Advertisement
ಅರ್ಮಾನ್ ಮಲಿಕ್ ಅವರ ಪತ್ನಿಯ ಬಗ್ಗೆ ಮಾತನಾಡಿದ್ದಕ್ಕಾಗಿ ಸಹ ಸ್ಪರ್ಧಿ ವಿಶಾಲ್ ಪಾಂಡೆ (Vishal Pandey) ಅವರಿಗೆ ಅರ್ಮಾನ್ ಮಲಿಕ್ ಕಪಾಳಕ್ಕೆ ಬಾರಿಸಿರುವ ಘಟನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಅರ್ಮಾನ್ ಅವರನ್ನು ಮನೆಯಿಂದ ಹೊರ ಹಾಕಬೇಕೆಂದು ಅನೇಕರು ವಾದಿಸಿದ್ದರು.
Related Articles
Advertisement
ಈ ಸಂಬಂಧ ಸೋಮವಾರ (ಜುಲೈ 22ರಂದು) ಶಿವಸೇನಾ ಕಾರ್ಯದರ್ಶಿ ಮತ್ತು ವಕ್ತಾರೆ, ಶಾಸಕಿ ಮನಿಶಾ ಕಯಾಂಡೆ ಅವರು ಮುಂಬೈ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ಬಿಗ್ ಬಾಸ್ ರಿಯಾಲಿಟಿ ಶೋವನ್ನು ನಿಷೇಧಿಸುವಂತೆ ಒತ್ತಾಯಿಸಿ ದೂರು ದಾಖಲಿಸಿದ್ದರು.
ಇದೀಗ ವೈರಲ್ ವಿಡಿಯೋ ಕುರಿತು ಜಿಯೋ ಸಿನಿಮಾ ಸ್ಪಷ್ಟನೆ ನೀಡಿದೆ.
‘ಬಿಗ್ ಬಾಸ್ ಓಟಿಟಿ-3ಯಲ್ಲಿ ಪ್ರಸಾರ ಕಂಡಿದೆ ಎನ್ನಲಾದ ಅರ್ಮಾನ್-ಕೃತಿಕಾ ಅವರ ವೈರಲ್ ವಿಡಿಯೋ ನಕಲಿಯಾಗಿದೆ. ಈ ರೀತಿ ಮಾನಹಾನಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಮಾಡುವ ಯಾವುದೇ ವಿಷಯದ ಗುಣಮಟ್ಟ ಮತ್ತು ಸೂಕ್ತತೆಯನ್ನು ಖಚಿತಪಡಿಸಿಕೊಳ್ಳಲು ಜಿಯೋ ಸಿನಿಮಾ ಕಟ್ಟುನಿಟ್ಟಾದ ಪ್ರೋಗ್ರಾಮಿಂಗ್ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಹೊಂದಿದೆ. ಇಂತಹ ಯಾವುದೇ ವಿಷಯವನ್ನು ನಾವು ಹೊಂದಿಲ್ಲ. ವೈರಲ್ ಆಗಿರುವ ವೀಡಿಯೊ ಕ್ಲಿಪ್ ನಕಲಿಯಾಗಿದೆ ಎಂದು ಆಗಿದೆ ಎಂದು ಹೇಳಿದೆ.