Advertisement

ಬೀದರನಲ್ಲಿ ಉತ್ತಮ ಪ್ರತಿಕ್ರಿಯೆ

05:31 PM Jul 06, 2020 | Naveen |

ಬೀದರ: ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚುತ್ತ ತಲ್ಲಣ ಮೂಡಿಸಿರುವ ಕೋವಿಡ್ ಸೋಂಕು ನಿಯಂತ್ರಣ ಹಿನ್ನೆಲೆ ರಾಜ್ಯ ಸರ್ಕಾರ ಕರೆ ನೀಡಿದ್ದ ರವಿವಾರ ಒಂದು ದಿನದ ಲಾಕ್‌ ಡೌನ್‌ಗೆ ಗಡಿ ನಾಡು ಬೀದರ ನಗರ ಸೇರಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಅದೇಶಿಸಿದ್ದು, ಈ ಹಿನ್ನೆಲೆಯಲ್ಲಿ ರವಿವಾರ ಜಿಲ್ಲೆಯಲ್ಲಿ ಸಂಚಾರ, ವ್ಯಾಪಾರೋದ್ಯಮ ಸಂಪೂರ್ಣ ಬಂದ್‌ ಆಗಿತ್ತು. ಈಗಾಗಲೇ ಕೋವಿಡ್‌-19 ವೈರಸ್‌ ಭೀತಿಯಿಂದ ಮನೆಯಲ್ಲಿ ಇರುತ್ತಿರುವ ಜನ ಲಾಕ್‌ಡೌನ್‌ ಕಾರಣ ಹೊರಗೆ ಬರಲೇ ಇಲ್ಲ. ಹಾಗಾಗಿ ರಸ್ತೆಯಲ್ಲಿ ಬೆರಳಣಿಕೆಯಷ್ಟು ಜನರ ಓಡಾಟ ಮಾತ್ರ ಕಂಡುಬಂತು. ಇದರಿಂದ ಇಲ್ಲಿನ ಅಂಬೇಡ್ಕರ್‌ ವೃತ್ತ, ಶಿವಾಜಿ ವೃತ್ತ, ಮಡಿವಾಳ ವೃತ್ತ, ನಾಂದೇಡ ರಸ್ತೆ ಸೇರಿ ಪ್ರಮುಖ ವೃತ್ತ, ರಸ್ತೆಗಳಲ್ಲಿ ಜನ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದವು.

ಬೀದರ ನಗರ ಮಾತ್ರವಲ್ಲದೇ ಬಸವಕಲ್ಯಾಣ, ಹುಮನಾಬಾದ, ಭಾಲ್ಕಿ ಮತ್ತು ಔರಾದ ಸೇರಿದಂತೆ ಜಿಲ್ಲಾದ್ಯಂತ ಬಹುತೇಕ ಬಂದ್‌ ಆಗಿತ್ತು. ದೇವಸ್ಥಾನಗಳ ಬಾಗಿಲುಗಳು ಮುಚ್ಚಲಾಗಿದ್ದರೆ, ಸಾರಿಗೆ ಸಂಚಾರ ಸಹ ಬಹುತೇಕ ಸ್ತಬ್ದಗೊಳಿಸಲಾಗಿತ್ತು. ಇದರಿಂದ ಎಲ್ಲೆಡೆ ಅಘೋಷಿತ ಬಂದ್‌ ವಾತಾವರಣ ಏರ್ಪಟ್ಟಿತ್ತು. ಹಣ್ಣು-ತರಕಾರಿ, ಕಿರಾಣಾ ಮತ್ತು ಮೆಡಿಕಲ್‌ ಸೇರಿ ಅವಶ್ಯಕ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿದ್ದವು. ಸಾರಿಗೆ ಬಸ್‌ಗಳ ಕಾರ್ಯಾಚರಣೆಯೂ ಸಹ ಸ್ಥಗಿತಗೊಳಿಸಲಾಗಿತ್ತು. ಲಾಕ್‌ ಡೌನ್‌ ಹಿನ್ನೆಲೆ ಜನರ ನಿಯಂತ್ರಣ ಮತ್ತು ಬಂದೋಬಸ್ತ್ಗಾಗಿ ಅಗತ್ಯ ಪೊಲೀಸ್‌ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next