Advertisement

ಪುಷ್ಪಾರ್ಚನೆ, ಚಪ್ಪಾಳೆ ತಟ್ಟಿ ಮಕ್ಕಳಿಗೆ ಸ್ವಾಗತ

03:19 PM Jan 02, 2021 | Team Udayavani |

ಬೀದರ: ಕೋವಿಡ್‌-19 ವೈರಸ್‌ನಿಂದಾಗಿ ಗಡಿ ಜಿಲ್ಲೆ ಬೀದರನಲ್ಲಿಯೂ ಕಳೆದ ಕೆಲವು ತಿಂಗಳಿಂದ ಮುಚ್ಚಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯು ದ್ವಿತೀಯ ವರ್ಷದ ಕೊಠಡಿ ಬಾಗಿಲುಗಳು ಸಕಲ ಮುಂಜಾಗ್ರತಾ ಕ್ರಮಗಳೊಂದಿಗೆ ಶುಕ್ರವಾರ ತೆರೆದಿದ್ದು, ಬೋಧನಾ ಚಟುವಟಿಕೆಗಳು ಆರಂಭಗೊಂಡಿವೆ. ಆತಂಕದ ನಡುವೆಯೇವಿದ್ಯಾರ್ಥಿಗಳು ಶಾಲಾ- ಕಾಲೇಜಿನತ್ತ ಹೆಜ್ಜೆ ಹಾಕಿದ್ದಾರೆ.

Advertisement

ರಾಜ್ಯದಲ್ಲಿ ಕೋವಿಡ್  ವೈರಸ್‌ ನಿಯಂತ್ರಣ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಕಾರ್ಯಾರಂಭಕ್ಕೆ ಸರ್ಕಾರ ಮುಂದಾಗಿದ್ದು,ಆರಂಭಿಕ ಹಂತದಲ್ಲಿ 10ನೇ ಮತ್ತು ದ್ವಿತೀಯಪಿಯುಸಿ ತರಗತಿ ಸುರಕ್ಷತಾ ಕ್ರಮಗಳೊಂದಿಗೆಶುರು ಮಾಡಲು ಮಾರ್ಗಸೂಚಿ ಪ್ರಕಟಿಸಿದೆಮೊದಲ ದಿನ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆಯೂ ದೊರಕಿದೆ.

ಇನ್ನೂ ಹಲವು ತಿಂಗಳ ಬಳಿಕ ಶಾಲೆ ಆರಂಭ ಹಿನ್ನೆಲೆ ಕಲರವ ಹೆಚ್ಚಿತ್ತು. ಶಾಲೆಗಳಲ್ಲಿಸ್ಯಾನಿಟೈಸರ್‌ ಸಿಂಪಡಣೆ ಜತೆಗೆ ತೋರಣ ಕಟ್ಟಿ, ರಂಗೋಲಿ ಬಿಡಿಸಿ ವಿಭಿನ್ನವಾಗಿ ಮಕ್ಕಳನ್ನುಬರಮಾಡಿಕೊಳ್ಳಲಾಯಿತು. ಕೆಲವೆಡೆಪುಷ್ಪಾರ್ಚನೆ ಮತ್ತು ಚಪ್ಪಾಳೆ ತಟ್ಟುವ ಮೂಲಕಮಕ್ಕಳನ್ನು ಸ್ವಾಗತಿಸಿರುವುದು ವಿಶೇಷವಾಗಿತ್ತು.ಮಾಸ್ಕ್ ಧರಿಸಿದ್ದ ಮಕ್ಕಳು ಶಾಲೆಗೆ ಬಂದಕೂಡಲೇ ಸ್ಯಾನಿಟೈಸ್‌ ಬಳಕೆ ಮಾಡಿದರು. ಸಾಮಾಜಿಕ ಅಂತರದಲ್ಲಿ ಕುಳಿತು ಪಾಠ ಆಲಿಸಿದರು. ಶಾಲಾ ಆವರಣದಲ್ಲಿ ವಿದ್ಯಾಗಮನಡೆದರೆ, ಶಾಲೆಯೊಳಗೆ ಸಾಮಾಜಿಕ ಅಂತರದಡಿಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪಾಠಗಳು ನಿರ್ವಿಘ್ನವಾಗಿ ಜರುಗಿದವು.

ಸರ್ಕಾರದ ಆದೇಶದಂತೆ ಪಾಲಕರ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬರಬೇಕೆಂದುವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಸುಮಾರು 10ತಿಂಗಳ ಬಳಿಕ ತರಗತಿಗಳು ಶುರುವಾದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಸಂತಸ ಮನೆ ಮಾಡಿತ್ತು.

ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಆಗಬೇಕಾದರೆ ಮಕ್ಕಳು ಮತ್ತವಿದ್ಯಾರ್ಥಿಗಳ ನಡುವೆ ಸಂಪರ್ಕ ಬಹಳ ಮುಖ್ಯ. ಆದರೆ, ಕೋವಿಡ್‌ನಿಂದಾಗಿ ಕಳೆದಕೆಲ ತಿಂಗಳಿಂದ ಇಬ್ಬರ ನಡುವೆ ಅಂತರ ಆಗಿತ್ತು. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆ ಆರಂಭಿಸಿರುವ ಸರ್ಕಾರದ ನಿರ್ಣಯಸರಿಯಾಗಿದೆ. ಸಾಕಷ್ಟು ಮುಂಜಾಗ್ರತೆ ಕ್ರಮ ವಹಿಸಲಾಗಿದೆ. ಬಸವರಾಜ ಬಿರಾದಾರ, ಶಿಕ್ಷಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next