದುಕೊಂಡಿಲ್ಲ ಎಂದು ಘೋಷಿಸಿಕೊಂಡರೆ ಮಾತ್ರ ಆ ಮದುವೆಗೆ ನಾವು ಹೋಗಬೇಕು. ಮದುವೆಗಾಗಿ ವರದಕ್ಷಿಣೆ ಪಡೆದುಕೊಳ್ಳುವುದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲ. ನೀವು ಮದುವೆಯಾದರೆ ಮಾತ್ರ ಮಕ್ಕಳನ್ನು ಪಡೆಯುತ್ತೀರಿ. ಇಲ್ಲಿರುವ ನೀವೆಲ್ಲರೂ, ನಾವೆಲ್ಲರೂ ತಾಯಂದಿರಿಗೆ ಜನಿಸಿದವರು.
ಗಂಡು, ಗಂಡನ್ನೇ ಮದುವೆಯಾದರೆ ಮಕ್ಕಳಾಗುತ್ತವೆಯೇ? ಹಾಗಿದ್ದ ಮೇಲೂ ವರದಕ್ಷಿಣೆ ತೆಗೆದುಕೊಳ್ಳುವುದೇಕೆ?’ ಎಂದಿದ್ದಾರೆ.
“ಮಹಿಳೆಯರ ಬೇಡಿಕೆ ಮೇರೆಗೆ ನಮ್ಮ ಸರ್ಕಾರ ಆಲ್ಕೋಹಾಲ್ ಸೇವನೆಯನ್ನು ನಿಷೇಧಿಸಿದೆ. ವರದಕ್ಷಿಣೆ ಪದ್ಧತಿ ಮತ್ತು ಬಾಲ್ಯ ವಿವಾಹದ ವಿರುದ್ಧ ಆಂದೋಲನಗಳನ್ನು ಕೂಡ ಆರಂಭಿಸಿದ್ದೇವೆ” ಎಂದು ತಿಳಿಸಿದ್ದಾರೆ.