Advertisement
ಬಂಧಿತರು ಬಿಹಾರ, ಆಂಧ್ರ, ಒಡಿಶಾ ದಿಂದ ಡ್ರಗ್ಸ್ ತಂದು ಟೆಕ್ಕಿಗೆ , ವಿದ್ಯಾರ್ಥಿಗಳು, ಇತರರಿಗೆ ಮಾರಾಟ ಮಾಡುತ್ತಿದ್ದರು. ಈ ಕುರಿತು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕೆ.ಆರ್.ಪುರದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡು ಪೊಟ್ಟಣಗಳಲ್ಲಿ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್ಗಳ ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆ ಯನ್ನು ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ನೈಜಿರಿಯಾದ ರೋಸೆಲೈಮ್ (40) ಬಂಧಿತ ವಿದೇಶಿ ಮಹಿಳೆ ಎಂದು ಹೇಳಿದರು.
Related Articles
Advertisement
ಬೆಂಗಳೂರು: ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ತಂದು ನಗರದಲ್ಲಿ ಮಾರಾಟಕ್ಕೆ ಮುಂದಾಗಿದ್ದ ನಾಲ್ವರು ಆರೋಪಿಗಳನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವೀರೇಶ್ ನಗರ ನಿವಾಸಿ ಶ್ರೀಕಾಂತ್(24), ಆರ್ .ಟಿ.ನಗರ ನಿವಾಸಿ ಮುನಿರಾಜ್(27), ಚಾಮುಂಡೇಶ್ವರಿ ನಗರದ ಚಂದ್ರಕಾಂತ್ (24) ಹಾಗೂ ಆನೇಕಲ್ ತಾಲೂಕಿನ ಬಾಲಕೃಷ್ಣ(35) ಬಂಧಿತರು.
ಆರೋಪಿಗಳ ಪೈಕಿ ಬಾಲಕೃಷ್ಣ ಈಗಾಗಲೇ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಈತನ ಸೂಚನೆ ಮೇರೆಗೆ ಇತರೆ ಆರೋಪಿಗಳು ಆಂಧ್ರ ಪ್ರದೇಶದಿಂದ ಬರುತ್ತಿದ್ದ ಮಾದಕ ವಸ್ತುಗಳನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 30.68 ಲಕ್ಷ ರೂ. ಮೌಲ್ಯದ 76 ಕೆ.ಜಿ. ಗಾಂಜಾ, 3 ಮೊಬೈಲ್, 1 ಬುಲೆರೋ ವಶಕ್ಕೆ ಪಡೆದುಕೊಳ್ಳಲಾಗಿದೆ. ಬನ್ನೇರುಘಟ್ಟದಿಂದ ಹೊಸೂರು ಕಡೆಗೆ ಹೋಗುವ ಕ್ರಿಶ್ಚಿಯನ್ ಸ್ಮಶಾನದ ಬಳಿ ಆರೋಪಿಗಳು ಡ್ರಗ್ಸ್ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾರೆ ಎಂದು ವಿವರಿಸಿದರು.
ಕಾಲೇಜು ಬಳಿ ಗಾಂಜಾ ಮಾರುತ್ತಿದ್ದ 4 ಮಂದಿ ಬಂಧಿಸಿದ ಪೊಲೀಸರು:
ಬೆಂಗಳೂರು: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ತಂದು ನಗರದಲ್ಲಿ ಮಾರಾಟಕ್ಕೆ ಮುಂದಾಗಿದ್ದ ನಾಲ್ವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಆಜಾದ್ನಗರ ನಿವಾಸಿಗಳಾದ ಮುಬಾರಕ್, ಚಾಂದ್, ಮೊಹಮ್ಮದ್ ಅಲಿ ಮತ್ತು ಕಬೀರ್ ಬಂಧಿತರು.
ಆರೋಪಿಗಳಿಂದ 74.53 ಲಕ್ಷ ರೂ. ಮೌಲ್ಯದ 93 ಕೆ.ಜಿ. ಗಾಂಜಾ, 1 ಟ್ರಕ್, 1 ಕಾರು ಮತ್ತು ನಾಲ್ಕು ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಠಾಣಾ ವ್ಯಾಪ್ತಿಯ ಕಾಲೇಜೊಂದರ ಬಳಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಬಾತ್ಮೀದಾರರ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಇಬ್ಬರು ಡ್ರಗ್ಸ್ ಪೆಡ್ಲರ್ಗಳ ಬಂಧನ:
ಬೆಂಗಳೂರು: ಬಿಹಾರ ಮತ್ತು ಒಡಿಶಾದಿಂದ ಮಾದಕ ವಸ್ತು ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಸನಾರುಲ್ಲಾ(36) ಮತ್ತು ಹಿಲೀಮ್ ಮಂಡಲ್(33) ಬಂಧಿತರು. ಆರೋಪಿಗಳಿಂದ 1.50 ಲಕ್ಷ ರೂ. ಮೌಲ್ಯದ 5 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಬಿಹಾರ ಮತ್ತು ಒಡಿಶಾದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು.
ಮನೆಯಲ್ಲಿ ಗಾಂಜಾ ಸಂಗ್ರಹ: 3 ಬಂಧನ
ಬೆಂಗಳೂರು: ಗಾಂಜಾ ಮಾರಾಟ ಮಾಡು ತ್ತಿದ್ದ ಆರೋಪದ ಮೇರೆಗೆ ಜೋನ್ಸ್, ಸ್ಟಾಲಿನ್, ಮರಿಯಾ ಸೆಲ್ವಾ ಎಂಬುವರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 15 ಲಕ್ಷ ರೂ. ಮೌಲ್ಯದ 15 ಕೆ.ಜಿ ಗಾಂಜಾ ಹಾಗೂ ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು, ಕನಕದಾಸ ಲೇಔಟ್ ಆರ್.ಎಸ್.ಪಾಳ್ಯದ ಮನೆಯೊಂದರಲ್ಲಿ ಆರೋಪಿಗಳು ಗಾಂಜಾ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದರು.
Bengaluru: ಬಸ್ನಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಮಹಿಳೆ ಬಂಧನ
ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಸ್ನಲ್ಲಿ ಮಹಿಳಾ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ, ನಗದು ಕಳವು ಮಾಡುತ್ತಿದ್ದ ಮಹಿಳೆಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಜಿಲ್ಲೆ ಕುಪ್ಪಂ ಮೂಲದ ಜ್ಯೋತಿ(30) ಬಂಧಿತೆ. ಆರೋಪಿಯಿಂದ 50 ಸಾವಿರ ರೂ. ನಗದು ಸೇರಿ 11.55 ಲಕ್ಷ ರೂ. ಮೌಲ್ಯದ 153 ಗ್ರಾಂ ಚಿನ್ನಾಭರಣ, 21 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯ ಲಾಗಿದೆ. ಸೊಣ್ಣೇನಹಳ್ಳಿಯ ನಿವಾಸಿಯೊಬ್ಬರು ತಮ್ಮ ಊರಾದ ಕೃಷ್ಣಗಿರಿಗೆ ಹೋಗಿ ವಾಪಸ್ ನಗರಕ್ಕೆ ಬಸ್ನಲ್ಲಿ ಬರುತ್ತಿದ್ದರು. ಹೆಬ್ಬಗೋಡಿಯ ನಾರಾಯಣ ಆಸ್ಪತ್ರೆ ಬಸ್ ನಿಲ್ದಾಣದ ಬಳಿ ಇಬ್ಬರು ಮಹಿಳೆಯರುಪರ್ಸ್ ಕದ್ದು ಮುಂದಿನ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದ್ದರು.