ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಮೌನವನ್ನು ಪ್ರಶ್ನಿಸಿ ಚರ್ಚೆಗೆ ಗ್ರಾಸವಾಗಿದ್ದ ನಟ ಪ್ರಕಾಶ್ ರೈ ಅವರಿಗೆ ಬಿಗ್ ಬಾಸ್ ವಿನ್ನರ್ ಒಳ್ಳೇ ಹುಡ್ಗ ಪ್ರಥಮ್ ಬಹಿರಂಗ ಸವಾಲು ಹಾಕಿದ್ದಾರೆ!
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ನಟ ಪ್ರಕಾಶ್ ರೈ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಥಮ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ರೀತಿ ಸವಾಲು ಹಾಕಿದ್ದಾರೆ.…
ತಮಗೆ ತಾವೇ ಹೇಳಿಕೊಳ್ಳುವಂತೆ ದೊಡ್ಡ ನಟ ಪ್ರಕಾಶ್ ರೈಯವರಿಗೆ ಬಹಿರಂಗ ಪ್ರಶ್ನೆ..ಏನ್ರಿ ಪ್ರಕಾಶ್ ರಾಜ್ ಸೋ ಕಾಲ್ಡ್ ದೊಡ್ಡ ನಟ?! ಅವತ್ತು ಗೌರಿ ಲಂಕೇಶ್ ಹತ್ಯೆಯಾದಾಗ “ಈ ದೇಶದಲ್ಲಿ ಏನಾಗ್ತಿದೆ? ಅದು ಇದು ಅಂತ ಬಾಯಿಗೆ ಬಂದಂಗೆ ಎಲ್ಲಾ ಕೇಳಿ ಕೊನೆಯದಾಗಿ #ಜಸ್ಟ್ ಆಸ್ಕಿಂಗ್ ಅಂತಿದ್ರಿ..ಇವತ್ತು ಪರೇಶ್ ಮೇಸ್ತಾ ವಿಕೃತ ರೀತಿಯಲ್ಲಿ ಹತ್ಯೆಯಾಗಿದೆ…ಈ ರಾಜ್ಯದಲ್ಲಿ ಏನಾಗ್ತಿದೆ ಅಂತ ಇವಾಗ ಕೇಳಲ್ವಾ ಸೋ ಕಾಲ್ಡ್ ದೊಡ್ಡ ನಟ (ಭಯಂಕರ)? ನರಕ ಅಂದ್ರೇನು ಅಂತ ಸಾಯೋಕೂ ಮುಂಚೆನೇ ತೋರಿಸಿದ್ದಾರೆ ಆ ನಾಯಿಗಳು…
ಎಲ್ಲರಿಗೂ ಒಂದೇ ನ್ಯಾಯ ಇರಬೇಕಲ್ವೇನ್ರಿ ರೈ?
ಹೊನ್ನಾವರದಲ್ಲಿ ಏನು ನಡೀತು ಅಂತ ಗೊತ್ತೇ ಇಲ್ವೇನ್ರಿ ಪ್ರಕಾಶ್ ರೈ ನಿಮಗೆ?
ನಾನು ಹಿಂದು ಮುಸ್ಲಿಂ ಅಂತ ಮಾತಾಡ್ತಿಲ್ಲ…ಮಾನವೀಯತೆ, ಮನುಷ್ಯತ್ವದ ಬಗ್ಗೆ ಮಾತಾಡ್ತಾ ಇದೀನಿ..
ಇದು just asking ಅಲ್ಲ…
#purposefully_asking