ವಾಷಿಂಗ್ ಟನ್ : ಜೋ ಬೈಡನ್ ಇತ್ತೀಚೆಗೆ ಅಮೆರಿಕಾದ ಅಧ್ಯಕ್ಷರಾದವರು. ಇವರು ಶ್ವೇತ ಭವನದಲ್ಲಿ ಎರಡು ನಾಯಿಗಳನ್ನು ಸಾಕಿದ್ದು, ಮೊನ್ನೆ ನಡೆದ ಒಂದು ಘಟನೆಯಿಂದ ಆ ಎರಡೂ ನಾಯಿಗನ್ನು ವಾಷಿಂಗ್ ಟನ್ ನಲ್ಲಿರುವ ತಮ್ಮ ಮನೆಗೆ ಕಳುಹಿಸಿದ್ದಾರಂತೆ.
ಅಮೆರಿಕಾದ ಅಧ್ಯಕ್ಷರಾಗಿರುವ ಬೈಡನ್ ಮತ್ತು ಪತ್ನಿ ಜಿಲ್ ಮೂರು ವರ್ಷದ ಜರ್ಮನ್ ಶಫರ್ಡ್ ನಾಯಿಯನ್ನು 2018ರಲ್ಲಿ ದತ್ತು ಪಡೆದಿದ್ದರು. ಈ ನಾಯಿಯನ್ನು ಬೈಡನ್ ಇಷ್ಟು ದಿನ ಶ್ವೇತ ಭವನದಲ್ಲೇ ಇರಿಸಿದ್ದರಂತೆ. ಆದ್ರೆ ಆ ‘ಮೇಜರ್’ ಹೆಸರಿನ ನಾಯಿಯು ವೈಟ್ ಹೌಸ್ ನಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿಯೊಬ್ಬರಿಗೆ ಕಚ್ಚಿದೆ. ಈ ಕಾರಣದಿಂದ ಬೈಡನ್ ನಾಯಿಯನ್ನು ತಾವು ವಾಸವಿರುವ ವಾಷಿಂಗ್ ಟನ್ ನ ಮನೆಗೆ ಕಳುಹಿಸಿದ್ದಾರೆ.
ಇನ್ನು ಕೆಲವು ವಾಹಿನಿಗಳು ವರದಿ ಮಾಡಿರುವ ಹಾಗೆ, ಮೇಜರ್ ನಾಯಿಯು ತುಂಬಾ ಜೋರಾಗಿ ವರ್ತನೆ ಮಾಡುತ್ತಿದ್ದು, ಎಗರುವುದು, ಜೋರಾಗಿ ಬೊಗಳುವುದನ್ನು ಮಾಡುತ್ತಿತ್ತಂತೆ.
ಇನ್ನು ಮೇಜರ್ ನಾಯಿಯ ಜೊತೆ ವೈಟ್ ಹೌಸ್ ನಲ್ಲಿ ಮೊತ್ತೊಂದು ನಾಯಿಯನ್ನು ಸಾಕಿದ್ದ ಬೈಡನ್ ಭದ್ರತಾ ಸಿಬ್ಬಂದಿಯನ್ನು ಕಚ್ಚಿದ ನಂತ್ರ ಎರಡೂ ನಾಯಿಗಳನ್ನು ಮನೆಗೆ ವಾಪಸ್ಸು ಕಳುಹಿಸಿದ್ದಾರೆ.
ಇನ್ನು ಜೋ ಬೈಡನ್ ಅಧ್ಯಕ್ಷರಾಗುವುದಕ್ಕಿಂತ ಮುಂಚೆ ಇದ್ದ ಡೊನಾಲ್ಡ್ ಟ್ರಂಪ್ ಯಾವುದೇ ಸಾಕು ಪ್ರಾಣಿಯನ್ನಾಗಲೀ, ನಾಯಿಯನ್ನಾಗಲೀ ಶ್ವೇತ ಭವನದಲ್ಲಿ ಸಾಕಿರಲಿಲ್ಲ.