Advertisement

BBK:ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಪ್ರತಾಪ್; ಕಡೆಗಣನೆ,ಗುರೂಜಿ ಭವಿಷ್ಯದ ಭೀತಿಯೇ ಕಾರಣ?

02:12 PM Jan 04, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ ಕಾರ್ಯಕ್ರಮದಲ್ಲಿ ವೀಕ್ಷಕರಿಂದ ಅಪಾರ ಬೆಂಬಲ ಪಡೆದುಕೊಂಡಿರುವ ಡ್ರೋನ್‌ ಪ್ರತಾಪ್‌ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರ ಬೆಂಬಲಿಗರ ಚಿಂತಕ್ಕೆ ಕಾರಣವಾಗಿದೆ.

Advertisement

ಎರಡು ಮೂರು ದಿನಗಳಿಂದ ಪ್ರತಾಪ್‌ ಮನೆಯಲ್ಲಿ ಸಕ್ರಿಯವಾಗಿ ಯಾವ ವಿಚಾರದಲ್ಲೂ ಭಾಗಿಯಾಗುತ್ತಿಲ್ಲ. ಇತ್ತೀಚೆಗೆ ಗುರೂಜಿ ಮನೆಗೆ ಬಂದಾಗ ಪ್ರತಾಪ್‌ ಅವರ ಭವಿಷ್ಯ ನುಡಿದಿದ್ದರು. ಇದರಲ್ಲಿ ಮನೆಯಿಂದ ದೂರವಿರುವುದು ಒಳಿತು ಎಂದು ಹೇಳಿದ್ದರು. ಕಳೆದ ಮೂರು ವರ್ಷಗಳಿಂದ ಅಪ್ಪ- ಅಮ್ಮನಿಂದ ದೂರವಿದ್ದ ಪ್ರತಾಪ್ ಗುರೂಜಿಯ ಮಾತುಗಳನ್ನು ಕೇಳಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

ಇದರೊಂದಿಗೆ ಮನೆಯ ಟಾಸ್ಕ್‌ ಗಳಿಂದ ಅವರನ್ನು ಹೊರಗಿಟ್ಟಿದ್ದಾರೆ. ಸಂಗೀತಾ , ನಮೃತಾ ಅವರು “ನೀನು ಟಾಸ್ಕ್‌ ನಲ್ಲಿ ಪ್ಯಾನಿಕ್”‌ ಆಗ್ತೀಯಾ ಎಂದು ಹೇಳಿದ್ದಾರೆ. ಮನೆಯಲ್ಲಿ ಎಲ್ಲರಿಂದ ಅವಮಾನ ಹಾಗೂ ಹೀಯಾಳಿಸುವುದರಿಂದ ಮಾನಸಿಕವಾಗಿ ಪ್ರತಾಪ್‌ ಕುಗ್ಗಿ ಹೋಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಕಮೆಂಟ್‌ ಮಾಡಿದ್ದಾರೆ.

ಸದ್ಯ ಪ್ರತಾಪ್ ಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಫುಡ್‌ ಪಾಯ್ಸನ್‌  ನಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಆದರೆ ಮಾನಸಿಕವಾಗಿ ಕುಗ್ಗಿ ಹೋದ ಪ್ರತಾಪ್‌ ನೊಂದುಕೊಂಡು ಬಿಗ್‌ ಬಾಸ್‌ ಮನೆಯಲ್ಲಿ ಮಾತ್ರೆಗಳನ್ನು ಸೇವಿಸಿದ್ದಾರೆ ಎನ್ನುವ ಮಾತುಗಳೂ ಹರಿದಾಡುತ್ತಿದೆ. ಆದರೆ ಇದನ್ನು ಬಿಗ್‌ ಬಾಸ್‌ ಮೂಲ ಅಲ್ಲಗೆಳೆದಿದೆ.

ಶೀಘ್ರದಲ್ಲಿ ಪ್ರತಾಪ್‌ ದೊಡ್ಮನೆಗೆ ಮರಳಿದ್ದಾರೆ ಎನ್ನಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next