ಪಾಟ್ನಾ: ಬಿಹಾರದ ಜಾತಿ ಗಣತಿಯ ಪ್ರಕಾರ, ರಾಜ್ಯದ ಜನಸಂಖ್ಯೆಯ ಶೇ.95.49 ರಷ್ಟು ಮಂದಿಯ ಬಳಿ ಯಾವುದೇ ವಾಹನಗಳು ಇಲ್ಲ. ಅಚ್ಚರಿಯಾದರೂ ಇದು ಸತ್ಯ. ಗಣತಿಯ ಪ್ರಕಾರ ಶೇ.3.8ರಷ್ಟು ನಾಗರಿಕರು ದ್ವಿಚಕ್ರ ವಾಹನಗಳನ್ನು ಹೊಂದಿದ್ದು, ಶೇ. 0.11ರಷ್ಟು ಮಂದಿ ಮಾತ್ರ ಸ್ವಂತ ಕಾರುಗಳನ್ನು ಹೊಂದಿದ್ದಾರೆ.
ಬಿಹಾರ ವಿಧಾನಸಭೆ ಮತ್ತು ಪರಿಷತ್‌ನಲ್ಲಿ ಮಂಡಿಸಲಾಗಿರುವ ವರದಿಯ ಪ್ರಕಾರ 45,78,669 ಮಂದಿ (ಒಟ್ಟು ಜನಸಂಖ್ಯೆಯ ಶೇ.3.5) ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದರೆ, 2.17 ಲಕ್ಷ ಮಂದಿ ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಈ ಪೈಕಿ 23,738 ಮಂದಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಇತರ ದೇಶಗಳಲ್ಲಿದ್ದಾರೆ.
ರಾಜ್ಯದಲ್ಲಿರುವ 13.07 ಕೋಟಿ ಜನರ ಪೈಕಿ 12.48 ಕೋಟಿ ಜನರ ಬಳಿ ಯಾವುದೇ ವಾಹನಗಳು ಇಲ್ಲ. 49.68 ಲಕ್ಷ ನಾಗರಿಕರ ಬಳಿ ಸ್ವಂತ ದ್ವಿಚಕ್ರ ವಾಹನಗಳಿವೆ ಹಾಗೂ 5.72 ಲಕ್ಷ ಮಂದಿ ಸ್ವಂತ ನಾಲ್ಕು ಚಕ್ರಗಳ ವಾಹನವಿದೆ. ಕೇವಲ 1.67 ಲಕ್ಷ ಜನರ ಬಳಿ ಸ್ವಂತ ಟ್ರ್ಯಾಕ್ಟರ್‌ಗಳಿವೆ.
13.07 ಕೋಟಿ ಬಿಹಾರದ ಒಟ್ಟು ಜನಸಂಖ್ಯೆ
12.48 ಕೋಟಿಸ್ವಂತ ವಾಹನ ಇಲ್ಲದಿರುವವರು
49.68 ಲಕ್ಷ ದ್ವಿಚಕ್ರ ವಾಹನ ಇರುವವರು
5.72 ಲಕ್ಷ ನಾಲ್ಕು ಚಕ್ರಗಳ ವಾಹನ ಇರುವವರು
1.67 ಲಕ್ಷ ಟ್ರ್ಯಾಕ್ಟರ್ ಹೊಂದಿರುವವರು