Advertisement

ಬಿಗ್ ಬಾಸ್ –ಬಿಗ್ ಶಾಕ್..! ಅರ್ಧದಲ್ಲಿ ನಿಂತ 8ನೇ ಸೀಸನ್

06:34 PM May 08, 2021 | Team Udayavani |

ಬೆಂಗಳೂರು : ಕನ್ನಡ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್  – 8  ತನ್ನ 71 ದಿನಗಳ ಜರ್ನಿಯನ್ನು ನಾಳೆಗೆ ಕೊನೆಗೊಳಿಸಲಿದೆ.

Advertisement

ಇತ್ತೀಚಿಗೆ ವಾರಾಂತ್ಯದ ಶೋ ನಡೆಸಲು ಕಿಚ್ಚ ಸುದೀಪ್ ಕೂಡ ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮ ನಡೆಸಿ ಕೊಡಲು ಬಂದಿರಲಿಲ್ಲ. ಇದೀಗ ಬಿಗ್ ಬಾಸ್ ಅಧಿಕೃತವಾಗಿ ತನ್ನ 8 ನೇ ಆವೃತ್ತಿಯನ್ನು ರದ್ದುಗೊಳಿಸುತ್ತಿರುವ ಬಗ್ಗೆ ಸುದ್ದಿ ಹೊರ ಬಂದಿದೆ.

ಬಿಗ್ ಬಾಸ್ ಮನೆಯೊಳಗಡೆ ಇರುವ ಮಂದಿಗೆ ಸದ್ಯ ಕೋವಿಡ್ ವಿಷಯದಲ್ಲೊ ಹೊರಗೆ ನಡೆಯುತ್ತಿರುವ ಸಂಕಷ್ಟ, ಸಂಕಟಗಳು ತಿಳಿಯುತ್ತಿಲ್ಲ. ಹೊರಗಿನ ಪರಿಸ್ಥಿತಿಯನ್ನು ನೋಡುತ್ತಿದ್ದರೆ ನಿಜಕ್ಕೂ ಮನಸ್ಸಿಗೆ ತುಂಬಾ ಬೇಜಾರ್ ಆಗುತ್ತದೆ. ಸ್ಪರ್ಧಿಗಳೀಗ ಐಸೋಲೇಷನ್ ನಲ್ಲಿ ಇರುವುದರಿಂದ ಸುರಕ್ಷಿತವಾಗಿದ್ದಾರೆ. ಅವರನ್ನು ನಾಳೆ ಮನೆಯ ಹೊರಗೆ ಕರೆದು ಸುರಕ್ಷಿತವಾಗಿ ಅವರವರ ಮನೆಗೆ ಕಳುಹಿಸಿ ಕೊಡುತ್ತೇವೆ ಎಂದು ಕಾರ್ಯಕ್ರಮ ಪ್ರಸಾರವಾಗುತ್ತಿರುವ ವಾಹಿನಿಯ ಬ್ಯುಸಿ ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next