ಪಟ್ನಾ: ಉತ್ತರ ಭಾರತದ ರಾಜ್ಯಗಳಲ್ಲಿ ಮುಂಗಾರು ಬಲಗೊಂಡಿದ್ದು, ಭಾರೀ ಮಳೆಯಾಗು ತ್ತಿದೆ. ಬಿಹಾರ ರಾಜ್ಯದಲ್ಲಿ ಬುಧವಾರ-ಗುರುವಾರಗಳ 48 ತಾಸುಗಳ ಅವಧಿಯಲ್ಲಿ ಸಿಡಿಲು ಬಡಿದು 83 ಮಂದಿ ಮೃತಪಟ್ಟು, 30 ಜನರು ಗಾಯಗೊಂಡಿದ್ದಾರೆ.
ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಬಿಹಾರದಲ್ಲಿ 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿ ರುವುದು ಬೇಸರ ತರಿಸಿದೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರದ ರಾಜಧಾನಿ ದಿಲ್ಲಿಗೆ ಎರಡು-ಮೂರು ದಿನಗಳಲ್ಲಿ ನೈಋತ್ಯ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.
ಉತ್ತರಾಖಂಡ, ಜಮ್ಮು- ಕಾಶ್ಮೀರ, ಲಡಾಖ್ ಮತ್ತಿತರ ಪ್ರದೇಶಗಳನ್ನು ಕೂಡ ಸದ್ಯವೇ ಮುಂಗಾರು ಆವ ರಿಸಲಿದೆ. ಜೂ.26-27ರ ಅವಧಿಯಲ್ಲಿ ಕೇರಳ ದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.