Advertisement
ವಿವಿಧ ರೀತಿಯ ಅಧಿಕಾರ ಪಡೆಯುವ ಟಾಸ್ಕ್ ನ್ನು ಬಿಗ್ ಬಾಸ್ ನೀಡಿದ್ದಾರೆ. ವಿವಿಧ ಕಾರ್ಡ್ ಗಳಿದ್ದು, ಟಾಸ್ಕ್ ಆಡಿ ಗೆದ್ದ ತಂಡಗಳು ಕಾರ್ಡ್ ನ ಲಾಭ ಪಡೆದು ತಮಗೆ ಸಿಗುವ ಅಧಿಕಾರವನ್ನು ಪಡೆಯಬಹುದಾಗಿದೆ.
Related Articles
Advertisement
ಚೈತ್ರಾ, ಭವ್ಯ, ಗೌತಮಿ, ಐಶ್ವರ್ಯಾ ಅವರು ಜಿದ್ದಾಜಿದ್ದಿಯಾಗಿ ಟಾಸ್ಕ್ ಆಡಿದ್ದು, ಮಂಜು ಹಾಗೂ ಶಿಶಿರ್ ತಮ್ಮೊಳಗೆ ಒಪ್ಪಂದ ಮಾಡಿಕೊಂಡಿದ್ದಾರೆ
ಮೊದಲ ಸುತ್ತಿನಲ್ಲಿ ಶಿಶಿರ್ ತಂಡ ಗೆದ್ದಿದ್ದು ಎರಡನೇ ಸುತ್ತಿನಿಂದ ಗೌತಮಿ ಅವರ ತಂಡವಾದ ಟೀಮ್ ರೆಡ್ ನ್ನು ಹೊರಗೆ ಇಡಲು ಇಷ್ಟಪಡುತ್ತೇವೆ ಶಿಶಿರ್ ಹೇಳಿದ್ದಾರೆ.
ನಮ್ಮನ್ನು ಸೋಲಿಸೋಕೆ ಎರಡೆರಡು ತಂಡಗಳು ಒಟ್ಟಾಗುತ್ತಿದೆ ಎಂದು ಚೈತ್ರಾ ಹೇಳಿದ್ದು, ಈ ತರ ಆಟ ಆಡೋಕೆ ಆಟಗಳು ಆಡಬೇಕಾ ಎಂದು ಗೌತಮಿ ಗರಂ ಆಗಿದ್ದಾರೆ.
ಹನುಮಂತಣ್ಣ ನಿಮ್ ಕ್ಯಾಪ್ಟನ್ಸಿ ಅಲ್ಲೇ ಈ ನಿಯತ್ತು ನೋಡಬೇಕಾಗಿತ್ತು ನಾನು. ವೋಟ್ ಕೊಟ್ಟ ಜನರಿಗೆ ಯಾವ ನಿಯತ್ತಿನ ಬಗ್ಗೆ ಉತ್ತರ ಕೊಡುತ್ತೀರಿ ನಾನು ನೋಡ್ತೀನಿ. ಜನ ನೋಡ್ತಾರೆ ಈ ನಿಯತ್ತನ್ನು ಎಂದು ಚೈತ್ರಾ ಹನುಮಂತು ಮೇಲೆ ರೇಗಾಡಿದ್ದಾರೆ.
ಎರಡನೇ ಸುತ್ತಿನಲ್ಲಿ ಮಂಜು ಅವರ ಹಸಿರು ತಂಡ ಗೆದ್ದಿದೆ. ನೀವು ನಿಯತ್ತಾಗಿ ಆಡಿಲ್ಲ ಎಂದು ಚೈತ್ರಾ, ಗೌತಮಿ, ಮೋಕ್ಷಿತಾ ಅವರು ಮಂಜು ಮೇಲೆ ರೇಗಾಡಿದ್ದಾರೆ. ಇದಕ್ಕೆ ಮಂಜು ನಾವು ಫೇರ್ ಗೇಮ್ ಆಡಿಲ್ಲ ಆದರೆ ಬುದ್ದಿವಂತಿಕೆ ಆಡಿದ್ದಾರೆ ಎಂದಿದ್ದಾರೆ.
ಚೈತ್ರಾ ಅವರ ತಂಡವನ್ನು ಮಂಜು ಮುಂದಿನ ಸುತ್ತಿನಿಂದ ಹೊರಗಿಟ್ಟಿದ್ದಾರೆ. ಮೂರನೇ ಸುತ್ತಿನಲ್ಲಿ ಮಂಜು ಅವರ ತಂಡ ಸುಲಭವಾಗಿ ಗೆದ್ದಿದ್ದಾರೆ.
ಚೈತ್ರಾ – ಶಿಶಿರ್ ಟಾಕ್ ವಾರ್:ಏನೆಂದೆ ಏನೆಂದ ಎಂದು ಶಿಶಿರ್ ಚೈತ್ರಾ ಮೇಲೆ ಮುಗಿಬಿದಿದ್ದಾರೆ. ನೀನು ಕರೆಕ್ಟ್ ಆಗಿ ಮಾತನಾಡ್ತೇನೆ. ನಿನ್ನ ತರ ಬರಗೆಟ್ಟ ಹಾಗೆ ಮಾತನಾಡಲ್ಲ. ನನ್ನನ್ನು ಅಣ್ಣ ಎನ್ನಬೇಡ ಎಂದು ಚೈತ್ರಾನ ಮೇಲೆ ಶಿಶಿರ್ ರೇಗಾಡಿದ್ದಾರೆ. ನಿಮ್ಮ ರಿಯಲ್ ಫೇಸ್ ಈಗ ಕಾಣುತ್ತಿದೆ ಎಂದು ಚೈತ್ರಾ ಹೇಳಿದ್ದಾರೆ. ಮಂಜು, ಗೌತಮಿ ಮೋಕ್ಷಿತಾ ಗೆಳೆತನದಲ್ಲಿ ಬಿರುಕು:
ಆಪ್ತವಾಗಿ ಜತೆಯಾಗಿದ್ದ ಮೋಕ್ಷಿತಾ, ಗೌತಮಿ ಮಂಜು ಅವರ ನಡುವೆ ಟಾಸ್ಕ್ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ. ಮೂರು ನಾಲ್ಕು ದಿನಗಳಿಂದ ಮಿಸ್ ಹೊಡೆಯುತ್ತಾ ಇದೆ. ಅವರೇ ಹೈಲೈಟ್ ಆಗಬೇಕೆಂದು ಮಾಡುತ್ತಿದ್ದಾರೆ. ನೀವು ಆಡಿದ ಗೇಮ್ ನಮಗೆ ಇಷ್ಟ ಆಗಿಲ್ಲವೆಂದು ಗೌತಮಿ ನೇರವಾಗಿಯೇ ಮಂಜು ಅವರಿಗೆ ಹೇಳಿದ್ದಾರೆ. ಇದು ನಾವು ನೋಡಿದ ಮಂಜಣ್ಣನಾ ಹೀಗೆ ಮಾಡುತ್ತಾ ಇದ್ದಾರ ಅಂಥ ನಂಬೋಕೆ ಆಗ್ತಾ ಇಲ್ಲ ಎಂದು ಮೋಕ್ಷಿತಾ, ಗೌತಮಿ ಮಂಜು ಅವರ ಮ್ಯಾಚ್ ಫಿಕ್ಸಿಂಗ್ ಗೇಮ್ ಪ್ಲ್ಯಾನ್ ನೋಡಿ ಕಣ್ಣೀರಿಟ್ಟಿದ್ದಾರೆ. ಈ ತರ ಆಡೋದಾದ್ರೆ ಯಾವತ್ತೂ ನಮ್ಮನ್ನು ನಿಮ್ಮ ತಂಡಕ್ಕೆ ಕರೆಯಬೇಡಿ ಎಂದು ಮಂಜು ಅವರ ಬಳಿ ಗೌತಮಿ ಹೇಳಿದ್ದಾರೆ. ಇದಾದ ಬಳಿಕ ಮಂಜು ತಮ್ಮ ಆಟದ ಶೈಲಿಗೆ ಮೋಕ್ಷಿತಾ, ಗೌತಮಿ ಬಳ ಸ್ಸಾರಿ ಕೇಳಿದ್ದಾರೆ. ಬಳಿಕ ಮೂವರು ಶೇಕ್ ಹ್ಯಾಂಡ್ ಕೊಟ್ಟು ಮತ್ತೆ ಜತೆಯಾಗಿದ್ದಾರೆ. ಶಿಶಿರ್, ಮಂಜು ಮೇಲೆ ಇತರೆ ತಂಡದ ಸದಸ್ಯರು ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಂಜು ಅವರ ತಂಡ ಇನ್ನೊಂದು ಸುತ್ತಿಗೆ ಕಿಕ್ ಔಟ್ ಕಾರ್ಡ್ ಆಯ್ಕೆ ಮಾಡಿದ್ದಾರೆ. ಮುಂದಿನ ಸುತ್ತಿಗೆ ಗೌತಮಿ ಅವರ ತಂಡವನ್ನು ಹೊರಗಿಟ್ಟಿದ್ದು, ಇದನ್ನು ಹನುಮಂತು ಅವರು ಆಕ್ಷೇಪ ವ್ಯಕ್ತಪಡಿಸಿದ್ದು ಚೈತ್ರಾ ಅವರ ತಂಡವನ್ನು ಹೊರಗಿಟ್ಟಿದ್ದಾರೆ. ಎರಡನೇ ಟಾಸ್ಕ್ ‘ಟವರಿನ ಸಿರಿ’ಯಲ್ಲಿ ಮಂಜು, ಶಿಶಿರ್, ಗೌತಮಿ ಅವರ ತಂಡ ಸೆಣಸಾಟ ನಡೆಸಿದೆ. ಇದರಲ್ಲಿ ಗೌತಮಿ ಅವರ ತಂಡ ಗೆದ್ದಿದೆ. ಇಮ್ಯೂನಿಟ್ ಕಾರ್ಡ್ ಬಳಸಿ ಗೌತಮಿ ಅನುಷಾ ಅವರನ್ನು ಸೇವ್ ಮಾಡಿದ್ದಾರೆ ಮೂವರನ್ನು ನಾಮಿನೇಟ್ ಮಾಡಿದ ಕ್ಯಾಪ್ಟನ್ ಹನುಮಂತು:
ಸೋತ ತಂಡಗಳ ಪೈಕಿ ಮೂವರನ್ನು ಹನುಮಂತು ನಾಮಿನೇಟ್ ಮಾಡಿದ್ದಾರೆ.ಗೋಲ್ಡ್ ಸುರೇಶ್ ಅವರು ಐದೈದು ನಿಮಿಷಕ್ಕೆ ಮಾತು ಬದಲಾಯಿಸುತ್ತಾರೆ ಅಂಥೇಳಿ ಹನುಮಂತು ನಾಮಿನೇಟ್ ಮಾಡಿದ್ದಾರೆ. ಆದರೆ ಇದಕ್ಕೆ ಹನುಮಂತು ಸುಮ್ಮನೆ ಸುಮ್ಮನೆ ಸ್ಟೇಟ್ ಮೆಂಟ್ ಕೊಡ್ಬೇಡಿ ಎಂದಿದ್ದಾರೆ. ಅದಕ್ಕೆ ಹನುಮಂತು ಕ್ಯಾಪ್ಟನ್ ನಾನು. ಇಲ್ಲಿ ಆಡೋಕೆ ಬಂದಿದ್ದೇನೆ ಎಂದಿದ್ದಾರೆ. ಮೋಕ್ಷಿತಾ, ಧನರಾಜ್ ಅವರ ಹೆಸರನ್ನು ಹೇಳಿ ನಾಮಿನೇಟ್ ಮಾಡಿದ್ದಾರೆ.