Advertisement

Bigg Boss Kannada 11: ಶೀಘ್ರ ಬಿಗ್‌ ಬಾಸ್‌ ಪ್ರೋಮೊ ರಿಲೀಸ್;‌ ಈ ಬಾರಿಯೂ ಕಿಚ್ಚನೇ ಕಿಂಗ್

02:32 PM Aug 18, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ -11(Bigg Boss Kannada-11) ಆರಂಭಕ್ಕೂ ಮುನ್ನ ಕುತೂಹಲ ಹೆಚ್ಚಾಗಿದೆ. ಈ ಬಾರಿ ಸ್ಪರ್ಧಿಗಳ ಜತೆ ನಿರೂಪಕ ಯಾರು ಎನ್ನುವ ಪ್ರಶ್ನೆಯೂ ವೀಕ್ಷಕರನ್ನು ಕಾಡಿದೆ.

Advertisement

ಆಯಾ ಭಾಷೆಯಲ್ಲಿ ಬಿಗ್‌ ಬಾಸ್‌ ಕಾರ್ಯಕ್ರಮದ ಹೆಚ್ಚಿನ ವೀಕ್ಷಕರಿದ್ದಾರೆ. ಬಿಗ್‌ ಬಾಸ್‌ ಮನೆಗೆ 100 ದಿನಗಳ ಕಾಲ ಕಿರುತೆರೆ, ಬೆಳ್ಳಿತೆರೆ, ಮಾಧ್ಯಮ, ರಾಜಕೀಯ, ಸಾಮಾಜಿಕ, ಸೋಶಿಯಲ್‌ ಮೀಡಿಯಾ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆಗೈದ, ವಿವಾದದ ಮೂಲಕ ಸುದ್ದಿಯಾದ ಒಂದಷ್ಟು ಜನರು ಸ್ಪರ್ಧಿಗಳಾಗಿ ಪ್ರವೇಶವನ್ನು ಪಡೆಯುತ್ತಾರೆ.

ಹಿಂದಿ ಬಿಗ್‌ ಬಾಸ್‌ ಬಳಿಕ ಕನ್ನಡ ಬಿಗ್‌ ಬಾಸ್‌ ಕಾರ್ಯಕ್ರಮಕ್ಕೆ ಹೆಚ್ಚಿನ ವೀಕ್ಷಕರಿದ್ದಾರೆ. ಅದಕ್ಕೆ ಒಂದು ಮುಖ್ಯ ಕಾರಣವೆಂದರೆ ಅದು ಕಾರ್ಯಕ್ರಮವನ್ನು ನಡೆಸಿಕೊಡುವ ಕಿಚ್ಚ ಸುದೀಪ್‌ (Kiccha sudeep) ಎಂದರೆ ತಪ್ಪಾಗದು. ಸೀಸನ್‌ ಗಳು ಮುಂದುವರೆಯುತ್ತಿದ್ದಂತೆ ಕಿಚ್ಚ ಅವರ ನಿರೂಪಣಾ ಶೈಲಿಯೂ ಅಷ್ಟೇ ಅಂದವಾಗಿ ಮೂಡಿಬರುತ್ತಿದೆ.

content-img

ಆದರೆ ಈ ಬಾರಿ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಶೋ ನಡೆಸಿಕೊಡುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇವರ ಬದಲಿದೆ ರಿಷಬ್‌ ಶೆಟ್ಟಿ ಅಥವಾ ರಮೇಶ್‌ ಅರವಿಂದ್‌  ಇರುತ್ತಾರೆ ಎನ್ನುವ ಊಹಾಪೋಹಾಗಳು ಹರಿದಾಡಿದೆ.

Advertisement

ಇದೀಗ ಸದ್ದಿಲ್ಲದೆ ಬಿಗ್‌ ಬಾಸ್‌ ಕನ್ನಡ ಸೀಸನ್‌ -11ರ ಮೊದಲ ಪ್ರೋಮೊ ಶೂಟ್‌ ಆಗಿದ್ದು, ಕಿಚ್ಚ ಸುದೀಪ್‌ ಅದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಹಬ್ಬಿದ್ದ ವದಂತಿಗಳಿಗೆ ಬ್ರೇಕ್‌ ಬಿದ್ದಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪ್ರೋಮೋಗೆ ಸಂಬಂಧಿಸಿದ ಕೆಲ ಫೋಟೋಗಳು ಹರಿದಾಡುತ್ತಿದೆ.

ಕಿಚ್ಚ ಸಖತ್‌ ಸ್ಟೈಲಿಸ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಇದೇ ಆಗಸ್ಟ್‌ ಕೊನೆ ವಾರ ಅಥವಾ ಸೆಪ್ಟೆಂಬರ್‌  ಮೊದಲ ವಾರದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ -11ರ ಪ್ರೋಮೋ ಝಲಕ್‌ ರಿವೀಲ್‌ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಯಾವಾಗ ಶೋ ಶುರು?:

ಬಿಗ್‌ ಬಾಸ್‌ ಕನ್ನಡ ಸೀಸನ್‌ -11ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಅಕ್ಟೋಬರ್‌ ಕೊನೆಯ ಅಥವಾ ಮೊದಲ ವಾರದಲ್ಲಿ ಹೊಸ ಸೀಸನ್‌ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಈ ನಡುವೆ ದೊಡ್ಮನೆಗೆ ಎಂಟ್ರಿ ಆಗುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೂ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸ್ಪರ್ಧಿಗಳು ಯಾರು?:

ಬಿಗ್‌ ಬಾಸ್‌ ಸೀಸನ್ 11 ಆರಂಭವಾಗಲಿದೆ ಎನ್ನುವ ದೂರದ ಮಾತು ಕೇಳಿ ಬರುತ್ತಿರುವ ಬೆನ್ನಲ್ಲೇ ಸ್ಪರ್ಧಿಗಳು ಯಾರು ಎನ್ನುವುದರ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ. ʼಮಜಾಭಾರತʼ ಖ್ಯಾತಿಯ ರಾಘವೇಂದ್ರ, ಯೂಟ್ಯೂಬರ್‌ ವರ್ಷಾ ಕಾವೇರಿ, ನಟ ತ್ರಿವಿಕ್ರಮ್‌ ,‘ಬೃಂದಾವನ’ ಧಾರಾವಾಹಿ ನಟ ವರುಣ್ ಆರಾಧ್ಯ, ತುಕಾಲಿ ಸಂತು ಪತ್ನಿ ಮಾನಸಾ, ಸುನೀಲ್ ರಾವ್, ಭವ್ಯಾ ಗೌಡ, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಸೇರಿದಂತೆ ಇತರರ ಹೆಸರು ಕೂಡ ಈ ಬಾರಿಯ ಬಿಗ್‌ ಬಾಸ್‌ ಸ್ಪರ್ಧಿಗಳ ಲಿಸ್ಟ್‌ ನಲ್ಲಿ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.