Advertisement

ಆಪ್‌ಗೆ ಹಿನ್ನಡೆ : ಶಾಸಕ ಸೋಮದತ್‌ ವಿರುದ್ಧ ಕೋರ್ಟ್‌ ವಿಚಾರಣೆ

03:48 PM May 17, 2017 | udayavani editorial |

ಹೊಸದಿಲ್ಲಿ : ಆಪ್‌ ಶಾಸಕ ಸೋಮದತ್‌ ಅವರನ್ನು 2015ರ ಅಸೆಂಬ್ಲಿ ಚುನಾವಣಾ ಪ್ರಚಾರದ ವೇಳೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಆತನನ್ನು ಅಕ್ರಮ ಬಂಧನದಲ್ಲಿ ಇರಿಸಿಕೊಂಡು, ದೊಂಬಿ ನಡೆಸಿದ್ದಕ್ಕಾಗಿ ವಿಚಾರಣೆಗೆ ಗುರಿಪಡಿಸಿದೆ. 

Advertisement

ಆಪ್‌ ಶಾಸಕ ಸೋಮದತ್‌ ತನ್ನ ಮೇಲಿನ ಆರೋಪಗಳನ್ನು ಅಲ್ಲಗಳೆದು ವಿಚಾರಣೆ ಎದುರಿಸಲು ತಾನು ಸಿದ್ಧ ಎಂದು ಕೋರ್ಟಿಗೆ ಹೇಳಿರುವುದನ್ನು ಅನುಲಕ್ಷಿಸಿ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ರೂಬಿ ನೀರಜ್‌ ಕುಮಾರ್‌ ಅವರು ಸೋಮದತ್‌ ವಿರುದ್ಧ ದೋಷಾರೋಷ ಪಟ್ಟಿಯನ್ನು ನಿರೂಪಿಸಿದರು. 

ಪ್ರಾಸಿಕ್ಯೂಶನ್‌ ಸಾಕ್ಷ್ಯದ ದಾಖಲಾತಿ ಮತ್ತು ದೂರುದಾರ ಸಂಜೀವ ರಾಣಾ ಅವರಿಗೆ ಸಮನ್ಸ್‌ ಜಾರಿ ಮಾಡಲು ನ್ಯಾಯಾಲಯವು ಈ ಪ್ರಕರಣವನ್ನು ಜುಲೈ 27ಕ್ಕೆ ನಿಗದಿಪಡಿಸಿತು. 

ಶಾಸಕ ಸೋಮದತ್‌ ಅವರು ಅಪರಾಧಿ ಎಂದು ಸಾಬೀತಾದಲ್ಲಿ ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುವುದು. 

Advertisement

Udayavani is now on Telegram. Click here to join our channel and stay updated with the latest news.

Next