ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯ ವಾರದ ಕಥೆ ಕೇಳಲು ಕಿಚ್ಚ ಸುದೀಪ್ (Kiccha Sudeeep) ಬಂದಿದ್ದಾರೆ. ಈ ವಾರ ನಡೆದ ಕೆಲ ವಿಚಾರಗಳ ಬಗ್ಗೆ ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆ ನಡೆಯಲಿದೆ.
ಮಹಾರಾಜ – ಯುವರಾಣಿ ಅವರ ಆಟವೇ ಈ ವಾರ ಹೈಲೈಟ್ ಆಗಿತ್ತು. ಮಂಜು, ಮೋಕ್ಷಿತಾ ರಾಜ – ಯುವರಾಣಿಯಾಗಿ ಬಿಗ್ ಬಾಸ್ ಮನೆಯನ್ನು ರಾಜ ಮನೆತನವನ್ನಾಗಿ ಮಾಡಿದ್ದರು. ಉಳಿದವರು ಸಾಮ್ರಾಜ್ಯದ ಪ್ರಜೆ ಹಾಗೂ ಸೇನಾಧಿಪತಿಗಳಾಗಿದ್ದರು.
ವೈಯಕ್ತಿಕವಾಗಿ ಕೆಲ ಸ್ಪರ್ಧಿಗಳನ್ನು ಟಾರ್ಗೆಟ್ ಮಾಡುವ ರೀತಿ ವಾರದ ಟಾಸ್ಕ್ ನಡೆದಿತ್ತು. ಮೋಕ್ಷಿತಾ – ಮಂಜು ನಡುವೆ ನೇರ- ನೇರಾ ವಾಗ್ವಾದ ನಡೆದಿತ್ತು. ಇನ್ನೊಂದೆಡೆ ರಜತ್ ಮಂಜು ಮೇಲೆ ರೇಗಾಡಿದ್ದರು.
ಈ ಎಲ್ಲದರ ಬಗ್ಗೆ ಸುದೀಪ್ ಅವರು ಮಾತನಾಡಲಿದ್ದಾರೆ. ಮಂಜು -ಮೋಕ್ಷಿತಾ ನಡುವೆ ನಡೆದ ಮಾತಿನ ಚಕಮಕಿ ಕುರಿತು ಮಾತನಾಡಿರುವ ಕಿಚ್ಚ, ಪರ್ಸನಲ್, ಪರ್ಸನಲ್ ಎಂದು ಹೇಳಿದ್ದಾರೆ. ಇದಕ್ಕೆ ಮೋಕ್ಷಿತಾ ಕೆಲವೊಂದು ಅವರ ಮಾತುಗಳು ನನಗೆ ತುಂಬಾ ಹರ್ಟ್ ಆಗಿದೆ. ನನಗೆ ಹರ್ಟ್ ಆಗಿದ್ದಕ್ಕೆ ನಾನು ಆ ರೀತಿ ರಿಯಾಕ್ಟ್ ಮಾಡೋಕೆ ಶುರು ಮಾಡಿದ್ದು ಎಂದಿದ್ದಾರೆ.
ಯುವರಾಣಿ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು ಅಂತ ಹೇಳಿದಾಗ ಗೌತಮಿ ಅವರೇ ನೀವದನ್ನು ನಿರಾಕರಿಸುತ್ತೀರಿ. ಮಹಾರಾಜರ ಹಾಗೆ ಬೇರೆ ಅವರಿಗೆ ಆದೇಶ ಕೊಟ್ಟಹಾಗೆ ತಾವು ಕೊಡಬೇಕಿತ್ತು. ಹೇಳಿದ್ದಷ್ಟು ಮಾಡು ಅಂಥ. ಪ್ರಜೆ ಮಾತನಾಡುತ್ತಿದ್ದಾಗ ಗೌತಮಿ ಮಾತನಾಡುತ್ತಿದ್ದರು ಎಂದಿದ್ದಾರೆ.
ಸಂಬಂಧ ಸಂಬಂಧ ಅಂತೀರಾ ಆಮೇಲೆ ನನಗೆ ಮೋಸ ಆಯಿತು, ನಂಬಿಕೆ ದ್ರೋಹ ಆಯಿತು ಅಂತೀರಿ ಯಾರು ಹೇಳಿದ್ರು ನಂಬಿಯಂಥ ಎಂದು ಮೋಕ್ಷಿತಾ ಅವರಿಗೆ ಸುದೀಪ್ ಹೇಳಿದ್ದಾರೆ.