ಮುಂಬೈ : ಹಿಂದಿ ಬಿಗ್ ಬಾಸ್ ಹೊಸ ಸೀಸನ್ ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದುವರೆಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಈ ಶೋ ಇದೀಗ ಮೊದಲ ಬಾರಿಗೆ ಒಟಿಟಿಯಲ್ಲಿ ಮಾತ್ರ ಪ್ರಸಾರವಾಗಲಿದೆ.
ಈ ಬಾರಿ ಬಿಗ್ ಬಾಸ್ ಮನೆಗೆ ಬರುವ ಸ್ಪರ್ಧಿಗಳ ಕುರಿತು ವೀಕ್ಷಕರಲ್ಲಿ ಕುತೂಹಲ ಮನೆ ಮಾಡಿದೆ. ಸದ್ಯ ಹೊರ ಬಿದ್ದಿರುವ ಮಾಹಿತಿ ಪ್ರಕಾರ ಯೋಗ ಗುರು ವಿವೇಕ್ ಮಿಶ್ರಾಗೆ ಆಫರ್ ನೀಡಲಾಗಿದೆಯಂತೆ. ಆದರೆ ಬಿಗ್ ಮನೆಯವರು ಈತನಲ್ಲಿ ಒಂದು ಬೇಡಿಕೆ ಇಟ್ಟಿದ್ದಾರಂತೆ. ಅದು ಏನಂದರೆ ಬಿಗ್ ಬಾಸ್ ಮನೆಯಲ್ಲಿ ಬೆತ್ತಲೆ ಯೋಗ ಮಾಡುವುದು.
ಹೌದು, ಈ ಹಿಂದೆ 7 ನೇ ಸೀಸನ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ವಿವೇಕ್ ಅವರಿಗೆ ಇದೀಗ ಮತ್ತೊಮ್ಮೆ ಆಫರ್ ಮಾಡಿದೆ. ಜೊತೆಗೆ ನಿತ್ಯ ಬಿಗ್ ಬಾಸ್ ಮನೆಯಲ್ಲಿ ಬೆತ್ತಲೆ ಯೋಗ ಮಾಡಬೇಕು ಎಂದು ವಾಹಿನಿಯವರು ವಿವೇಕ್ಗೆ ಕೇಳಿದ್ದರಂತೆ. ವಿವೇಕ್ ಕೂಡ ಒಪ್ಪಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ 50 ಲಕ್ಷ ರೂಪಾಯಿ ಸಂಭಾವನೆ ಕೇಳಿದ್ದಾರೆ.
ಟಿವಿಯಲ್ಲಿ ಪ್ರಸಾರ ಮಾಡುವಾಗ ಕೆಲ ಕಟ್ಟುಪಾಡುಗಳು ಇರುತ್ತವೆ. ಆದರೆ, ಒಟಿಟಿಯಲ್ಲಿ ಈ ಕಟ್ಟುಪಾಡುಗಳು ಇರುವುದಿಲ್ಲ. ಈ ಕಾರಣಕ್ಕೆ ವಿವೇಕ್ ಅವರನ್ನು ಅಪ್ರೋಚ್ ಮಾಡಲಾಗಿತ್ತು ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾತಾಡಿರುವ ವಿವೇಕ್, ‘ಬಿಗ್ ಬಾಸ್ಗೆ ಅರ್ಥವೇ ಇಲ್ಲ. ನಾನೇಕೆ ರಿಯಾಲಿಟಿ ಶೋನಲ್ಲಿ ಯೋಗ ಮಾಡಬೇಕು? ಬೆತ್ತಲೆ ಯೋಗ ತುಂಬಾನೇ ದುಬಾರಿ. ಈ ಕಾರಣಕ್ಕೆ ನಾನು 50 ಲಕ್ಷ ರೂಪಾಯಿ ಕೇಳಿದೆ. ಇದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನೆ ಮಾಡಿದ್ದಾರೆ. ಇದು ತುಂಬಾ ದುಬಾರಿ ಆಯಿತು ಎನ್ನುವ ಕಾರಣಕ್ಕೆ ವಾಹಿನಿಯವರು ವಿವೇಕ್ ಅವರನ್ನು ಸೇರ್ಪಡೆ ಮಾಡಿಕೊಂಡಿಲ್ಲ.