Advertisement

Bihar: 850 ಕೋಟಿ ರೂ.ಮೌಲ್ಯದ ವಿಕಿರಣಶೀಲ ಲೋಹ ವಶ

01:08 AM Aug 11, 2024 | Team Udayavani |

ಪಟ್ನಾ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 850 ಕೋಟಿ ರೂ. ಬೆಲೆಯುಳ್ಳ ವಿಕಿರಣಶೀಲ ಕ್ಯಾಲಿಫೋರ್ನಿ ಯಮ್‌ ಲೋಹವನ್ನು ಕಳ್ಳ ಸಾಗಣೆ ನಡೆಸುತ್ತಿದ್ದ ಮೂವರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 50 ಗ್ರಾಂ ಕ್ಯಾಲಿಫೋರ್ನಿಯಮ್‌ ಮತ್ತು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೋಪಾಲ್‌ಗ‌ಂಜ್‌ ಎಸ್‌ಪಿ ಹೇಳಿದ್ದಾರೆ. ವಶಕ್ಕೆ ಪಡೆದಿರುವ ವಸ್ತುವನ್ನು ನಿರ್ವಹಿಸಲು ಮತ್ತು ಹೆಚ್ಚಿನ ತನಿಖೆಗೆ ವಿಶೇಷ ವಿಧಿ ವಿಜ್ಞಾನ ತಜ್ಞರನ್ನು ನಿಯೋಜಿಸಲಾಗಿದೆ. ಪರಮಾಣು ಶಕ್ತಿ ಇಲಾಖೆಗೂ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next