Advertisement

ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಪಾಲನೆಯಾಗಲಿ

11:18 AM Apr 17, 2020 | Naveen |

ಬೀದರ: ವಿಸ್ತರಣೆಯಾದ ಲಾಕ್‌ಡೌನ್‌ ಆದೇಶದ ನಿಯಮಗಳನ್ನು ಜಿಲ್ಲಾದ್ಯಂತ ಮೇ 3ರ ವರೆಗೆ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ಇ.ವಿ. ರಮಣರೆಡ್ಡಿ ಹೇಳಿದರು.

Advertisement

ಕೋವಿಡ್ ವೈರಾಣು ಹರಡುವಿಕೆ ತಡೆ ಮತ್ತು ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ತಮಗೆ ಆಹಾರ ಧಾನ್ಯ, ಕಿರಾಣಿ, ತರಕಾರಿ, ಹಣ್ಣುಗಳು ಸಿಗುತ್ತಿಲ್ಲವೆಂದು ದೂರು ಬರದಂತೆ ಹಳೆಯ ಬೀದರ ಸಿಟಿನಲ್ಲಿ ಜನರಿಗೆ ಬೇಕಾದ ಎಲ್ಲ ವಸ್ತುಗಳನ್ನು ಸರಬರಾಜು ಮಾಡಲು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ವಾರ್ಡ್‌ಗೊಂದು ತಂಡ ರಚನೆ: ಓಲ್ಡ್‌ ಸಿಟಿಯಲ್ಲಿರುವ ಜನತೆಗೆ ಜೀವನಾವಶ್ಯಕ ಸಾಮಗ್ರಿ ತಲುಪಿಸಲೆಂದೇ ವಾರ್ಡ್‌ಗೊಂದು ತಂಡ ಮಾಡಿ ಕಾರ್ಯ ಪ್ರವೃತ್ತವಾಗಿದೆ. ಹಾಲು, ಮೊಸರು ಸರಬರಾಜಿಗೂ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ತಿಳಿಸಿದರು.

ಬೇರೆ ಬೇರೆ ವಸ್ತುಗಳನ್ನು ತಲುಪಿಸಲು ಓಲ್ಡ್‌ ಸಿಟಿಗೆ ಬೆಳಗ್ಗೆ ಮೂರು ಮಧ್ಯಾಹ್ನ ಮೂರು ವಾಹನಗಳು ಹೋಗುತ್ತಿವೆ ಎಂದು ಎಸಿ ಅಕ್ಷಯ್‌ ಶ್ರೀಧರ್‌ ಮಾಹಿತಿ ನೀಡಿದರು. ಜಿಲ್ಲಾಡಳಿತದ ನಿರ್ದೇಶನದಂತೆ ಓಲ್ಡ್‌ ಸಿಟಿನಲ್ಲಿ ನಿಯಮಿತವಾಗಿ ತರಕಾರಿ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಎಂಸಿ ಕಮಿಷನರ್‌ ಬಸಪ್ಪ ತಿಳಿಸಿದರು.

ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲಿ ಎಪಿಎಂಸಿ ಚಟುವಟಿಕೆ ನಡೆಸಲು ಎಲ್ಲ ತಹಶೀಲ್ದಾರರು ವ್ಯವಸ್ಥೆ ಮಾಡಬೇಕು. ಎಪಿಎಂಸಿ ಕಾರ್ಯದರ್ಶಿ ಅವರು ಇದರ ಮೇಲುಸ್ತುವಾರಿ ವಹಿಸಬೇಕು. ಸಣ್ಣ ಘಟನೆಯಾದರೂ ತಮ್ಮ ಇಲ್ಲವೇ ಎಸ್ಪಿ ಗಮನಕ್ಕೆ ತರಬೇಕು. ಎಪಿಎಂಸಿ ಸರಿಯಾಗಿ ನಡೆದರೆ ರೈತರು ಮತ್ತು ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದು ಡಿಸಿ ಸೂಚಿಸಿದರು.

Advertisement

ರೈತರಿಗೆ ಮಾತ್ರ ಅನುಕೂಲ ಕಲ್ಪಿಸಿ: ಪೊಲೀಸ್‌ ದೌರ್ಜನ್ಯ ನಡೆಯುತ್ತಿದೆ ಎಂದು ಯಾವ ರೈತರಿಂದಲೂ ದೂರು ಬರದಂತೆ ಪೊಲೀಸ್‌ ಅಧಿಕಾರಿಗಳು ರೈತರೊಂದಿಗೆ ಸರಿಯಾಗಿ ವರ್ತಿಸಬೇಕು. ಅನವಶ್ಯಕವಾಗಿ ಲಾಠಿ ಬೀಸಬಾರದು. ಆಹಾರ ಧಾನ್ಯ, ಹಣ್ಣುಗಳು, ತರಕಾರಿ ಮತ್ತು ಮೇವು ಸರಬರಾಜು ವಾಹನಗಳಿಗೆ ಅಡ್ಡಿಪಡಿಸದೇ ಸಂಚರಿಸಲು ಅವಕಾಶ ಕಲ್ಪಿಸಬೇಕು ಎಂದು ಎಸ್‌ಪಿ ಡಿ.ಎಲ್‌. ನಾಗೇಶ ಜಿಲ್ಲೆಯ ಎಲ್ಲ ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಾಸಾಶನ ನಿಯಮಿತ ತಲುಪಿಸಿ: ಎಲ್ಲ ಫಲಾನುಭವಿಗಳಿಗೆ ವೃದ್ಧಾಪ್ಯ, ವಿಧವಾ, ವಿಕಲಚೇತನ, ಮನಸ್ವಿನಿ, ಮೈತ್ರಿ ಸೇರಿದಂತೆ ಎಲ್ಲ ಮಾಸಾಶನಗಳು ಸರಿಯಾದ ವೇಳೆಗೆ ತಲುಪುತ್ತಿದೆಯೋ ಇಲ್ಲವೋ ಎಂಬುದರ ಬಗ್ಗೆ ಎಲ್ಲ ತಹಶೀಲ್ದಾರರು ಗಮನ ಹರಿಸಬೇಕು ಎಂದು ಡಿಸಿ ಎಲ್ಲ ತಹಶೀಲ್ದಾರ್‌ ಗೆ ಸೂಚಿಸಿದರು. ಈ ವೇಳೆ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಡಿಸಿ ರುದ್ರೇಶ ಗಾಳಿ, ಎಸಿ ಅಕ್ಷಯ್‌ ಶ್ರೀಧರ್‌, ಡಿಎಚ್‌ಒ ಡಾ| ವಿ.ಜಿ. ರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next