Advertisement
ಲಾಕ್‌ಡೌನ್ ಆರಂಭದಲ್ಲಿ ಒಂದೂ ಪಾಸಿಟಿವ್ ಪ್ರಕರಣಗಳಿಲ್ಲದೇ ಜಿಲ್ಲೆಯ ಜನತೆ ನೆಮ್ಮದಿಯಿಂದ ಇದ್ದರು. ಆದರೆ ಕಳೆದ ವಾರ ಒಂದೇ ದಿನ 10 ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜನರಲ್ಲಿ ಭೀತಿ ಆವರಿಸಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ರಾಜ್ಯದ 18 ಜಿಲ್ಲೆಗಳಲ್ಲಿ ಬೀದರ ಸಹ ಒಂದಾಗಿದ್ದರಿಂದ “ಸೀಲ್ ಡೌನ್’ ಜಾರಿಗೆ ಸರ್ಕಾರ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಆದರೆ, ಲಾಕ್‌ಡೌನ್ ದಿಂದ ಸಂಕಷ್ಟಕ್ಕೀಡಾಗಿರುವ ಜನರಿಗಾಗಿ ಘೋಷಿಸಿರುವ ಸೌಲಭ್ಯಗಳನ್ನು ಸಮರ್ಪಕ ಜಾರಿಗೊಳಿಸುವಲ್ಲಿ ಮಾತ್ರ ಎಡವುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಆಹಾರದ ಕೊರತೆಯಾಗದಂತೆ ಸರ್ಕಾರ ಉಚಿತ ಆಹಾರ ವಿತರಣೆ ಯೋಜನೆ ಜಾರಿಗೊಳಿಸಿ ಐದು ದಿನಗಳಲ್ಲಿ ಫಲಾನುಭವಿಗಳಿಗೆ ಆಹಾರ ಧಾನ್ಯ ಪೊರೈಸುವ ಭರವಸೆ ನೀಡಿತ್ತು. ಆದರೆ10 ದಿನ ಕಳೆದರೂ ಈವರೆಗೆ ಅರ್ಧದಷ್ಟು ಫಲಾನುಭವಿಗಳಿಗೂ ಆಹಾರ ತಲುಪಿಲ್ಲ. ಸಂದಿಗ್ಧ ಸ್ಥಿತಿಯಲ್ಲೂ ಕೆಲವು ಕಡೆಗಳಲ್ಲಿ ಬಡವರಿಗೆ ಕೈಸೇರಬೇಕಾದ ಪಡಿತರ ಧಾನ್ಯಕ್ಕೂ ಕನ್ನ ಹಾಕುತ್ತಿರುವ, ಹಣ ಪಡೆಯುತ್ತಿರುವ ಮತ್ತು ಹಳ್ಳಿಗಳಲ್ಲಿ ಉಚಿತ ಅಕ್ಕಿ, ಗೋ ದಿ ಜತೆಗೆ ಸೋಪು, ಎಣ್ಣೆ ಖರೀದಿ ಮಾಡುವಂತೆ ಹಣ ಸುಲಿಯುತ್ತಿರುವ ಪ್ರಕರಣಗಳು ಕೇಳಿ ಬರುತ್ತಿವೆ.
ಹಾಲು ಮುಟ್ಟಿಸು ತ್ತಿದ್ದು, ಕೆಲವೆಡೆ ಮಾತ್ರ ಅರ್ಹರಿಗೆ ಹಾಲು ವಿತರಣೆಯಾಗುತ್ತಿದೆ. ಈ ವೇಳೆ ಜನಗುಂಗುಳಿ ಸೇರುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಆತಂಕ ಹೆಚ್ಚಿಸುತ್ತಿದೆ. ಜಿಲ್ಲೆಯಲ್ಲಿ ನಿತ್ಯ ಐದು ಸಾವಿರ ಲೀಟರ್ ಹಾಲು (10 ಸಾವಿರ ಪ್ಯಾಕೇಟ್) ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಅದರಲ್ಲಿ ಬೀದರ ನಗರಸಭೆ ವ್ಯಾಪ್ತಿಯಲ್ಲಿ 2500 ಪ್ಯಾಕೇಟ್, ಬಸವಕಲ್ಯಾಣ ನಗರಸಭೆ 1750 ಪ್ಯಾಕೇಟ್, ಹುಮನಾಬಾದ ಪುರಸಭೆ ಎರಡು ಸಾವಿರ ಪ್ಯಾಕೇಟ್, ಭಾಲ್ಕಿ ಪುರಸಭೆ ಒಂದು ಸಾವಿರ ಪ್ಯಾಕೇಟ್, ಚಿಟಗುಪ್ಪ 1120 ಪ್ಯಾಕೇಟ್, ಔರಾದ ಪಟ್ಟಣ ಪಂಚಾಯತ್‌ಗೆ 250 ಪ್ಯಾಕೇಟ್ ಗಳನ್ನು ವಿತರಿಸಲಾಗುತ್ತಿದೆ.
Related Articles
ಜಿಲ್ಲಾ ಆಸ್ಪತ್ರೆ ಹಳೆ ಕಟ್ಟಡವನ್ನು ಕೋವಿಡ್ -19 ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮದೊಂದಿಗೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ 10 ಸೋಂಕಿತರಿಗೆ ಕಳೆದೊಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿದೆ. ರೋಗಗಳ ಉಪಚಾರಕ್ಕೆ ಅಗತ್ಯ ಚಿಕಿತ್ಸಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆದರೆ, ಈವರೆಗೆ ಗುಣಮಟ್ಟದ ಪಿಪಿಇ ಕಿಟ್‌ಗಳನ್ನು ಮಾತ್ರ ಪೂರೈಕೆಯಾಗಿಲ್ಲ ಎನ್ನುವ ಆರೋಪ ಇದೆ. ವಾರ್ಡ್‌ಗಳಲ್ಲಿ ಆರೋಗ್ಯ ಇಲಾಖೆ ಮಾರ್ಗದರ್ಶಿ ನಿಯಮಗಳಂತೆ ಪಾಲನೆ ಮಾಡಲಾಗುತ್ತಿದ್ದು, ನರ್ಸಿಂಗ್ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಶಂಕಿತ ಮತ್ತು ಸೋಂಕಿತ ಪ್ರಥಮ ಸಂಪರ್ಕ ಹೊಂದಿದವರಿಗೆ ಇಲ್ಲಿನ ಓಲ್ಡ್ ಸಿಟಿಯ ನೂರು ಹಾಸಿಗೆ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.
Advertisement
ಲಾಕ್‌ಡೌನ್‌ದಿಂದ ಹಣ್ಣುಗಳು ಮಣ್ಣು ಪಾಲುಲಾಕ್ಡೌನ್ದಿಂದ ತರಕಾರಿ ಮತ್ತು ಹಣ್ಣು ವ್ಯಾಪಾರಿಗಳು ಎರಡ್ಮೂರು ಪಟ್ಟು ಹೆಚ್ಚು ದರಕ್ಕೆ ಮಾರಾಟ ಮಾಡಿ ಜನರ ಜೇಬಿಗೆ ಕತ್ತರಿ ಹಾಕುವುದಕ್ಕೆ ಈಗ ಆಡಳಿತ ಬ್ರೇಕ್ ಹಾಕಿದೆ. ಶುಕ್ರವಾರ ನಗರದಲ್ಲಿ ತೋಟಗಾರಿಕೆ ಇಲಾಖೆಯಿಂದ ನಿಗದಿತ ದರದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ತರಕಾರಿ, ಹಣ್ಣು ಮಾರಾಟಕ್ಕೆ ವಿತರಣೆ ಮೊಬೈಲ್ ವಾಹನಗಳಿಗೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ತಾಲೂಕು ಕೇಂದ್ರಗಳಲ್ಲಿಯೂ ಯೋಜನೆ ಜಾರಿಗೊಳಿಸಲು ಚಿಂತನೆ ನಡೆದಿದೆ. ಆದರೆ, ನಗರದಲ್ಲಿ ಗ್ರಾಹಕರಿಗೆ ನೇರವಾಗಿ ಮಾರಾಟಕ್ಕೆ ಅವಕಾಶ ಇದ್ದರೂ ರೈತರಿಗೆ ತಮ್ಮ ಜಮೀನಿನಲ್ಲಿ ಬೆಳೆದ ಹಣ್ಣು- ತರಕಾರಿಯನ್ನು ನಗರಕ್ಕೆ ತರಲು ಸಾಗಣೆ ವ್ಯವಸ್ಥೆ ಇಲ್ಲದಂತಾಗಿದೆ. ಇದರಿಂದ ಫಸಲು ಮಣ್ಣು ಪಾಲಾಗುತ್ತಿದೆ. ಶಶಿಕಾಂತ ಬಂಬುಳಗೆ