Advertisement
ಜಿಲ್ಲೆಯಲ್ಲಿ 2017ರಲ್ಲಿ 4,267 ಪ್ರಕರಣ, 2018ರಲ್ಲಿ 4,061, 2019ರಲ್ಲಿ 3,230, 2020ರಲ್ಲಿ 225, 2021ರಲ್ಲಿ 66 ಪ್ರಕರಣ ಸೇರಿದಂತೆ ಒಟ್ಟು 11,849 ಪ್ರಕರಣಗಳಿಂದ ಇಲ್ಲಿಯವರೆಗೆ 13.98 ಲ.ರೂ. ದಂಡವನ್ನು ಪೊಲೀಸ್ ಇಲಾಖೆ ಸಂಗ್ರಹಿಸಿದೆ. ಆದರೂ ನಗರದಲ್ಲಿ ಕರ್ಕಶ ಹಾರ್ನ್ ಹಾಗೂ ನಿಗದಿತ ಶಬ್ದಕ್ಕಿಂತ ಹೆಚ್ಚು ಸದ್ದು ಮಾಡುವ ವಾಹನಗಳು ಸಾರ್ವಜನಿಕರ ನೆಮ್ಮದಿಯನ್ನು ಭಂಗ ಮಾಡಿದೆ.
Related Articles
Advertisement
ಹಾರ್ನ್ ನಿಷೇಧಿತ ಪ್ರದೇಶವೆಂದು ಗುರುತಿಸ ಲಾಗುವ ಶಾಲಾ ಕಾಲೇಜು, ಆಸ್ಪತ್ರೆ ಮೊದಲಾದ ಪರಿಸರ ದಲ್ಲಿಯೂ ಹಾರ್ನ್ ಹಾವಳಿ ಇದೆ. ಜತೆಗೆ ಉಡುಪಿ ನಗರ ಸಂಸ್ಕೃತ ಕಾಲೇಜಿನ ವೃತ್ತದ ಸುತ್ತಮುತ್ತಲಿನ ರಸ್ತೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸದ್ದು ಮಾಡುವ ಸೈಲೆನ್ಸರ್ ಅಳವಡಿಸಿಕೊಂಡು ರಾತ್ರಿ- ಹಗಲು ಎನ್ನುವ ವ್ಯತ್ಯಾಸವಿಲ್ಲದೆ ತಿರುಗುತ್ತಿರುವುದರಿಂದ ಸಾರ್ವ ಜನಿಕರು ಬೇಸತ್ತು ಹೋಗಿದ್ದಾರೆ.
ಕಾರ್ಯಾಚರಣೆ ಅಗತ್ಯವಿದೆ! :
ಸಂಚಾರಿ ಪೊಲೀಸರು ಕರ್ಕಶ ಹಾರ್ನ್ ಬಳಕೆ ಮಾಡುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಾರಾದರೂ ಇತ್ತೀಚಿನ ದಿನದಲ್ಲಿ ಬಹಳ ಅಪರೂಪ ಎನ್ನುವಂತಿದೆ. ಇಂತಹ ಕರ್ಕಶ ಹಾರ್ನ್ ಬಳಕೆ ಮಾಡುವವರ, ನಿರಂತರ ಹಾರ್ನ್ ಹಾಕಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುವವರ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಾಗಬೇಕಿದೆ.
ಸಂಚಾರ ನಿಷೇಧ! :
ಕೆಲವರು ಶೋಕಿಗಾಗಿ ಬೈಕ್‌ಗಳ ಸೈಲೆನ್ಸರ್‌ಗಳ ವಿನ್ಯಾಸ ಬದಲಿಸಿ ಹೆಚ್ಚಿನ ಶಬ್ದ ಬರುವಂತೆ ಮಾಡುವವರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಬೇಕು. ನಗರ ಪ್ರದೇಶದಲ್ಲಿ ಹಾಗೂ ಹೆಚ್ಚು ಜನರು ತಿರುಗಾಡುವ ಪ್ರದೇಶದಲ್ಲಿ ನಿಗದಿತ ಶಬ್ದಕ್ಕಿಂತ ಹೆಚ್ಚು ಸದ್ದು ಮಾಡುವ ವಾಹನಗಳ ಸಂಚಾರವನ್ನೇ ನಿಷೇಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಕಳೆದ 5 ವರ್ಷಗಳಲ್ಲಿ ದಾಖಲಾದ ಪ್ರಕರಣ, ಸಂಗ್ರಹವಾದ ದಂಡದ ಮೊತ್ತ
ಇಸವಿ ಪ್ರಕರಣ ದಂಡ
2017 4,267 4,13,600
2018 4,061 4,42,900
2019 3,230 3,96,300
2020 225 1,08,200
ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಕರ್ಕಶ ಹಾರ್ನ್ ಹಾಗೂ ನಿಗದಿತ ಶಬ್ದಕ್ಕಿಂತ ಹೆಚ್ಚು ಸದ್ದು ಮಾಡುವ ವಾಹನಗಳ ಓಡಾಟ ನಡೆಸಿದರೆ ಆ ವಾಹನಗಳ ನಂಬರ್ ಪ್ಲೇಟ್ ಸಂಖ್ಯೆಯನ್ನು ಪೊಲೀಸರಿಗೆ ನೀಡಿದರೆ ಅಂತಹ ವಾಹನದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಜತೆಗೆ ಜಿಲ್ಲಾದ್ಯಂತ ನಿರಂತವಾಗಿ ಕರ್ಕಶ ಹಾರ್ನ್ ಹಾಗೂ ಸೈಲೆನ್ಸರ್‌ಗಳ ವಿರುದ್ಧ ಕಾರ್ಯಾಚರಣೆ ಮಾಡಲಾಗಿದೆ. – ವಿಷ್ಣುವರ್ಧನ್‌ಪೊಲೀಸ್ ವರಿಷ್ಠಾಧಿಕಾರಿ ,ಉಡುಪಿ ಜಿಲ್ಲೆ.