Advertisement

ಇಂದು ಎಲ್‌ಜೆಪಿ ನಿರ್ಣಾಯಕ ಸಭೆ ; ಬಿಜೆಪಿ –ಜೆಡಿಯು ಮೈತ್ರಿ ಬಗ್ಗೆ ಚರ್ಚೆ ಸಾಧ್ಯತೆ

12:51 AM Oct 03, 2020 | mahesh |

ಪಾಟ್ನಾ: ಬಿಜೆಪಿ ಮತ್ತು ಜೆಡಿಯು ಮೈತ್ರಿ ಕೂಟದಲ್ಲಿಯೇ ಮುಂದುವರಿಯಬೇಕೋ ಬೇಡವೋ ಎಂಬ ಬಗ್ಗೆ ಲೋಕಜನ ಶಕ್ತಿ ಪಕ್ಷ ಶನಿವಾರ ನಿರ್ಧರಿಸಲಿದೆ. ಸ್ಥಾನ ಹಂಚಿಕೆ ನಿಟ್ಟಿನಲ್ಲಿ ಶೀಘ್ರವೇ ಮಾತುಕತೆ ನಡೆಸಬೇಕು ಎಂದು ಕೇಂದ್ರ ಸಚಿವ ರಾಂ ವಿಲಾಸ್‌ ಪಾಸ್ವಾನ್‌, ಪುತ್ರ-ಸಂಸದ ಚಿರಾಗ್‌ ಪಾಸ್ವಾನ್‌ ಒತ್ತಾಯಿಸುತ್ತಿರುವಂತೆಯೇ ಎಲ್‌ಜೆಪಿ ಸಂಸದೀಯ ಮಂಡಳಿ ಸಭೆ ಪಾಟ್ನಾದಲ್ಲಿ ನಡೆಯಲಿದೆ.

Advertisement

243 ಸ್ಥಾನಗಳ ಬಿಹಾರ ವಿಧಾನಸಭೆಯಲ್ಲಿ ಎಲ್‌ಜೆಪಿ 143 ಸ್ಥಾನಗಳಲ್ಲಿ ಸ್ಪರ್ಧಿಸುವ ಬಗ್ಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಈಗಾಗಲೇ ಮಾಹಿತಿ ನೀಡಿದೆ. ಹೀಗಾಗಿ, ಬಿಜೆಪಿಯ ಇಬ್ಬರೂ ಮುಖಂಡರ ಜತೆಗೆ ಚಿರಾಗ್‌ 2 ಬಾರಿ ಮಾತುಕತೆ ನಡೆಸಿದ್ದಾರೆ. ಗುರುವಾರವೇ ಬಿಜೆಪಿ ಯ ಹಿರಿಯ ನಾಯಕರ ಸಭೆಯಲ್ಲಿ ಬಿಹಾರ ವಿಧಾನಸಭೆ ಚುನಾವಣೆಗಾಗಿ ಸ್ಥಾನ ಹೊಂದಾಣಿಕೆ ಮಾತುಕತೆಗಳನ್ನು ಶೀಘ್ರ ದಲ್ಲಿಯೇ ಪೂರ್ತಿಗೊಳಿಸಲು ನಿರ್ಧರಿಸ ಲಾಗಿದೆ. ರವಿವಾರ ಬಿಜೆಪಿಯ ಚುನಾ ವಣ ಸಮಿತಿ ಸಭೆ ನಡೆಯಲಿದೆ. ಅಲ್ಲಿ ಸಮ್ಮತದ ನಿರ್ಧಾರವಾದ ಬಳಿಕವೇ ಪಟ್ಟಿ ಪ್ರಕಟವಾಗಲಿದೆ.

ಬಿಹಾರದ ಎನ್‌ಡಿಎ ಘಟಕಕ್ಕೆ ಮಾಜಿ ಸಿಎಂ ಜಿತನ್‌ ರಾಂ ಮಾಂಝಿ ಅವರ ಹಿಂದು ಸ್ತಾನ್‌ ಅವಾಮ್‌ ಮೋರ್ಚಾ (ಎಚ್‌ಎಎಂ) ಮರಳಿ ಸೇರ್ಪಡೆಯಾಗಿದೆ. ಹೀಗಾಗಿ, ಬಿಜೆಪಿ-ಜೆಡಿಯು ನಾಯಕರು ಈಗಾಗಲೇ ಪಾಟ್ನಾದಲ್ಲಿ ಸ್ಥಾನ ಹೊಂದಾಣಿಕೆ ಮಾತು ಕತೆ ನಡೆಸಿ, ಎಲ್‌ಜೆಪಿಗೆ ಬಿಜೆಪಿ ಕೋಟಾ ದಿಂದ ಮತ್ತು ಎಚ್‌ಎಎಂಗೆ ಜೆಡಿಯು ಕೋಟಾದಿಂದ ಸ್ಥಾನಗಳನ್ನು ಕೊಡು ವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.

ಸ್ಥಾನ ಹೊಂದಾಣಿಕೆ ಅಂತಿಮ: ಮತ್ತೂಂದೆಡೆ ಕಾಂಗ್ರೆಸ್‌-ಆರ್‌ಜೆಡಿ- ಎಡಪಕ್ಷಗಳನ್ನೊಳಗೊಂಡ ಮಹಾಮೈತ್ರಿ ಕೂಟ ಸ್ಥಾನ ಹೊಂದಾಣಿಕೆಯ ಮಾತುಕತೆ ಅಂತಿಮ ಗೊಳಿಸಿವೆ. ಕಾಂಗ್ರೆಸ್‌ 70, ಎಡಪಕ್ಷಗಳಿಗೆ 30 ಸ್ಥಾನಗಳು ಸಿಕ್ಕಿವೆ. ಗಮನಾರ್ಹ ಅಂಶವೆಂದರೆ ಕಾಂಗ್ರೆಸ್‌ಗೆ ಬೇಕಾಗಿರುವ ಸ್ಥಾನಗಳು ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next