Advertisement
ಹುಣಸೂರು ವಲಯದ ಭೀನಮಕಟ್ಟೆ ಸಾಕಾನೆ ಶಿಬಿರದಲ್ಲಿ ಕ್ಷಯರೋಗದಿಂದ ಮೃತಪಟ್ಟ ಬಲರಾಮ ಆನೆಯನ್ನು ಹುಣಸೂರು ವನ್ಯಜೀವಿ ವಲಯದ ಕಾರೆಕಟ್ಟೆ ಅರಣ್ಯ ಪ್ರದೇಶದಲ್ಲಿ ಪೂಜೆ, ವಿಧಿವಿಧಾನ ನೆರವೇರಿಸಿ, ಸರಕಾರಿ ಗೌರವ ಸಲ್ಲಿಸಿ, ಮೂರು ಸುತ್ತು ಕುಶಲತೋಪು ಹಾರಿಸಿದ ನಂತರ ಮಣ್ಣಿನಲ್ಲಿ ಹೂತು ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಮೈಸೂರು ಅರಸರ ಕುಟುಂಬದ ಶೃತಿ ಕೀರ್ತಿದೇವಿ ಅರಸುರವರು ಅರಮನೆಯ ಪುರೋಹಿತರೊಂದಿಗೆ ಆಗಮಿಸಿ ಶಾಸ್ತ್ರೋಕ್ತವಾಗಿ ಆನೆಗೆ ಅಂತಿಮ, ಪೂಜೆ ಮತ್ತು ವಿಧಿವಿದಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಕಾರಿ ಮಾಲತಿ ಪ್ರಿಯ, ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ, ಡಿ.ಸಿ.ಎಫ್. ಸೀಮಾಪಿ.ಎ, ಸೌರಭ್ ಕುಮಾರ್, ಶರಣ ಬಸಪ್ಪ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಎಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಕಾರಿಗಳು ಜೊತೆಗೆ ಬಲರಾಮ ಆನೆಯ ಮಾವುತ ತಿಮ್ಮ ಹಾಗೂ ಕುಟುಂಬಸ್ಥರು, ಕಾವಾಡಿ ಮಂಜುನಾಥ ಹಾಗೂ ಬಲರಾಮ ಆನೆಯನ್ನು ಹಲವುದಿನಗಳಿಂದ ಆರೈಕೆ ಮಾಡಿದ ಪಶುವೈದ್ಯರಾದ ಡಾ.ರಮೇಶ್, ಡಾ.ನಾಗರಾಜು ಹಾಗೂ ಡಾ.ಮುಜೀಬ್ ಮತ್ತಿತರರು ಹಾಜರಿದ್ದರು.