Advertisement

ಲವ್ ಜಿಹಾದ್ ವಿರೋಧಿ ಮಸೂದೆಗೆ ಮಧ್ಯಪ್ರದೇಶ ಸಂಪುಟ ಹಸಿರು ನಿಶಾನೆ: 10 ವರ್ಷ ಜೈಲುಶಿಕ್ಷೆ

12:16 PM Dec 26, 2020 | Nagendra Trasi |

ಭೋಪಾಲ್:ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ನೂತನ ಲವ್ ಜಿಹಾದ್ ವಿರೋಧಿ ಮಸೂದೆಗೆ ಶನಿವಾರ(ಡಿಸೆಂಬರ್ 26, 2020) ಅಂಗೀಕಾರ ನೀಡಿದ್ದು, ಕಾನೂನು ಉಲ್ಲಂಘಿಸಿದವರಿಗೆ ಹತ್ತು ವರ್ಷ ಜೈಲುಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದೆ.

Advertisement

ನೂತನ ಕಾಯ್ದೆ ಪ್ರಕಾರ, ಬಲವಂತದ ಧಾರ್ಮಿಕ ಮತಾಂತರ ಮಾಡಿದಲ್ಲಿ ಒಂದು ವರ್ಷದಿಂದ ಐದು ವರ್ಷದವರೆಗೆ ಜೈಲುಶಿಕ್ಷೆ ಮತ್ತು ಕನಿಷ್ಠ 25 ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶ ಇದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.

“ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2020” ಅನ್ವಯ ಹಿಂದುಳಿದ ವರ್ಗ ಅಥವಾ ಹಿಂದುಳಿದ ಪಂಗಡದ ಅಪ್ರಾಪ್ತ, ಮಹಿಳೆ ಅಥವಾ ವ್ಯಕ್ತಿಯನ್ನು ಬಲವಂತವಾಗಿ ಮತಾಂತರಗೊಳಿಸಿದರೆ ಕನಿಷ್ಠ 2ರಿಂದ 10 ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ಕನಿಷ್ಠ 50 ಸಾವಿರ ರೂ. ದಂಡ ವಿಧಿಸಲು ಅವಕಾಶ ಇದೆ ಎಂದು ಮಿಶ್ರಾ ವಿವರಿಸಿದ್ದಾರೆ.

ಈಗಾಗಲೇ ಬಿಜೆಪಿ ಆಡಳಿತವಿರುವ ಉತ್ತರಪ್ರದೇಶ ಮತ್ತು ಹಿಮಾಚಲ್ ಪ್ರದೇಶ್ ಲವ್ ಜಿಹಾದ್ ನಿಗ್ರಹ ಮಸೂದೆಯನ್ನು ಜಾರಿಗೆ ತಂದಿದ್ದು, ಇದೀಗ ಮಧ್ಯಪ್ರದೇಶ ಮೂರನೇ ರಾಜ್ಯವಾಗಿ ಸೇರ್ಪಡೆಯಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next