Advertisement
ಒಂದು ಹಿಂದಿ ಚಿತ್ರವಾದರೆ ಮತ್ತೂಂದು ತೆಲುಗು ಮೂಲದಿಂದ ಆರಂಭವಾದ ಪ್ಯಾನ್ ಇಂಡಿಯಾ ಸಿನಿಮಾ. ಸದ್ಯ ಈ ಎರಡೂ ಸಿನಿಮಾಗಳು ಸಿನಿಮಾ ಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿರುವುದಂತೂ ಸುಳ್ಳಲ್ಲ. ಆರಂಭದಲ್ಲಿ ಈ ಎರಡು ಚಿತ್ರಗಳು ಡೇಟ್ ಅನೌನ್ಸ್ ಮಾಡಿದಾಗ ಅನೇಕರು “ಡಂಕಿ’ ಸಿನಿಮಾ ತನ್ನ ಬಿಡುಗಡೆಯನ್ನು ಮುಂದಕ್ಕೆ ಹಾಕಬಹುದು ಎಂದುಕೊಂಡಿದ್ದರು. ಆದರೆ, ಚಿತ್ರತಂಡ ಮಾತ್ರ ತನ್ನ ನಿರ್ಧಾರ ಬದಲಿಸಲೇ ಇಲ್ಲ.
Related Articles
Advertisement
ಯಾವುದೇ ಸಿನಿಮಾ ತಂಡವಾದರೂ ತನ್ನ ಬಿಡುಗಡೆಯ ಸ್ಟ್ರಾಟಜಿ ಯನ್ನು ರಿಲೀಸ್ ದಿನಾಂಕದ ಮುಂದಿನ ರಜಾ ಲೆಕ್ಕಾಚಾರದೊಂದಿಗೆ ಮಾಡುತ್ತದೆ. ಈಗ ಡಿಸೆಂಬರ್ 22ರಂದು ತೆರೆಕಾಣುತ್ತಿರುವ “ಡಂಕಿ’ ಹಾಗೂ “ಸಲಾರ್’ ಚಿತ್ರಗಳು ಕೂಡಾ ರಜಾ ಲೆಕ್ಕಾಚಾರ ದೊಂದಿಗೆ ತೆರೆಕಾಣುತ್ತಿವೆ. ಅದು ಕ್ರಿಸ್ಮಸ್ ರಜೆ. ಹೌದು, ಕ್ರಿಸ್ಮಸ್ ರಜಾ ಸಮಯ ದಲ್ಲಿ ಬಿಡುಗಡೆಯಾದರೆ, ತಮ್ಮ ಗಳಿಕೆಗೆ ಸಖತ್ ಪ್ಲಸ್ ಆಗುತ್ತದೆ ಎಂಬ ಲೆಕ್ಕಾಚಾರ ಈ ಸಿನಿಮಾಗಳದ್ದು. ಅದೇ ಕಾರಣದಿಂದ ಈ ಎರಡೂ ಚಿತ್ರಗಳು ಆ ದಿನಾಂಕಕ್ಕೇ ಬರುತ್ತಿವೆ.
ಶಾರುಖ್‌ಗೆ ಗೆಲುವು ಬೋನಸ್, ಪ್ರಭಾಸ್‌ಗೆ ಅನಿವಾರ್ಯ: “ಡಂಕಿ’ ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ಈಗಾಗಲೇ “ಮುನ್ನಾ ಭಾಯ್ ಎಂಬಿಬಿಸ್’, “ಪಿಕೆ’, “ಸಂಜು’ನಂತಹ ಹಿಟ್ ಚಿತ್ರಗಳನ್ನು ನೀಡಿರುವ ರಾಜ್‌ಕುಮಾರ್ ಹಿರಾನಿ, “ಡಂಕಿ’ ಸಿನಿಮಾದಲ್ಲೂ ಹೊಸ ಕಥೆಯನ್ನು ಕಟ್ಟಿಕೊಟ್ಟಿದ್ದಾರೆನ್ನ ಲಾಗಿದೆ. ಇದೇ ಕಾರಣದಿಂದ ಶಾರುಖ್ ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಆದರೆ, ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್‌ಗೆ ಈ ವರ್ಷ “ಪಠಾಣ್’ ಹಾಗೂ “ಜವಾನ್’ ಮೂಲಕ ಎರಡು ದೊಡ್ಡ ಗೆಲುವು ಸಿಕ್ಕಿದೆ. ಹಾಗಾಗಿ, “ಡಂಕಿ’ಯ ಗೆಲುವು ಬೋನಸ್ ಇದ್ದಂತೆ.
ಆದರೆ, ಪ್ರಭಾಸ್‌ಗೆ “ಸಲಾರ್’ ಚಿತ್ರದ ಗೆಲುವು ಕಮರ್ಷಿಯಲ್ ಆಗಿ ಅನಿವಾರ್ಯವಾಗಿದೆ. ಏಕೆಂದರೆ “ಬಾಹುಬಲಿ-2′ ನಂತರ ಬಂದ “ಸಾಹೋ’, “ರಾಧೆ ಶ್ಯಾಮ್’, “ಆದಿಪುರುಷ’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುವಲ್ಲಿ ವಿಫಲವಾದವು. ಹಾಗಾಗಿ, ಪ್ರಭಾಸ್ ಅಭಿಮಾನಿಗಳು ಈಗ “ಸಲಾರ್’ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ಚಿತ್ರವನ್ನು “ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲಂಸ್ ನಿರ್ಮಿಸಿದೆ.
ಈ ಹಿಂದೆ ಶಾರುಖ್ ಖಾನ್ ನಟನೆಯ “ಜೀರೋ’ ಹಾಗೂ ಯಶ್ ನಟನೆಯ “ಕೆಜಿಎಫ್’ ಚಿತ್ರಗಳು ಒಂದೇ ದಿನ ಬಿಡುಗಡೆ ಯಾಗಿದ್ದವು. ಇದರಲ್ಲಿ “ಕೆಜಿಎಫ್’ ಚಿತ್ರ ಗೆಲುವಿನ ನಗೆ ಬೀರಿತ್ತು.
ಡಂಕಿ 120 ಕೋಟಿ, ಸಲಾರ್ 400 ಕೋಟಿ ರೂ. ಬಜೆಟ್: ಈ ವಾರ ತೆರೆಕಾಣುತ್ತಿರುವ ಎರಡೂ ಚಿತ್ರಗಳು ಬಿಗ್‌ಬಜೆಟ್‌ನವು ಎಂಬುದು ಗಮನಾರ್ಹ ಅಂಶ. ಸಿನಿಪಂಡಿತರ ಲೆಕ್ಕಾಚಾರದ ಪ್ರಕಾರ, “ಡಂಕಿ’ ಸಿನಿಮಾದ ಬಜೆಟ್ 120 ಕೋಟಿ ರೂಪಾಯಿ. ಇನ್ನು, “ಸಲಾರ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬಂದಿದ್ದು, ಚಿತ್ರತಂಡವೇ ಹೇಳಿಕೊಂಡಂತೆ 400 ಕೋಟಿ ರೂಪಾಯಿ. ಹಾಗಾಗಿ, ಬಜೆಟ್ ವಿಚಾರದಲ್ಲೂ ಚಿತ್ರಗಳು ಸದ್ದು ಮಾಡುತ್ತಿವೆ.