Advertisement

ಬಿಹಾರ ಮಹಾತೀರ್ಪು: ಸರಳ ಬಹುಮತ ಸಾಧಿಸಿದ ನಿತೀಶ್‌ ನೇತೃತ್ವದ ಎನ್‌ಡಿಎ

01:23 AM Nov 11, 2020 | mahesh |

ಪಟ್ನಾ /ಹೊಸದಿಲ್ಲಿ: ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಬಿಹಾರ ಮತ್ತೆ ಎನ್‌ಡಿಎ ಪಾಲಾಗಿದೆ. ಜೆಡಿಯು ನಾಯಕ ನಿತೀಶ್‌ ಕುಮಾರ್‌
ನೇತೃತ್ವದ ಎನ್‌ಡಿಎಗೆ 125 ಸ್ಥಾನಗಳು ಸಿಕ್ಕಿದ್ದರೆ ಆರ್‌ಜೆಡಿಯ ತೇಜಸ್ವಿ ಯಾದವ್‌ ನೇತೃತ್ವದ ಮೈತ್ರಿಕೂಟಕ್ಕೆ 110 ಸ್ಥಾನಗಳು ಲಭಿಸಿವೆ. ಕೊರೊನಾ ಸಂಕಷ್ಟದ ನಡುವೆ ನಡೆದ ಬಿಹಾರ ವಿಧಾನಸಭೆ ಚುನಾವಣೆ ಹಿಂದೆಂದೂ ಕಾಣದ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು.

Advertisement

ಮಂಗಳವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಎನ್‌ಡಿಎಗಿಂತ ಮುನ್ನಡೆ ಸಾಧಿಸಿದ್ದ ಆರ್‌ಜೆಡಿ ಪಾಳಯದಲ್ಲಿ ಸಂಭ್ರಮ ಮನೆಮಾಡಿತ್ತು. ಆದರೆ 11 ಗಂಟೆಯ ಅನಂತರ ಫ‌ಲಿತಾಂಶ ತಿರುವುಮುರುವಾಗಿ, ಆರ್‌ಜೆಡಿಗೆ ಹಿನ್ನಡೆಯಾದರೆ ಎನ್‌ಡಿಎ ಮುನ್ನಡೆ ಸಾಧಿಸಿತು. ಕೊರೊನಾ ಕಾರಣದಿಂದಾಗಿ ಮತ ಎಣಿಕೆಗೆ ಕಡಿಮೆ ಟೇಬಲ್‌ಗಳನ್ನು ವ್ಯವಸ್ಥೆ ಮಾಡಿದ್ದರಿಂದ ಎಣಿಕೆ ಪ್ರಕ್ರಿಯೆ ವಿಳಂಬವಾಯಿತು. ರಾತ್ರಿಯಾಗುತ್ತಿದ್ದಂತೆ ಎನ್‌ಡಿಎ ಮತ್ತು ಆರ್‌ಜೆಡಿ ನಡುವೆ ತೀವ್ರ ಸ್ಪರ್ಧೆ ಕಂಡು ಬಂದಿತು. ಬೆಳಗ್ಗಿನಿಂದಲೂ ಅತ್ತಿಂದಿತ್ತ ತೂಗುಯ್ನಾಲೆಯಾಡುತ್ತಲೇ ಇದ್ದ ವಿಜಯವು ರಾತ್ರಿ ವೇಳೆಗೆ ಎನ್‌ಡಿಎ ಕಡೆಗೆ ವಾಲಿತು.

ಬಹುತೇಕ ಎಲ್ಲಾ ಸಮೀಕ್ಷೆಗಳು ಆರ್ ಜೆಡಿ ನೇತೃತ್ವದ ಮಹಾಮೈತ್ರಿಕೂಟಕ್ಕೆ ಭರ್ಜರಿ ಬಹುಮತ ಬರಲಿದೆ ಎಂದು ತಿಳಿಸಿದ್ದವು.

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಅಕ್ಟೋಬರ್ 28ರಂದು ಮೊದಲ ಹಂತ, ನವೆಂಬರ್ 3 ಎರಡನೇ ಹಾಗೂ ನವೆಂಬರ್ 7ರಂದು ಮೂರನೇ ಹಂತದ ಚುನಾವಣೆ ನಡೆದಿತ್ತು.

ನವೆಂಬರ್ 10ರಂದು ಬೆಳಗ್ಗೆ ಬಿಹಾರದ 55 ಕೇಂದ್ರಗಳಲ್ಲಿ ಮತಎಣಿಕೆ ಕಾರ್ಯ ಆರಂಭಗೊಂಡಿತ್ತು. ಆದರೆ ಕೋವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ ಮತಎಣಿಕೆ ಪ್ರಕ್ರಿಯೆ ವಿಳಂಬಗತಿಯಲ್ಲಿ ಸಾಗಿದ್ದು, ಮಧ್ಯಾಹ್ನದವರೆಗೆ ಕೇವಲ ಒಂದು ಕೋಟಿ ಮತಎಣಿಕೆ ನಡೆದಿತ್ತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next