ಪಾಟ್ನಾ: ಬಿಹಾರದ ಎನ್‌ಡಿಎ ಸರ್ಕಾರದ ಸಂಪುಟ ವಿಸ್ತರಣೆ ಭಾನುವಾರ ನಡೆದಿದ್ದು, 8 ಮಂದಿ ಜೆಡಿಯು ನಾಯಕರು ನಿತೀಶ್ ಕುಮಾರ್ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಅಶೋಕ್ ಚೌಧರಿ, ಶ್ಯಾಮ್ ರಾಜಾಕ್, ಎಲ್ ಪ್ರಸಾದ್ , ಭೀಮಾ ಭಾರತಿ , ರಾಮ್ ಸೇವಕ್ ಸಿಂಗ್, ಸಂಜಯ್ ಝಾ, ನೀರಜ್ ಕುಮಾರ್ ಮತ್ತು ನರೇಂದ್ರ ನಾರಾಯಣ ಯಾದವ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶ್ಯಾಮ್ ರಜಾಕ್ ಅವರು ಆರ್‌ಜೆಡಿ ತೊರೆದು ವರ್ಷದ ಹಿಂದೆ ಜೆಡಿಯು ಸೇರ್ಪಡೆಯಾಗಿದ್ದರು.
ಅಶೋಕ್ ಚೌಧರಿ ಅವರು ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್-ಆರ್‌ಜೆಡಿ-ಜೆಡಿಯು ಸರ್ಕಾರವಿದ್ದಾಗ ಸಚಿವರಾಗಿದ್ದರು. ಆ ಬಳಿಕ ಜೆಡಿಯು ಸೇರ್ಪಡೆಯಾಗಿದ್ದರು.
ಸಂಪುಟ ವಿಸ್ತರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ , ಜೆಡಿಯು ಕೋಟಾದಲ್ಲಿ ಖಾಲಿ ಇದ್ದ ಸಚಿವ ಸ್ಥಾನಗಳನ್ನು ತುಂಬಿಸಿದ್ದೇವೆ. ಯಾವುದೇ ಗೊಂದಲವಿಲ್ಲ. ಬಿಜೆಪಿ ಬಿಹಾರದಲ್ಲಿ ಸರ್ಕಾರದ ಭಾಗವಾಗಿ ಇರಲಿದೆಎಂದರು.
ಮೋದಿ ಸಂಪುಟದಲ್ಲಿ ಎನ್‌ಡಿಎ ಮಿತ್ರಪಕ್ಷವಾದ ಹೊರತಾಗಿಯೂ ಜೆಡಿಯು ಸಂಸದರು ಯಾರೂ ಸಚಿವ ಸ್ಥಾನ ಪಡೆದಿರಲಿಲ್ಲ.