Advertisement
ಮೇ 1ರಂದು 2022 ಬೈಕ್‌ಗಳ ಮಹಾ ರ್ಯಾಲಿ, ಮೇ 2ರಂದು ವಚನ ಸಂಗೀತ ಮತ್ತು ನೃತ್ಯೋತ್ಸವ ಹಾಗೂ ಮೇ 3 ರಂದು ಮೆರವಣಿಗೆ ನಡೆಯಲಿದೆ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಮೇ 3ರಂದು ಸಂಜೆ 5ಕ್ಕೆ ಬಸವೇಶ್ವರ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮೆರವಣಿಗೆಗೆ ಚಾಲನೆ ನೀಡುವರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಷಟ್‌ಸ್ಥಲ ಧ್ವಜಾರೋಹಣ ಮಾಡುವರು ಎಂದು ತಿಳಿಸಿದರು.
ಬಸವ ಜಯಂತಿ ಪ್ರಯುಕ್ತ ಬಸವ ಭಕ್ತರು ತಮ್ಮ ಮನೆಗಳಿಗೆ ದೀಪಾಲಂಕಾರ ಮಾಡಿ, ಷಟ್‌ಸ್ಥಲ ಧ್ವಜಾರೋಹಣ ಮಾಡಬೇಕು ಎಂದು ಬಿಡಿಎ ಅಧ್ಯಕ್ಷ ಬಾಬುವಾಲಿ ತಿಳಿಸಿದರು. ಮೆರವಣಿಗೆಯಲ್ಲಿ ಶರಣರ ವೇಷಧಾರಿ ಮಕ್ಕಳು ಕುದುರೆ, ಒಂಟೆಗಳ ಮೇಲೆ ಇರಲಿದ್ದಾರೆ. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಕಳೆತಂದುಕೊಡಲಿದೆ ಎಂದು ಮೆರವಣಿಗೆ ಸಮಿತಿಯ ಅಧ್ಯಕ್ಷ ವಿರೂಪಾಕ್ಷ ಗಾದಗಿ ಹೇಳಿದರು.
ಈ ಬಾರಿ ಎಲ್ಲ ಸಮುದಾಯದವರು ಸೇರಿ ಬಸವ ಜಯಂತಿ ಆಚರಿಸುತ್ತಿರುವುದು ವಿಶೇಷವಾಗಿದೆ. ಶಾಹೀನ್ ಕಾಲೇಜಿನವರು ಚೌಬಾರಾ ಬಳಿ ಬಸವ ಜಯಂತಿ ಮೆರವಣಿಗೆಗೆ ಸ್ವಾಗತ ಕೋರಲಿದ್ದಾರೆ. ಪ್ರತಿ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಿ ಪೂಜೆ ಸಲ್ಲಿಸಬೇಕು ಎಂದು ಬಸವ ಜಯಂತಿ ಉತ್ಸವ ಸಮಿತಿಯ ಗೌರವ ಸಲಹೆಗಾರ ಶಿವಶರಣಪ್ಪ ವಾಲಿ ಮನವಿ ಮಾಡಿದರು.
ಉತ್ಸವ ಸಮಿತಿಯ ಗೌರವಾಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಕೋಶಾಧ್ಯಕ್ಷ ಡಾ| ರಜನೀಶ್ ವಾಲಿ, ಮುಖಂಡರಾದ ಬಸವರಾಜ ಬುಳ್ಳಾ, ಶರಣಪ್ಪ ಮಿಠಾರೆ, ದೀಪಕ್ ವಾಲಿ, ಅಶೋಕುಮಾರ ಕರಂಜಿ, ಯೋಗೇಂದ್ರ ಯದಲಾಪುರೆ, ಬಸವರಾಜ ಭತಮುರ್ಗೆ, ಆನಂದ ಘಂಟೆ, ಪ್ರಕಾಶ ಸಾವಳಗಿ, ನಂದಕುಮಾರ ಪಾಟೀಲ, ನಿತಿನ್ ನವಲಕಿಲೆ, ಸುರೇಶ ಹಳೆಂಬರ್, ಸಂಜುಕುಮಾರ ಪಾಟೀಲ, ವಿಶಾಲ್ ಪಾಟೀಲ, ಸುರೇಶ ಸ್ವಾಮಿ, ರವಿ ಪಾಟೀಲ ಇದ್ದರು.