Advertisement

ಅನಿಲ್‌ ಕುಂಬ್ಳೆ ಮನೆಯಲ್ಲಿ ಬಿಗ್‌ಬಾಸ್‌ ಶೈನ್‌ ಶೆಟ್ಟಿ

10:06 AM Mar 06, 2020 | Lakshmi GovindaRaj |

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಕನ್ನಡ ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋ “ಬಿಗ್‌ ಬಾಸ್‌-7’ನೇ ಆವೃತ್ತಿಯ ವಿನ್ನರ್‌ ಪಟ್ಟವನ್ನು ನಟ ಶೈನ್‌ ಶೆಟ್ಟಿ ಮುಡಿಗೇರಿಸಿಕೊಂಡಿದ್ದರು. “ಬಿಗ್‌ಬಾಸ್‌’ ಮನೆಯಿಂದ ಹೊರಬಂದ ಶೈನ್‌ ಶೆಟ್ಟಿಗೆ ಅಭಿಮಾನಿಗಳ ಸಂಖ್ಯೆ ಕೂಡ ಏರಿಕೆಯಾಗಿದೆ.

Advertisement

ಸದ್ಯ ಶೈನ್‌ ಶೆಟ್ಟಿ ದೇವಸ್ಥಾನ ಪ್ರದಕ್ಷಣೆ, ಸ್ನೇಹಿತರ ಭೇಟಿ, ಅತಿಥಿಯಾಗಿ ಸಾರ್ವಜನಿಕ ಕಾರ್ಯ ಕ್ರಮಗಳಲ್ಲಿ ಭಾಗಿಯಾಗುವುದರಲ್ಲಿ ಬ್ಯುಸಿಯಾಗಿದ್ದಾರೆ. ಇವೆಲ್ಲದರ ನಡುವೆ ಶೈನ್‌ ಶೆಟ್ಟಿ, ಖ್ಯಾತ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಮನೆಗೆ ವಿಶೇಷ ಅತಿಥಿಯಾಗಿ ಭೇಟಿ ನೀಡಿದ್ದಾರೆ.

ಹೌದು, “ಬಿಗ್‌ಬಾಸ್‌’ ಮನೆಯಿಂದ ಹೊರಬಂದ ಮೇಲೆ ಸ್ವತಃ ಅನಿಲ್‌ ಕುಂಬ್ಳೆ, ಶೈನ್‌ ಶೆಟ್ಟಿಗೆ ಪೋನ್‌ ಮಾಡಿ ಮನೆಗೆ ಆಹ್ವಾನಿಸಿದ್ದರು. ಈ ಆಹ್ವಾನವನ್ನು ಸ್ವೀಕರಿಸಿದ ಶೈನ್‌ ಶೆಟ್ಟಿ, ಕುಂಬ್ಳೆ ಮನೆಗೆ ಭೇಟಿ ನೀಡಿ ಅವರ ಆತಿಥ್ಯವನ್ನು ಸ್ವೀಕರಿಸಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮಿಡಿಯಾಗಳಲ್ಲಿ ಬರೆದುಕೊಂಡಿರುವ ಶೈನ್‌ ಶೆಟ್ಟಿ, ಅನಿಲ್‌ ಕುಂಬ್ಳೆ ಫ್ಯಾಮಿಲಿ ಜೊತೆ ಇರುವ ಪೋಟೋಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಇದರ ನಡುವೆ ಶೈನ್‌ ಶೆಟ್ಟಿ ಇನ್ನೂ ಹೆಸರಿಡದ ಎರಡು ಸಿನಿಮಾಗಳಲ್ಲಿ ಮತ್ತೂಂದು ವೆಬ್‌ ಸೀರಿಸ್‌ನಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿಗಳು ಹೊರಬೀಳಬೇಕಿದೆ. ರಿಷಭ್‌ ಶೆಟ್ಟಿ ನಿರ್ದೇಶನದ “ರುದ್ರ ಪ್ರಯಾಗ’ ಚಿತ್ರದಲ್ಲೂ ಶೈನ್‌ ಶೆಟ್ಟಿ ನಟಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next