Advertisement
“ನನ್ನ ರಾಜಕೀಯ ಜೀವನದುದ್ದಕ್ಕೂ ಗಾಂಧಿ ಕುಟುಂಬದೊಂದಿಗೆ ಮುಖಾಮುಖೀ ಭೇಟಿಯಾಗಿ ಚರ್ಚೆ ಮಾಡುತ್ತಿದ್ದೆ. ಆದರೆ ಕಳೆದ 10 ವರ್ಷಗಳಲ್ಲಿ ಒಮ್ಮೆಯೂ ಸೋನಿಯಾ ಗಾಂಧಿ ಜತೆ ಮಾತನಾಡಲು ಅವಕಾಶ ಸಿಗಲಿಲ್ಲ. ರಾಹುಲ್ ಗಾಂಧಿ ಜತೆ ಒಮ್ಮೆ ಮಾತ್ರ ಮುಖಾಮುಖೀ ಭೇಟಿಗೆ ಅವಕಾಶ ಸಿಕ್ಕಿದೆ. ಪ್ರಿಯಾಂಕಾ ಗಾಂಧಿ ಕೆಲವೊಮ್ಮೆ ಫೋನ್ ಮುಖಾಂತರ ಸಂಪರ್ಕಿಸುತ್ತಾರೆ’ ಎಂದು ಹೇಳಿದ್ದಾರೆ. ಈ ಎಲ್ಲ ವಿಚಾರಗಳನ್ನು ತಾವು ತಮ್ಮ ಹೊಸ ಪುಸ್ತಕವಾದ “ಮ್ಯಾವೆರಿಕ್ ಇನ್ ಪಾಲಿಟಿಕ್ಸ್’ನಲ್ಲಿ ಉಲ್ಲೇಖಿಸಿರುವಾಗಿಯೂ ತಿಳಿಸಿದ್ದಾರೆ.
2014ರ ಲೋಕಸಭಾ ಚುನಾವಣೆ ಸಮಯದಲ್ಲಿ ಪ್ರಣಬ್ ಮುಖರ್ಜಿ ಅವರಿಗೆ ಕಾಂಗ್ರೆಸ್ ನಾಯಕತ್ವ ನೀಡಿದ್ದರೆ ಪಕ್ಷಕ್ಕೆ ಹೀನಾಯ ಸೋಲಾಗುತ್ತಿರಲಿಲ್ಲ ಎಂದು ಅಯ್ಯರ್ ಹೇಳಿದ್ದಾರೆ. ಈ ಮೂಲಕ 2014ರ ಚುನಾವಣೆಯಲ್ಲಿ ನಾಯಕತ್ವ ವಹಿಸಿದ್ದ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. 2012ರಲ್ಲಿ ಸೋನಿಯಾ ಗಾಂಧಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಮನಮೋಹನ್ ಸಿಂಗ್‌ಗೆ 6 ಬೈಪಾಸ್ ಶಸ್ತ್ರಚಿಕಿತ್ಸೆಯಾಗಿದ್ದು ಕಾಂಗ್ರೆಸ್‌ಗೆ ಹಿನ್ನಡೆಯಾಯಿತು. ಒಂದು ವೇಳೆ 2012ರಲ್ಲಿ ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಿ ಮಾಡಿ, ಮನಮೋಹನ್ ಸಿಂಗ್ ಅವರನ್ನು ರಾಷ್ಟ್ರಪತಿ ಮಾಡಿದ್ದರೆ, ಕೇವಲ 44 ಸ್ಥಾನಗಳನ್ನು ಮಾತ್ರ ಗೆಲ್ಲುವಷ್ಟು ಹೀನಾಯ ಸ್ಥಿತಿಗೆ ಕಾಂಗ್ರೆಸ್ ತಲುಪುತ್ತಿರಲಿಲ್ಲ ಎಂದು ಹೇಳಿದ್ದಾರೆ.
Related Articles
2014ರಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ “ಚಾಯ್‌ವಾಲಾ’ ಎಂಬ ಹೇಳಿಕೆಯನ್ನು ತಾನು ನೀಡಿರಲಿಲ್ಲ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಅವರ ಹೊಸ ಪುಸ್ತಕವಾದ “ಮ್ಯಾವೆರಿಕ್ ಇನ್ ಪಾಲಿಟಿಕ್ಸ್’ನಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಸ್ವತಃ ಮೋದಿ ಅವರೇ ತಮ್ಮನ್ನು ಚಾಯ್‌ವಾಲಾ ಎಂದು ಕರೆದುಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
Advertisement