ನವದೆಹಲಿ/ಲೇಹ್: ಪಾಕಿಸ್ತಾನ ಮತ್ತು ಚೀನಾಗೆ ಹೊಂದಿಕೊಂಡಿರುವ ಗಡಿಯಲ್ಲಿ ಭಾರತದ ಸಾಮರ್ಥ್ಯ ಇನ್ನಷ್ಟು ಗಟ್ಟಿಯಾಗಿದೆ. ಈ ಎರಡು ದೇಶಗಳ ಕಿಡಿಗೇಡಿತನವನ್ನು ಹತ್ತಿಕ್ಕುವ ಸಲುವಾಗಿ ಗಡಿಗೆ ಹೊಂದಿಕೊಂಡಿರುವ ಆರು ರಾಜ್ಯಗಳಲ್ಲಿ 75 ಮಿಲಿಟರಿ ಮತ್ತು 2,180 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಗಿದೆ.
ಒಟ್ಟು 2,180 ಕೋಟಿ ರೂ. ವೆಚ್ಚದಲ್ಲಿ ಆರು ರಾಜ್ಯಗಳಲ್ಲಿ ಮೂಲ ಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ರಸ್ತೆಗಳು, ಸೇತುವೆಗಳು, ಹೆಲಿಪ್ಯಾಡ್‌ಗಳು ಸೇರಿದಂತೆ ಒಟ್ಟು 75 ಯೋಜನೆಗಳನ್ನು ರಾಜನಾಥ್ ಸಿಂಗ್ ಲೋಕಾರ್ಪಣೆಗೊಳಿಸಿದ್ದಾರೆ.
ಈ ಪೈಕಿ ಪ್ರಧಾನವಾಗಿರುವ ಯೋಜನೆಯೆಂದರೆ, ಲಡಾಖ್‌ನಲ್ಲಿರುವ ದೌಲತ್ ಬೇಗ್ ಓಲ್ಡಿಯಲ್ಲಿರುವ 120 ಮೀಟರ್ ಉದ್ದದ “ಕ್ಲಾಸ್ -70 ಸೇತುವೆಯೂ ಸೇರಿದೆ. ಭಾರತ ಕಡೆಯಲ್ಲಿ ಇರುವ ದೌಲತ್ ಬೇಗ್ ಓಲ್ಡಿಯಲ್ಲಿರುವ ಹೊರಠಾಣೆಗೆ ಕ್ಷಿಪ್ರ ಸಂಪರ್ಕ ಕಲ್ಪಿಸಲು ನೆರವಾಗಲಿದೆ.
“ಸ್ವಾತಂತ್ರ್ಯಾನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ಕಡೆಗಣಿಸಲಾಯಿತು. ಇದರಿಂದಾಗಿ ಅಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಲು ಕಾರಣವಾಯಿತು. ಇದರಿಂದಾಗಿ ಅಲ್ಲಿಗೆ ಪ್ರವಾಸಿಗರು ಆಗಮಿಸುವುದನ್ನು ಕಡಿಮೆ ಮಾಡಿದರು. ಇದೇ ಅಂಶ ಲಡಾಖ್‌ನಲ್ಲೂ ಪ್ರತಿಧ್ವನಿಸಿತು. ಹೀಗಾಗಿ, ಅಲ್ಲಿಯೂ ಪ್ರವಾಸಿ ಚಟುವಟಿಕೆಗಳು ಇಳಿಮುಖವಾದವು. ಗಡಿಯಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದರಿಂದಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ಇತ್ತೀಚಿನ ದಿನಗಳಲ್ಲಿ ಹತ್ತಿಕ್ಕಲು ನೆರವಾಗಿದೆ’ ಎಂದರು.
Related Articles
ಪರಿಹಾರದ ಸಂಕೇತ:
ಗಡಿ ಪ್ರದೇಶಗಳಲ್ಲಿ 75 ಮೂಲ ಸೌಕರ್ಯ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಪಣ ತೊಟ್ಟಿದೆ ಎಂಬುದರ ಸಂಕೇತ ಎಂದು ರಕ್ಷಣಾ ಸಚಿವರು ಬಣ್ಣಿಸಿದರು. ದೂರ ಪ್ರದೇಶದಲ್ಲಿ ಇರುವ ಸ್ಥಳಗಳಿಗೆ ಸೇನಾ ವಾಹನಗಳ ಮತ್ತು ನಾಗರಿಕರ ಸಂಚಾರಕ್ಕೆ ಅನುಕೂಲವಾಗಲಿದೆ. ಪಶ್ಚಿಮ, ಉತ್ತರ, ಈಶಾನ್ಯ ಭಾಗಗಳಿಗೆ ಇದರಿಂದ ಅನುಕೂಲವಾಗಲಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಅಭಿವೃದ್ಧಿಯ ಸರಪಣಿ ಶುರುವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಇದಲ್ಲದೆ, ಲಡಾಖ್‌ನ ಹೆನ್ಲ ಗ್ರಾಮದಲ್ಲಿ ಬಾರ್ಡರ್ ರೋಡ್ ಆರ್ಗನೈಸೇಷನ್ (ಬಿಆರ್‌ಒ) ನಿರ್ಮಿಸಿದ ಕಾರ್ಬನ್ ನ್ಯೂಟ್ರಲ್ ಹ್ಯಾಬಿಟ್ಯಾಟ್ ಅನ್ನು ಕೂಡ ರಕ್ಷಣಾ ಸಚಿವರು ಉದ್ಘಾಟಿಸಿದ್ದಾರೆ. ಅದು ಸಮುದ್ರಮಟ್ಟದಿಂದ 19 ಸಾವಿರ ಅಡಿ ಎತ್ತರದಲ್ಲಿದೆ.
75- ಮೂಲಸೌಕರ್ಯ ಯೋಜನೆಗಳು
06- ರಾಜ್ಯಗಳು
ಜಮ್ಮು ಮತ್ತು ಕಾಶ್ಮೀರ 20 ಯೋಜನೆಗಳು, ಲಡಾಖ್ ಮತ್ತು ಅರುಣಾಚಲ ಪ್ರದೇಶ- ತಲಾ 18 ಯೋಜನೆಗಳು, ಉತ್ತರಾಖಂಡ- 05, ಸಿಕ್ಕಿಂ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ 14 ಯೋಜನೆಗಳು
2,180 ಕೋಟಿ ರೂ.- ಯೋಜನೆಯ ಒಟ್ಟು ಮೊತ್ತ
ಪ್ರಮುಖ ಯೋಜನೆ
– 120 ಮೀ.ಉದ್ದದ ಶಾಕ್ ಸೇತು. ಇದು ಚೀನಾ ವ್ಯಾಪ್ತಿಗೆ ಸೇರಿದ ವಾಸ್ತವಿಕ ನಿಯಂತ್ರಣ ರೇಖೆ ಸಮೀಪ ಇದೆ. ಡಾರ್ಬಕ್-ದೌಲತ್ ಬೇಗ್ ಓಲ್ಡಿ ರಸ್ತೆ ಕಾಮಗಾರಿ ಇದಾಗಿದೆ. ಸಮುದ್ರ ಮಟ್ಟದಿಂದ 14 ಸಾವಿರ ಅಡಿ ಎತ್ತರದಲ್ಲಿ ಅದನ್ನು ನಿರ್ಮಿಸಲಾಗಿದೆ.
– 02 ಹೆಲಿಪ್ಯಾಡ್. ಲಡಾಖ್‌ನ ಪೂರ್ವಭಾಗದ ಹಾನ್ಲà ಮತ್ತು ಥಾಕುಂಗ್‌ನಲ್ಲಿ ನಿರ್ಮಾಣ.