Advertisement
ಬಿಗ್ ಬಾಸ್ ಮನೆಯಲ್ಲಿ ವಾರವಿಡೀ ನಡೆದ ಸಂಗತಿಗಳ ಬಗ್ಗೆ ಕಿಚ್ಚ ಮಾತನಾಡಿದ್ದಾರೆ. ಜಗದೀಶ್ ಅವರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಹಂಸಾ ಅವರನ್ನು ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಸಾಫ್ಟ್ ಆಗಿಯೇ ಪಾಠ ಮಾಡಿದ್ದಾರೆ.
Related Articles
Advertisement
ಇದು ಬಿಗ್ ಬಾಸ್ ಮನೆ ಸರ್ ಪರಪ್ಪನ ಅಗ್ರಹಾರ ಜೈಲಲ್ಲ. ಇಲ್ಲಿ ರೂಲ್ಸ್ ಫಾಲೋ ಮಾಡಬೇಕು. ಇಲ್ಲಿ ಹೆಸರು ಮಾಡಿರುವವರು ಬಂದಿದ್ದಾರೆ ಎಂದು ಕಿಚ್ಚ ಖಡಕ್ ಆಗಿ ಹೇಳಿದ್ದಾರೆ.
ಸೂಪರ್ ಸಂಡೇ ವಿತ್ ಕಿಚ್ಚನ ಜತೆಯಲ್ಲಿ ಇಂದು ಕೂಡ ಅನೇಕ ಸಂಗತಿಗಳ ಬಗ್ಗೆ ಸುದೀಪ್ ಮಾತನಾಡಲಿದ್ದಾರೆ. ಅದಲ್ಲದೇ ಇಂದು ಈ ಸೀಸನ್‌ನ ಮೊದಲ ಎಲಿನೇಷನ್ ಆಗಲಿದೆ.
ಎಲಿಮಿನೇಷನ್‌ನಿಂದ ಪಾರಾದವರು ಯಾರು..: ಬಿಗ್ ಬಾಸ್ ಮನೆಯಲ್ಲಿ ಈ ವಾರ 9 ಮಂದಿ ನಾಮಿನೇಟ್ ಆಗಿದ್ದರು. ಈ ಪೈಕಿ ಭವ್ಯಾ ಅವರು ಮೊದಲ ಸ್ಪರ್ಧಿಯಾಗಿ ಎಲಿಮಿನೇಷನ್ ತೂಗುಗತ್ತಿನಿಂದ ಪಾರಾಗಿದ್ದಾರೆ. ಗೌತಮಿ,ಮಾನಸ ಅವರು ಇಂದಿನ ಸಂಚಿಕೆಯಲ್ಲಿ ಸೇಫ್ ಆಗಿದ್ದಾರೆ. ಶಿಶಿರ್ ಶಾಸ್ತ್ರಿ, ಜಗದೀಶ್, ಮೋಕ್ಷಿತಾ, ಚೈತ್ರಾ, ಯಮುನಾ, ಹಂಸಾ ಇವರಲ್ಲಿ ಒಬ್ಬರು ಮನೆಯಿಂದ ಆಚೆಯಿಂದ ಬರಲಿದ್ದಾರೆ. ಈ ವಾರ ಮನೆಯಿಂದ ಹೊರಗೆ ಹೋಗೋದುನ ಇವರೇನಾ..? : ಎಲಿಮಿನೇಷನ್ ಲಿಸ್ಟ್ 6 ಮಂದಿ ಉಳಿದಿದ್ದಾರೆ. ಇವರಲ್ಲಿ ಒಬ್ಬರು ಆಚೆ ಹೋಗಲಿದ್ದಾರೆ. ಮೂಲಗಳ ಪ್ರಕಾರ ಮೊದಲ ವಾರದಲ್ಲಿ ದೊಡ್ಮನೆಯೊಳಗೆ ಜೋರಾಗಿಯೇ ಸದ್ದು ಮಾಡಿದ್ದ ಯಮುನಾ ಶ್ರಿನಿಧಿ (Yamuna Srinidhi) ಅವರು ಮನೆಯಿಂದ ಆಚೆ ಹೋಗಲಿದ್ದಾರೆ ಎನ್ನಲಾಗಿದೆ.