Advertisement
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೈತ್ರಾ ಅವರನ್ನು ಕಾರ್ಯಕ್ರಮದಿಂದ ತೆಗೆದುಹಾಕದೆ ಹೋದಲ್ಲಿ ವಾಹಿನಿ ವಿರುದ್ಧ ಕಾನೂನು ಸಮರ ಹೂಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Related Articles
Advertisement
ಅನೇಕ ಆರೋಪಗಳನ್ನು ತಮ್ಮ ಮೇಲೆ ಇರಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರನ್ನು ಖಾಸಗಿ ವಾಹಿನಿ ತನ್ನ ಟಿಆರ್‌ಪಿಗಾಗಿ ಬಿಗ್‌ಬಾಸ್ ಸೀಸನ್ -11ರಲ್ಲಿ ಮೂರನೇ ಸ್ಪರ್ಧಿಯಾಗಿ ಸೇರಿಸಿಕೊಂಡಿರುವುದು, ಅವರನ್ನು ಚಿತ್ರನಟ ಸುದೀಪ್ ಹೊಗಳಿ ಅಟ್ಟಕ್ಕೇರಿಸುತ್ತಿರುವುದು ವ್ಯವಸ್ಥೆಯ ದುರಂತವಾಗಿದೆ. ಇಂತಹ ಘಟನೆಗಳಿಂದಾಗಿ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ತಪ್ಪು ಮಾಡಿದವರು ವಿಜೃಂಭಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ. ನಾವು ಸಹ ಅನೇಕ ವರ್ಷಗಳಿಂದ ಬಿಗ್‌ಬಾಸ್ ಅಭಿಮಾನಿಯಾಗಿದ್ದು ಸಾಕಷ್ಟು ಉತ್ತಮ ಅಂಶಗಳನ್ನು ಅದರಿಂದ ಕಲಿತಿದ್ದೇವೆ. ಈ ಕಾರ್ಯಕ್ರಮದಲ್ಲಿ ಚೈತ್ರಾ ಅವರಿಗೆ ಅವಕಾಶ ಕಲ್ಪಿಸಿರುವುದು ನಮಗೆಲ್ಲಾ ಬೇಸರ ತಂದಿದೆ. ಈಗಾಗಲೇ ವಾಹಿನಿಗೆ ನೋಟಿಸ್ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಅವರನ್ನು ಕಾರ್ಯಕ್ರಮದಿಂದ ತೆಗೆದುಹಾಕದೆ ಹೋದಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ಸಾಗರ ನ್ಯಾಯಾಲಯದಲ್ಲಿ ದಾವೆ ಹೂಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುನೈನಾ ಮಾತನಾಡಿದರು. ಗೋಷ್ಠಿಯಲ್ಲಿ ರಂಜಿತ್, ನರೇಂದ್ರ, ಸಚಿನ್, ನವ್ಯ ಹಾಜರಿದ್ದರು.